ಪ್ರಿಮಿಯರ್ ಪದ್ಮಿನಿ ಹಾಗೂ ರತ್ನನ್ ಪ್ರಪಂಚದ ಚಲನಚಿತ್ರದಲ್ಲಿ ಉತ್ತಮ ನಾಯಕನಾಗಿ ಪ್ರಮೋದ್ ಅಭಿನಯಿಸಿ, ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆದಿದ್ದರು. ರತ್ನನ್ ಪ್ರಪಂಚದಲ್ಲಿ ಉಡಾಳ್ ಬಾಬು ಪಾತ್ರದಿಂದ ಬಹುಖ್ಯಾತಿ ಗಳಿಸಿದ್ದ ಪ್ರಮೋದ್ 'ಬಾಂಡ್ ರವಿ'ಯಾಗಿ ಈಗ ಹೊಸ ಅವತಾರ ತಾಳಿದ್ದಾರೆ. ಪ್ರಮೋದ್ ಸಿನಿ ಕೆರಿಯರ್ ನಲ್ಲಿಯೇ ಬಹು ನಿರೀಕ್ಷಿತ ಚಿತ್ರ ಇದಾಗಿದೆ. ಮಾಸ್ ಟೀಸರ್ ಹಾಗೂ ಉತ್ತಮ ಹಾಡುಗಳೊಂದಿಗೆ ಹೆಚ್ಚು ರೆಸ್ಪಾನ್ಸ್ ಪಡೆದಿರುವ ಈ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ.
ಲವ್ ಸ್ಟೋರಿ ಚಿತ್ರ: ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದಿಂದ ಸ್ಯಾಂಡಲ್ವುಡ್ ಗೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದ ಪ್ರಮೋದ್ ‘ಮತ್ತೆ ಉದ್ಭವ', ‘ಪ್ರೀಮಿಯರ್ ಪದ್ಮಿನಿ' ಹಾಗೂ ‘ರತ್ನನ್ ಪ್ರಪಂಚ’ ಸಿನಿಮಾಗಳಲ್ಲಿ ಅಭಿನಯಿಸಿ ನಿರೀಕ್ಷೆಯ ನಟನಾಗಿ ಹೊರಹೊಮ್ಮಿದ್ದರು. ಸದ್ಯ ಬಾಂಡ್ ರವಿ ಮೂಲಕ ಮಾಸ್ ಹೀರೋ ಆಗಿ ಮಿಂಚಲು ಸಜ್ಜಾಗಿದ್ದಾರೆ. ಆ್ಯಕ್ಷನ್ ಲವ್ ಸ್ಟೋರಿ ಒಳಗೊಂಡ ಈ ಚಿತ್ರಕ್ಕೆ ಪ್ರಜ್ವಲ್ ಎಸ್ಪಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರೇಕ್ಷಕರಲ್ಲಿ ಬಹಳ ನಿರೀಕ್ಷೆ ಮೂಡಿಸಿದೆ.
ಹಾಡು ಬಿಡುಗಡೆ ಗುಣಗಾನ : ಈಗಾಗಲೇ ಈ ಚಿತ್ರದ ಎರಡು ಹಾಡುಗಳು ಬಿಡುಗಡೆಗೊಂಡು ಕೇಳುಗರ ಗಮನ ಸೆಳೆದಿವೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯದ ವಿಜಯ ಪ್ರಕಾಶ್ ದನಿಯಲ್ಲಿ ಮಜ ಮಜ ಮಾಡು ಬಾ’, ಜಯಂತ್ ಕಾಯ್ಕಿಣಿ ಸಾಹಿತ್ಯದ ಸೋನು ನಿಗಂ ದನಿಯಾಗಿರುವ ರೋಮ್ಯಾಂಟಿಕ್ ಸಾಂಗ್ ‘ಸಹಜ ಸಖಿ’ ಹಾಡುಗಳು ಬಿಡುಗಡೆಯಾಗಿ ಕೇಳುಗರ ಮನಗೆದ್ದಿವೆ.
ಬಾಂಡ್ ರವಿ ಡಿಸೆಂಬರ್ 9ಕ್ಕೆ ಬಿಡುಗಡೆ: ನರಸಿಂಹಮೂರ್ತಿ ವಿ ಲೈಫ್ ಲೈನ್ ಫಿಲಂ ಬ್ಯಾನರ್ ಅಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣ ಚಿತ್ರಕ್ಕಿದೆ. ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ, ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಚಿತ್ರದ ತಾರಾ ಬಳಗದಲ್ಲಿದ್ದಾರೆ.
ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನೀಲ್ ಮತ್ತು ದೇವ್ ಎನ್. ರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಸದ್ಯ ಟೈಟಲ್ ನಿಂದ ಸದ್ದು ಮಾಡುತ್ತಿರೋ 'ಬಾಂಡ್ ರವಿ ಸಿನಿಮಾ ಡಿಸೆಂಬರ್ 9ರಂದು ಪ್ರೇಕ್ಷಕರನ್ನು ರಂಜಿಸಲು ಚಿತ್ರಮಂದಿರಕ್ಕೆ ಎಂಟ್ರಿ ಕೊಡ್ತಿದ್ದಾರೆ.
ಇದನ್ನೂಓದಿ:ಹಿಂದಿ ಚಿತ್ರಗಳು ಪ್ರಗತಿಪರ, ಮತ್ತಷ್ಟು ಶಕ್ತಿಯುತವಾಗಿ ಉದ್ಯಮಕ್ಕೆ ಮರಳುತ್ತೇವೆ: ಕಾಜೋಲ್