ETV Bharat / entertainment

ಪ್ರಜ್ವಲ್ ದೇವರಾಜ್ ಅಭಿನಯದ 'ಗಣ' ಚಿತ್ರೀಕರಣ ಮುಕ್ತಾಯ - prajwal devraj next movie

ವಿಭಿನ್ನ ಕಥಾಹಂದರ ಹೊಂದಿರುವ 'ಗಣ' ಚಿತ್ರೀಕರಣ ಮುಕ್ತಾಯಗೊಂಡಿದೆ.

gana movie shooting completed
ಗಣ ಚಿತ್ರೀಕರಣ ಮುಕ್ತಾಯ
author img

By

Published : Dec 3, 2022, 5:39 PM IST

ಸ್ಯಾಂಡಲ್​ವುಡ್​ನಲ್ಲಿ ಹಲವು ಚಿತ್ರಗಳ‌ ಮೂಲಕ ಹೆಸರು ಮಾಡಿರುವ ನಟ ಪ್ರಜ್ವಲ್ ದೇವರಾಜ್.‌ ಮಾಫಿಯಾ ಸಿನಿಮಾ ಮಧ್ಯೆ ಪ್ರಜ್ವಲ್ ದೇವರಾಜ್ 'ಗಣ' ಎಂಬ ಹೆಸರಿನ ಸಿನಿಮಾ ಶೂಟಿಂಗ್‌ ಮುಗಿಸಿದ್ದಾರೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ ಶಿವಕುಮಾರ್ ಅವರು ಪ್ರಜ್ವಲ್ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಇವರ ಜೊತೆ ವಿಶಾಲ್ ಹೆಗ್ಡೆ, ವೇದಿಕಾ ಕುಮಾರ್, ಶಿವರಾಜ್ ಕೆ.ಆರ್ ಪೇಟೆ, ಕ್ರಿಷಿ ತಾಪಂಡ, ಸಂಪತ್ ರಾಜ್, ರವಿ ಕಾಳೆ, ರಮೇಶ್ ಭಟ್, ಉಮೇಶ್, ಸಿದ್ಲಿಂಗು ಶ್ರೀಧರ್, ಬಾಬು ಹಿರಣ್ಣಯ್ಯ ಹಾಗೂ ಮಾಸ್ಟರ್ ರಘುನಂದನ್ ಅಭಿನಯಿಸಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ 80 ದಿನಗಳ ಕಾಲ ಗಣ ಚಿತ್ರೀಕರಣ ನಡೆದಿದೆ. ಡಿಸೆಂಬರ್ 10ರಿಂದ ಚಿತ್ರೀಕರಣ ನಂತರದ ಚಟುವಟಿಕೆಗಳು ಆರಂಭವಾಗಲಿದೆ.

gana movie shooting completed
ಗಣ ಚಿತ್ರೀಕರಣ ಮುಕ್ತಾಯ

ಈ ಚಿತ್ರವನ್ನು ಹರಿಪ್ರಸಾದ್ ಜಕ್ಕ ನಿರ್ದೇಶನ ಮಾಡಿದ್ದಾರೆ. ಅನೂಪ್ ಸಂಗೀತ ಸಂಯೋಜಿಸಿರುವ ನಾಲ್ಕು ಸುಮಧುರ ಹಾಡುಗಳು ಈ ಚಿತ್ರದಲ್ಲಿದೆ. ನಾಲ್ಕು ಮೈನವಿರೇಳಿಸುವ ಸಾಹಸ ದೃಶ್ಯಗಳು ಚಿತ್ರದಲ್ಲಿದ್ದು, ಅರ್ಜುನ್, ಮಾಸ್ ಮಾದ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ.

ಜೈ ಆನಂದ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ "ಗಣ" ಚಿತ್ರಕ್ಕಿದೆ. ಚೆರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ಅವರು ಸಿನಿಮಾವನ್ನು ನಿರ್ಮಿಸಿದ್ದಾರೆ. ಶ್ರೀನಿವಾಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ವಸಿಷ್ಠ ಸಿಂಹ - ಹರಿಪ್ರಿಯಾ ನಿಶ್ಚಿತಾರ್ಥ... ಫೋಟೋಗಳು ವೈರಲ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.