ಹೈದರಾಬಾದ್: ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ಅಪರೂಪದ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಸಿನಿಮಾಗಳಲ್ಲಿ ಸ್ವಲ್ಪ ಕಡಿಮೆ ಕಾಣಿಸಿಕೊಳ್ಳುವ ಪಿಗ್ಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಮುತುವರ್ಜಿ ವಹಿಸುತ್ತಾರೆ ಅನ್ನೋದಕ್ಕೆ ಇದೊಂದು ಸಾಕ್ಷಿ. ಅಮೆರಿಕದ ಸೊಸೆಯಾಗಿದ್ದರು ಭಾರತದ ಸಂಸ್ಕೃತಿ ಹಾಗೂ ತನ್ನವರನ್ನು ಆಗಾಗಾ ನೆನಪು ಮಾಡಿಕೊಳ್ಳುತ್ತಿರುತ್ತಾರೆ ಅನ್ನೋದಕ್ಕೆ ಈ ಬಾಲ್ಯದ ಫೋಟೋ ಕೈಗನ್ನಡಿಯಾಗಿದೆ.

ಪ್ರಿಯಾಂಕಾ ಚೋಪ್ರಾ ಅವರ ತಂದೆ ದಿವಂಗತ ಅಶೋಕ್ ಚೋಪ್ರಾ ಅವರೊಂದಿಗೆ ತಮ್ಮ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದಾರೆ. ತಂದೆಯ ಕೈತೋಳಿನ ಮೇಲೆ ಕುಳಿತುಕೊಂಡಿರುವ ಫೋಟೋ ಇದಾಗಿದೆ. ಫೋಟೋ ನೋಡಿದ ಹಲವರು ಇದು ಪ್ರಿಯಾಂಕಾ ಚೋಪ್ರಾನಾ ಎಂದು ಆಶ್ಚರ್ಯದಿಂದ ಪ್ರಶ್ನೆ ಮಾಡುವಂತಿದೆ. ಅಷ್ಟು ಗುರುತಿಸದಷ್ಟು ಬಾಲ್ಯದ ಫೋಟೋ ಇದಾಗಿದೆ.

10 ಗಂಟೆಗಳಲ್ಲಿ ಮೂರು ಪೋಸ್ಟ್‌ಗಳನ್ನು ಮಾಡಿರುವ ಪ್ರಿಯಾಂಕಾ ಅವುಗಳಿಗೆ ಆಕರ್ಷಕ ಇಂಗ್ಲಿಷ್ ಗಾದೆಗಳ ಶೀರ್ಷಿಕೆ ಹಾಕಿದ್ದಾರೆ. ಸದ್ಯ ಅವರ ಫೋಟೋಗಳು ಈಗ ವೈರಲ್ ಆಗುತ್ತಿವೆ. ಪ್ರಿಯಾಂಕಾ ಕೂದಲು ಇಲ್ಲದ ಕೆಂಪು-ಬಿಳಿ ಮಿಶ್ರಿತ ಕಾಂಟ್ರಾಸ್ಟ್‌ನಲ್ಲಿ ಫ್ರಾಕ್ ಬಟ್ಟೆಯಲ್ಲಿ ಕಾಣಿಸಿಕೊಂಡರೆ ಅವರ ತಂದೆ ಅಶೋಕ್ ಚೋಪ್ರಾ ಬಿಳಿ ಬಣ್ಣದ ಕುರ್ತಾ ಧರಿಸಿದ್ದಾರೆ. ಈ ಚಿತ್ರವನ್ನು ಹಂಚಿಕೊಂಡಿರುವ ಪಿಗ್ಗಿ 'ಅಪ್ಪನ ಪುಟ್ಟ ಹುಡುಗಿ' ಎಂದು ಬರೆದುಕೊಂಡಿದ್ದಾರೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಅಶೋಕ್ ಚೋಪ್ರಾ ತಮಗೆ ಮಾರಣಾಂತಿಕ ರೋಗ ಕಾಣಿಸಿಕೊಂಡಿದೆ ಎಂದು ಗೊತ್ತಾದ ಬಳಿಕ ತುಂಬಾ ನೊಂದುಕೊಂಡಿದ್ದರು. ಅದರ ಹೋರಾಟ ಮಾಡುತ್ತಾ 10 ಜೂನ್ 2013 ರಂದು ನಿಧನರಾದರು. ಇನ್ನು ಅವರ ಮತ್ತೊಂದು ಪೋಸ್ಟ್‌ನಲ್ಲಿ ಪ್ರಿಯಾಂಕಾ ತಮ್ಮ ಕೂಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋದಲ್ಲಿ ತನ್ನ ಸುರುಳಿಯಾಕಾರದ ಕೂದಲನ್ನು ತೋರಿಸುತ್ತಿರುವುದನ್ನು ಕಾಣಬಹುದು.

ಪ್ರಿಯಾಂಕಾ ಸದ್ಯ ಹಾಲಿವುಡ್ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿಟಾಡೆಲ್ ಎನ್ನುವ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ರಿಚರ್ಡ್ ಮ್ಯಾಡೆನ್ ಸಹ ನಟಿಸಿದ್ದಾರೆ. ಕೊನೆಯದಾಗಿ ಅವರು ವೈಟ್ ಟೈಗರ್ ಎಂಬ ಸಿನಿಮಾ ಮೂಲಕ ಭಾರತೀಯ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಫರ್ಹಾನ್ ಅಖ್ತರ್ ಅವರ ಜೀ ಲೆ ಜರಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.