ETV Bharat / entertainment

ಮುದ್ದಾದ ಮಗಳೊಂದಿಗೆ ವೀಕೆಂಡ್ ಎಂಜಾಯ್​ ಮಾಡಿದ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ - ಗಾಯಕ ನಿಕ್ ಜೋನಾಸ್

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಾರಾಂತ್ಯದ ಮೋಜಿನಲ್ಲಿ ಮಗಳು ಮಾಲ್ತಿಯೊಂದಿಗೆ ಬ್ಯುಸಿಯಾಗಿದ್ದಾರೆ.

Priyanka Chopra weekend with daughter Malti Marie chopra Jonas
ಮುದ್ದಾದ ಮಗಳೊಂದಿಗೆ ವೀಕೆಂಡ್ ಎಂಜಾಯ್​ ಮಾಡಿದ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ
author img

By

Published : Aug 28, 2022, 1:17 PM IST

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಗಾಯಕ ನಿಕ್ ಜೋನಾಸ್ ದಂಪತಿ ತಮ್ಮ ಮುದ್ದಾದ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್‌ಳ ಚಿತ್ರವನ್ನು ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿ ಅಭಿಮಾನಿಗಳ ಕಾಯುವಿಕೆಯನ್ನು ದೂರಗೊಳಿಸಿದ್ದರು. ಇದೀಗ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋದಲ್ಲಿ ಸೋನಮ್ ಕಪೂರ್-ಅಭಿಷೇಕ್ ಬಚ್ಚನ್ ಅವರ ಚಿತ್ರ ದೆಹಲಿ 6ನ ಸಸುರಾಲ್ ಗೆಂಡಾ ಫೂಲ್ ಹಾಡನ್ನು (Sasural Genda Phool) ನಾವು ಕೇಳಬಹುದು. ಈ ಸುಂದರ ವಿಡಿಯೋದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಮಗಳು ಮಾಲ್ತಿ ಸಂಗೀತವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಅವರ ಹಾಡಿನ ಪ್ರತೀ ಪದಗಳಿಗೂ ಮಗು ತಲೆದೂಗುತ್ತಿತ್ತು. ಶನಿವಾರ ಮುಂಜಾನೆಯ ಸಮಯ ಹೀಗಿತ್ತು ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಮಗುವನ್ನು ಹಿಡಿದು ತೆಗೆದ ಸೆಲ್ಫಿ ಫೋಟೋವನ್ನೂ ಹಂಚಿಕೊಂಡಿದ್ದು, ಬಹಳ ಸುಂದರವಾಗಿದೆ ಎಂದು ನೆಟಿಜೆನ್​ಗಳು ಕಾಂಪ್ಲಿಮೆಂಟ್ಸ್​​ ಕೊಡುತ್ತಿದ್ದಾರೆ.

ಪ್ರಿಯಾಂಕಾ ಮತ್ತು ನಿಕ್ ಜೋನಾಸ್ 2018ರ ಡಿಸೆಂಬರ್ 1 ಮತ್ತು 2 ರಂದು ಜೋಧ್‌ಪುರದ ಉಮೈದ್ ಭವನ್ ಅರಮನೆಯಲ್ಲಿ ಕ್ರಿಶ್ಚಿಯನ್ ಮತ್ತು ಹಿಂದೂ ಸಮಾರಂಭದಲ್ಲಿ ವಿವಾಹವಾಗಿದ್ದರು. ನಂತರ ದಂಪತಿ ದೆಹಲಿ ಮತ್ತು ಮುಂಬೈನಲ್ಲಿ ಆರತಕ್ಷತೆ ಸಮಾರಂಭ ಆಯೋಜಿಸಿದ್ದರು. 2022ರ ಜನವರಿಯಲ್ಲಿ ಮಾಲ್ತಿ ಮೇರಿ ಚೋಪ್ರಾ ಜೋನಾಸ್‌ಳನ್ನು ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿದರು.

ಇದನ್ನೂ ಓದಿ: ಮುದ್ದಾದ ಮಗಳ ಫೋಟೋ ಹಂಚಿಕೊಂಡ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ

ಕೆಲ ದಿನಗಳ ಹಿಂದೆ ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ದಂಪತಿ ಮೊದಲ ಬಾರಿಗೆ ಮಗಳ ಫೋಟೋ ಶೇರ್​ ಮಾಡಿದ್ದರು. ಅದರಲ್ಲಿ, ಮಾಲ್ತಿಯ ಟೀ ಶರ್ಟ್ ಮೇಲೆ 'ದೇಸಿ ಗರ್ಲ್' ಎಂದು ಬರೆಯಲಾಗಿತ್ತು. ಈ ಚಿತ್ರಕ್ಕೆ'ದೇಸಿ ಗರ್ಲ್' ಎಂಬ ಶೀರ್ಷಿಕೆ ಕೊಟ್ಟಿದ್ದರು. ಚಿತ್ರದಲ್ಲಿ ಮಾಲ್ತಿಯ ಮುಖ ಅರ್ಧದಷ್ಟು ಮಾತ್ರ ಗೋಚರಿಸಿತ್ತು. ಪುಟ್ಟ ಮಗುವಿನ ಫೋಟೋ ಸಖತ್ ಕ್ಯೂಟ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.