ETV Bharat / entertainment

114 ದಿನಗಳಲ್ಲೇ ಸಲಾರ್​ ಚಿತ್ರೀಕರಣ ಮುಗಿಸಿದ್ದೇವೆ: ಆಸಕ್ತಿ ವಿಷಯಗಳನ್ನು ಹಂಚಿಕೊಂಡ ಪ್ರಶಾಂತ್​ ನೀಲ್​ - ಸಲಾರ್ ಚಿತ್ರದ ಟ್ರೈಲರ್

ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಎಂಬ ಆ್ಯಕ್ಷನ್​ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿರುವುದು ಗೊತ್ತಿರುವ ಸಂಗತಿ. ಇತ್ತೀಚೆಗಷ್ಟೇ ನಿರ್ದೇಶಕರು ಇದಕ್ಕೆ ಸಂಬಂಧಿಸಿದ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

Prashanth neel shares update  prabhas salaar movie  Prashanth neel news  ಸಲಾರ್​ ಚಿತ್ರೀಕರಣ ಮುಗಿಸಿದ್ದೇವೆ  ಆಸಕ್ತಿ ವಿಷಯಗಳನ್ನು ಹಂಚಿಕೊಂಡ ಪ್ರಶಾಂತ್​ ನೀಲ್​ ಪ್ರಶಾಂತ್ ನೀಲ್ ನಿರ್ದೇಶನ  ಆಕ್ಷನ್ ಸಿನಿಮಾದಲ್ಲಿ ಪ್ರಭಾಸ್  ಕಾತರದಿಂದ ಕಾಯುತ್ತಿದ್ದ ಸಲಾರ್ ಚಿತ್ರ  ಸಲಾರ್ ಚಿತ್ರದ ಟ್ರೈಲರ್  ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್
114 ದಿನಗಳಲ್ಲೇ ಸಲಾರ್​ ಚಿತ್ರೀಕರಣ ಮುಗಿಸಿದ್ದೇವೆ
author img

By ETV Bharat Karnataka Team

Published : Dec 2, 2023, 3:48 PM IST

ಹೈದರಾಬಾದ್​: ಸಿನಿ ಪ್ರೇಮಿಗಳೆಲ್ಲ ಕಾತರದಿಂದ ಕಾಯುತ್ತಿದ್ದ ಸಲಾರ್ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಪ್ರೇಕ್ಷಕರ ಮುಂದೆ ಬಂದಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ದಾಖಲೆ ವೀಕ್ಷಣೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ. ಪ್ರಭಾಸ್ ಆ್ಯಕ್ಷನ್ ಬಗ್ಗೆ ಪ್ರಶಾಂತ್ ನೀಲ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಇತ್ತೀಚೆಗಷ್ಟೇ ನಿರ್ದೇಶಕರು ಈ ಚಿತ್ರದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ನಾನು 15 ವರ್ಷಗಳ ಹಿಂದೆ "ಸಲಾರ್" ಕಥೆಯನ್ನು ಯೋಚಿಸಿದ್ದೆ. ಆದರೆ, ನನ್ನ ಮೊದಲ ಸಿನಿಮಾ ‘ಉಗ್ರಂ’ ಮಾಡಿದ ನಂತರ ‘ಕೆಜಿಎಫ್’ ಪ್ರಾಜೆಕ್ಟ್ ಶುರು ಮಾಡಿದೆ. ಎರಡೂ ಭಾಗಗಳನ್ನು ಪೂರ್ಣಗೊಳಿಸಲು 8 ವರ್ಷಗಳನ್ನು ತೆಗೆದುಕೊಂಡಿತು. ಆ ನಂತರ ‘ಸಲಾರ್’ ಕೆಲಸ ಶುರು ಮಾಡಿದೆವು. ಬಹುತೇಕ ಚಿತ್ರೀಕರಣ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮುಗಿದಿದೆ. ಸಿಂಗರೇಣಿ ಗಣಿ, ದಕ್ಷಿಣ ಬಂದರು ಮತ್ತು ವೈಜಾಗ್ ಬಂದರುಗಳಲ್ಲಿ ನಾವು ಕೆಲವು ಚಿತ್ರೀಕರಣವನ್ನು ನಡೆಸಿದ್ದೇವೆ. ಯುರೋಪ್​ನಲ್ಲೂ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ. 114 ದಿನಗಳಲ್ಲಿ ಇಡೀ ಚಿತ್ರವನ್ನು ಮುಗಿಸಿದ್ದೇವೆ ಎಂದರು. ಸದ್ಯದಲ್ಲೇ ‘ಸಲಾರ್’ ಎರಡನೇ ಭಾಗದ ಕೆಲಸವೂ ಆರಂಭವಾಗಲಿದೆ ಎಂದು ಪ್ರಶಾಂತ್​ ನೀಲ್ ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ.

ಭಾರಿ ಬಜೆಟ್‌ನಲ್ಲಿ ಈ ಸಾಹಸಮಯ ಚಿತ್ರ ತಯಾರಾಗುತ್ತಿದ್ದು, ಡಿಸೆಂಬರ್ 22 ರಂದು ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟ್ರೇಲರ್‌ನಿಂದ ನಿರೀಕ್ಷೆ ದುಪ್ಪಟ್ಟಾಗಿದೆ. ಬದ್ಧ ವೈರಿಗಳಾಗುವ ಇಬ್ಬರು ಗೆಳೆಯರ ಕಥಾವಸ್ತುವಿನೊಂದಿಗೆ 'ಸಲಾರ್' ಎರಡು ಭಾಗಗಳಲ್ಲಿ ಮೂಡಿ ಬರುತ್ತಿದೆ. ಪ್ರಭಾಸ್​ಗೆ ನಾಯಕಿಯಾಗಿ ಕಮಲ್​ ಹಾಸನ್​ ಮಗಳು ಶ್ರುತಿ ಹಾಸನ್ ನಟಿಸುತ್ತಿದ್ದರೆ, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರು ಪ್ರಭಾಸ್​ನ ಪ್ರಾಣ ಸ್ನೇಹಿತನಾಗಿ ಕಾಣಿಸಿಕೊಳ್ಳಲಿದ್ದಾರೆ. ಟಿನು ಆನಂದ್, ಜಗಪತಿ ಬಾಬು, ಈಶ್ವರಿ ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಟ್ರೈಲರ್​ ಬಿಡುಗಡೆ: ರೆಬಲ್​ ಸ್ಟಾರ್ ಪ್ರಭಾಸ್ ನಾಯಕನಾಗಿ ನಟಿಸಿರುವ ಸಲಾರ್​ ಪ್ಯಾನ್ ಇಂಡಿಯಾ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿರುವುದು ಗೊತ್ತೇ ಇದೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಇದೇ ತಿಂಗಳ 22ರಂದು 'ಸಲಾರ್ ಪಾರ್ಟ್-1: ಸೀಜ್ ಫೈರ್' ಹೆಸರಿನೊಂದಿಗೆ ಮೊದಲ ಭಾಗ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಭಾರಿ ಸದ್ದು ಮಾಡುತ್ತಿದೆ. ಈ ಟ್ರೈಲರ್ ಸಂಪೂರ್ಣ ಆ್ಯಕ್ಷನ್ ಥ್ರಿಲ್ಲರ್​ನಿಂದ ಕೂಡಿದೆ.

ಓದಿ: 'ಉಗ್ರಂ' ಸಿನಿಮಾ ಕಥೆಯಂತಿದೆ 'ಸಲಾರ್' ಟ್ರೇಲರ್ ಎಂದ ಪ್ರೇಕ್ಷಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.