ETV Bharat / entertainment

ಪ್ರಜ್ವಲ್​ ಅಭಿನಯದ 'ಮಾಫಿಯಾ' ಶೂಟಿಂಗ್​ ಮುಕ್ತಾಯ

author img

By

Published : Apr 2, 2023, 11:52 AM IST

ಪ್ರಜ್ವಲ್​ ದೇವರಾಜ್​ ನಟಿಸಿರುವ 'ಮಾಫಿಯಾ' ಚಿತ್ರದ ಶೂಟಿಂಗ್​ ಪೂರ್ಣಗೊಂಡಿದೆ.

mafia
ಮಾಫಿಯಾ

'ಮಾಫಿಯಾ'. ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಸೌಂಡ್​ ಮಾಡುತ್ತಿರುವ ಹೊಸ ಸಿನಿಮಾ. ಪೋಸ್ಟರ್​ನಿಂದ ಮೆಚ್ಚುಗೆ ಗಳಿಸಿರುವ ಚಿತ್ರದ ಶೂಟಿಂಗ್​ ಇದೀಗ ಮುಕ್ತಾಯಗೊಂಡಿದೆ. ಆ್ಯಕ್ಷನ್​ ಥ್ರಿಲ್ಲರ್​ ಕಥೆ ಹೊಂದಿದ್ದು, ಡೈನಾಮಿಕ್​ ಪ್ರಿನ್ಸ್​ ಪ್ರಜ್ವಲ್​ ದೇವರಾಜ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

ಇದು ಪ್ರಜ್ವಲ್ ನಟನೆಯ 35 ನೇ ಚಿತ್ರವೂ ಹೌದು. ಹೀಗಾಗಿ ಅಭಿಮಾನಿಗಳಲ್ಲಿ ಮಾಫಿಯಾ ಬಗೆಗಿನ ಕುತೂಹಲವಿದೆ.​ ಶೀಘ್ರದಲ್ಲೇ ಸಿನಿಮಾ ತೆರೆ ಕಾಣಲಿದೆ.

ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಅಪ್​ಡೇಟ್​ ನೀಡಿರುವ ನಿರ್ಮಾಪಕ ಕುಮಾರ್​ ಬಿ, "ಹೆಚ್ಚು ಸಾಹಸ ಸನ್ನಿವೇಶಗಳನ್ನು ಒಳಗೊಂಡ ಮಾಫಿಯಾ ಚಿತ್ರದ ಶೂಟಿಂಗ್​ ಯಶಸ್ವಿಯಾಗಿ ಮುಗಿದಿದೆ. ನನ್ನ ಇಡೀ ತಂಡಕ್ಕೆ ಧನ್ಯವಾದಗಳು" ಎಂದು ಕ್ಯಾಪ್ಶನ್​ ಬರೆದುಕೊಂಡು ಮಾಫಿಯಾ ತಂಡದ ಫೋಟೋ ಶೇರ್​ ಮಾಡಿದ್ದಾರೆ. ಇದೇ ಚಿತ್ರವನ್ನು ಪ್ರಜ್ವಲ್​ ದೇವರಾಜ್​ ಕೂಡ ಪೋಸ್ಟ್ ಮಾಡಿದ್ದಾರೆ.

ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಗೆಟಪ್​ನಲ್ಲಿ ಪ್ರಜ್ವಲ್​ 'ಮಾಫಿಯಾ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರು, ಮೈಸೂರು ಮತ್ತು ಹೈದರಾಬಾದ್​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಶೂಟಿಂಗ್​ ಮಾಡಲಾಗಿದೆ. ಪೊಲೀಸ್​ ಪಾತ್ರ ನಿರ್ವಹಿಸಿರುವ ಪ್ರಜ್ವಲ್​ಗೆ ಸ್ಯಾಂಡಲ್​ವುಡ್ ಬ್ಯೂಟಿ ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ.

ಇದನ್ನೂ ಓದಿ: ಎರಡೇ ದಿನದಲ್ಲಿ 53 ಕೋಟಿ ಬಾಚಿದ 'ದಸರಾ': ನಾನಿ ರಗಡ್​ ಲುಕ್​ಗೆ ಫ್ಯಾನ್ಸ್​ ಫಿದಾ

ಚಿತ್ರವನ್ನು ಲೋಹಿತ್​ ಹೆಚ್​ ನಿರ್ದೇಶನ ಮಾಡುತ್ತಿದ್ದು, ಎಸ್. ಪಾಂಡಿಕುಮಾರ್ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ತಾರಾಬಳಗದಲ್ಲಿ ದೇವರಾಜ್, ಸಾಧುಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಸೇರಿದಂತೆ ಮುಂತಾದವರಿದ್ದಾರೆ.​ ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ. ಚಿತ್ರ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: ಶಿವಾಜಿ ಸುರತ್ಕಲ್ 2 ಟ್ರೇಲರ್ ರಿಲೀಸ್: ಹೆಚ್ಚಿದ ಕುತೂಹಲ, ಏ.14ಕ್ಕೆ ಸಿನಿಮಾ ತೆರೆಗೆ

ಪ್ರಜ್ವಲ್​ ದೇವರಾಜ್​ ಅಭಿನಯದ 'ವೀರಂ' ಚಿತ್ರ ಇದೇ ಏಪ್ರಿಲ್​ 7 ರಂದು ಬಿಡುಗಡೆಯಾಗಲಿದೆ. ಡಾ.ವಿಷ್ಣುವರ್ಧನ್​ ಅಭಿಮಾನಿ ಪಾತ್ರದ ಕಥೆಯುಳ್ಳ ಸಿನಿಮಾ ಇದಾಗಿದೆ. ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಇದ್ದಾರೆ. ಚಿತ್ರದಲ್ಲಿ ದೀಪಕ್​ ನೆಗೆಟಿವ್​ ರೋಲ್​ನಲ್ಲಿ ಅಭಿನಯಿಸಿದ್ದಾರೆ. ನಟಿ ಶೃತಿ ಮೊದಲ ಬಾರಿಗೆ ಪ್ರಜ್ವಲ್​ ದೇವರಾಜ್​ಗೆ ಅಕ್ಕನಾಗಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್​ ನಾಯಕಿಯಾಗಿದ್ದಾರೆ.

ವೀರಂ ಚಿತ್ರಕ್ಕೆ ಅನೂಪ ಸೀಳನ್ ಅವರ ಸಂಗೀತ ಸಂಯೋಜನೆ, ಲವಿತ್ ಛಾಯಗ್ರಹಣ ಇದೆ. ಬಲ ರಾಜವಾಡಿ, ಅಚ್ಯುತ್‌ಕುಮಾರ್, ಸ್ವಾತಿ, ಮೈಕೋ ನಾಗರಾಜ್, ಪ್ರಶಾಂತ್ ನಟನಾ, ಹನುಮಂತೇಗೌಡ ಅಲ್ಲದೆ ನಿರ್ದೇಶಕರಾದ ಜೋಸೈಮನ್, ವಿ.ನಾಗೇಂದ್ರಪ್ರಸಾದ್ ಹೀಗೆ ಬಹುದೊಡ್ಡ ತಾರಾಗಣವೇ ಇದೆ.

ಇದನ್ನೂ ಓದಿ: 'ಯಶ್​ ಸಿನಿಮಾ ಅಪ್​ಡೇಟ್​ ನೀಡಿಲ್ಲಾಂದ್ರೆ ಸ್ಟ್ರೈಕ್​': ರಾಧಿಕಾಗೆ ಫ್ಯಾನ್ಸ್​ ಆವಾಜ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.