ETV Bharat / entertainment

'ಮಾಲ್ತಿ ಮೇರಿ ಮೊದಲ ಈಸ್ಟರ್​': ಮಗಳ ಜೊತೆಗಿನ ಫೋಟೋ ಹಂಚಿಕೊಂಡ ಪ್ರಿಯಾಂಕಾ - ಈಟಿವಿ ಭಾರತ ಕನ್ನಡ

ಪ್ರಿಯಾಂಕಾ ಚೋಪ್ರಾ ಮಗಳು ಮಾಲ್ತಿ ಜೊತೆಗಿನ ಈಸ್ಟರ್​ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Priyanka Chopra
ಪ್ರಿಯಾಂಕಾ ಚೋಪ್ರಾ ಮಗಳು ಮಾಲ್ತಿ
author img

By

Published : Apr 10, 2023, 5:30 PM IST

ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಮಗಳು ಮಾಲ್ತಿ ಜೊತೆಗಿನ ಈಸ್ಟರ್​ ಆಚರಣೆಯ ಹಲವು ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಈಸ್ಟರ್​ ಸಂಡೇ' ಎಂದು ಸಿಂಪಲ್​ ಕ್ಯಾಪ್ಶನ್​ ಬರೆದುಕೊಂಡಿದ್ದಾರೆ. ಚಿತ್ರಗಳಲ್ಲಿ 'ಮಾಲ್ತಿ ಮೇರಿ ಮೊದಲ ಈಸ್ಟರ್​' ಎಂದು ಬರೆದುಕೊಂಡಿರುವ ಟಿ - ಶರ್ಟ್​ ಧರಿಸಿರುವ ಪುಟ್ಟ ಕಂದ ಈಸ್ಟರ್​ ಎಗ್​ಗಳೊಂದಿಗೆ ಆಟ ಆಡುವುದನ್ನು ಕಾಣಬಹುದು.

ಮೊದಲ ಫೋಟೋದಲ್ಲಿ ಮಾಲ್ತಿ ಕೈಯಲ್ಲಿ ಈಸ್ಟರ್​ ಎಗ್ಸ್​ ಹಿಡಿದು ಪ್ರಿಯಾಂಕಾ ಜೊತೆ ಕ್ಯಾಮರಾಗೆ ಪೋಸ್​ ಕೊಡುವುದನ್ನು ಕಾಣಬಹುದು. ಮತ್ತೊಂದು ಚಿತ್ರದಲ್ಲಿ ಅಮ್ಮ ಮಗಳು ಇಬ್ಬರು ಒಂದೇ ರೀತಿಯ ಹಸಿರು ಬಣ್ಣದ ಉಡುಪು ಧರಿಸಿ ಕನ್ನಡಿ ಎದುರು ಸೆಲ್ಫಿ ಕ್ಕಿಕ್ಕಿಸಿಕೊಂಡದನ್ನು ನೋಡಬಹುದು. ಇನ್ನೊಂದು ಫೋಟೋದಲ್ಲಿ ಮಾಲ್ತಿ ಚಾಕೊಲೇಟ್​ ​ ಎಗ್​ ಟಾಯ್ಸ್​ ಕೈಯಲ್ಲಿ ಹಿಡಿದು ಆಟ ಆಡುತ್ತಾ ಅದನ್ನು ತಿನ್ನಲು ಪ್ರಯತ್ನಿಸುತ್ತಿದ್ದಾಳೆ. ಕೊನೆಯ ಚಿತ್ರದಲ್ಲಿ ಪುಟ್ಟ ಕಂದ ತಮ್ಮ ಮನೆಯ ಪಾಂಡ ಮತ್ತು ಜಿನೋ ಹೆಸರಿನ ನಾಯಿಗಳೊಂದಿಗೆ ಲಾನ್​ನಲ್ಲಿ ಆಟ ಆಡುತ್ತಿರುವುನ್ನು ಕಾಣಬಹುದು.

ನಟಿ ಹೊಸ ಪಿಕ್ಚರ್​ಗಳನ್ನು ಅಪ್ಲೋಡ್​​​ ಮಾಡುತ್ತಿದ್ದಂತೆ ಪ್ಯಾನ್ಸ್​ ಬಗೆ ಬಗೆಯ ಬರಹಗಳು ಮತ್ತು ಎಮೋಜಿನೊಂದಿಗೆ ಕಮೆಂಟ್​ ವಿಭಾಗವನ್ನು ತುಂಬಿದರು. ನೆಟ್ಟಿಗರೊಬ್ಬರು, "ತಾಯಿಯಂತೆ ಮುದ್ದಾದ ಮಗು" ಎಂದು ಹೇಳಿದ್ದಾರೆ. ಮತ್ತೊಬ್ಬರು, "ಈಸ್ಟರ್​ ಸಂಡೇ ಬೇಬಿ ಮಾಲ್ತಿ" ಎಂದು ಶುಭಹಾರೈಸಿದ್ದಾರೆ. ಇನ್ನೊಬ್ಬರು, "ಮಾಲ್ತಿ ಕಂದ ಆಕೆಯ ತಂದೆ ನಿಕ್​ ಜೋನಾಸ್​ ಪಡಿಯಚ್ಚು. ಒಳ್ಳೆಯದಾಗಲಿ ಬೇಬಿ" ಎಂದು ಕಮೆಂಟ್​ ಮಾಡಿದ್ದಾರೆ. ಈಸ್ಟರ್​ ದಿನದಂದು ಪ್ರಿಯಾಂಕಾ ತಮ್ಮ ಮಗಳು ಮಾಲ್ತಿಯ ಫೋಟೋವನ್ನು ಶೇರ್​ ಮಾಡಿ, ಅಭಿಮಾನಿಗಳಿಗೆ ಈಸ್ಟರ್​ ಶುಭಾಶಯವನ್ನು ತಿಳಿಸಿದ್ದರು.

ಇದನ್ನೂ ಓದಿ: ಆ ಕಹಿ ಘಟನೆಗಳನ್ನು ಹಂಚಿಕೊಂಡ ನಟಿ.. ಪ್ರೀತಿ ಜಿಂಟಾ ಬೆಂಬಲಕ್ಕೆ ನಿಂತ ಬಾಲಿವುಡ್​ ಸ್ಟಾರ್ಸ್​

ಮಗಳೊಂದಿಗೆ ಸಿದ್ದಿವಿನಾಯಕನ ದರ್ಶನ: ಪ್ರಿಯಾಂಕಾ ಚೋಪ್ರಾ ಪುತ್ರಿ ಮಾಲ್ತಿ ಜೊತೆಗೆ ಮುಂಬೈನ ಸಿದ್ದಿವಿನಾಯಕ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದ್ದರು. ಅವರು ದೇವಸ್ಥಾನದಲ್ಲಿ ಮಗಳಿಗೆ ಗಣಪನ ದರ್ಶನ ಮಾಡಿಸಿದ್ದರು. ಈ ಫೋಟೋಗಳನ್ನು ಪ್ರಿಯಾಂಕಾ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. "ಮಗಳ ಜೊತೆಗೆ ಭಾರತದ ಪ್ರವಾಸ ಸಿದ್ದಿವಿನಾಯಕನ ದರ್ಶನದಿಂದ ಪೂರ್ಣಗೊಂಡಿದೆ" ಎಂದು ಕ್ಯಾಪ್ಶನ್​ ಬರೆದುಕೊಂಡಿದ್ದರು. ಗಣೇಶನ ಸನ್ನಿಧಾನಕ್ಕೆ ಭೇಟಿ ನೀಡಿದ ಮೂರು ಚಿತ್ರಗಳನ್ನು ಅವರು ಪೋಸ್ಟ್​ ಮಾಡಿದ್ದರು.

ಪ್ರಿಯಾಂಕಾ ತಮ್ಮ ಪತಿ ನಿಕ್​ ಜೋನಾಸ್​ ಮತ್ತು ಪುತ್ರಿ ಮಾಲ್ತಿ ಮೇರಿ ಜೊತೆಗೆ ಮಾರ್ಚ್ 31 ರಂದು ಭಾರತಕ್ಕೆ ಆಗಮಿಸಿದ್ದಾರೆ. 2022ರ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಸ್ವಾಗತಿಸಿದ ನಂತರ ಪುತ್ರಿ ಜೊತೆಗೆ ನಿಕ್ ಮತ್ತು ಪ್ರಿಯಾಂಕಾ ಅವರು ಮೊದಲ ಬಾರಿಗೆ ಭಾರತಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಬಾರಿ ಈಸ್ಟರ್​ ಆಚರಣೆಯನ್ನು ಇಂಡಿಯಾದಲ್ಲಿ ಆಚರಿಸಿದ್ದಾರೆ.

ಇದನ್ನೂ ಓದಿ: ಈಸ್ಟರ್‌ಗೆ ಶುಭ ಕೋರಿ ಜೈಲಿನಿಂದಲೇ ಜಾಕ್ವೆಲಿನ್‌ಗೆ ಪ್ರೇಮ ಪತ್ರ ಬರೆದ ಸುಕೇಶ್ ಚಂದ್ರಶೇಖರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.