ETV Bharat / entertainment

ನಾಟು ನಾಟು ಕ್ರೇಜ್: RC15 ಶೂಟಿಂಗ್​ ಸೆಟ್​​ ಮರಳಿದ ರಾಮ್​ ಚರಣ್​ ಜೊತೆ ಕುಣಿದು ಕುಪ್ಪಳಿಸಿದ ಪ್ರಭುದೇವ ಟೀಂ - ಪ್ರಭುದೇವ ನಾಟು ನಾಟು ಡ್ಯಾನ್ಸ್

RC15 ಶೂಟಿಂಗ್​ ಸೆಟ್​ಗೆ ಮರಳಿದ ರಾಮ್​ ಚರಣ್​ ಅವರಿಗೆ ಪ್ರಭುದೇವ ಟೀಂ ದೊಡ್ಡ ಸರ್​ಪ್ರೈಸ್​ ಕೊಟ್ಟಿದೆ.

Prabhudeva surprises Ram Charan on RC15 set
ರಾಮ್​ ಚರಣ್​ ಜೊತೆ ಕುಣಿದು ಕುಪ್ಪಳಿಸಿದ ಪ್ರಭುದೇವ ಟೀಂ
author img

By

Published : Mar 19, 2023, 3:52 PM IST

Updated : Mar 19, 2023, 4:05 PM IST

ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ 95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ ನಂತರ ಆರ್‌ಆರ್‌ಆರ್ ಸ್ಟಾರ್ ರಾಮ್ ಚರಣ್ ಜಗತ್ತಿನಾದ್ಯಂತ ವಿಶೇಷ ಮನ್ನಣೆ ಪಡೆದಿದ್ದಾರೆ. ಆಸ್ಕರ್ ಸಮಾರಂಭ ಮುಗಿಸಿ ಬಂದಿರುವ ನಟ ರಾಮ್ ಚರಣ್ ಈಗ ನಿರ್ದೇಶಕ ಶಂಕರ್ ಅವರೊಂದಿಗೆ ಆರ್‌ಸಿ 15 (ತಾತ್ಕಾಲಿಕ ಶೀರ್ಷಿಕೆ) ಚಿತ್ರೀಕರಣಕ್ಕೆ ಮರಳಿದ್ದಾರೆ. ನಟ ರಾಮ್​ ಚರಣ್​​ RC 15 ಶೂಟಿಂಗ್​​ ಸೆಟ್‌ಗೆ ಮರಳಿದಾಗ ನಟ, ನೃತ್ಯ ನಿರ್ದೇಶಕ ಪ್ರಭುದೇವ ಮತ್ತು ಅವರ ತಂಡವು ಆರ್​ಆರ್​ಆರ್​ ನಟನಿಗೆ ದೊಡ್ಡ ಸರ್ಪೈಸ್ ಕೊಟ್ಟಿದೆ.

ಪ್ರಭುದೇವ ನಾಟು ನಾಟು ಡ್ಯಾನ್ಸ್: ಇಂದು ನಟ ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ RC15 ಶೂಟಿಂಗ್​ ಸೆಟ್​​ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪ್ರಭುದೇವ ಮತ್ತು RC15 ತಂಡದ ಸುಮಾರು 100 ಸದಸ್ಯರು ನಾಟು ನಾಟು ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ.

ರಾಮ್ ಚರಣ್ ಹೀಗಂದ್ರು.. ವಿಡಿಯೋ ಹಂಚಿಕೊಂಡ ನಟ ರಾಮ್ ಚರಣ್, ಆರ್‌ಸಿ 15ರ ಸಂಪೂರ್ಣ ತಂಡಕ್ಕೆ ಮತ್ತು ಪ್ರಭುದೇವ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇಂತಹ ಆತ್ಮೀಯ ಸ್ವಾಗತಕ್ಕಾಗಿ ನಿಮ್ಮೆಲ್ಲರಿಗೂ ಕೇವಲ ಧನ್ಯವಾದ ಅರ್ಪಿಸಿದರೆ ಅದು ಸಾಕಾಗುವುದಿಲ್ಲ. ನಮ್ಮ ಗ್ರ್ಯಾಂಡ್ ಮಾಸ್ಟರ್ ಪ್ರಭುದೇವ ಸರ್, ಸಿಹಿ ಸರ್​ಪ್ರೈಸ್​ಗೆ ದೊಡ್ಡ ಧನ್ಯವಾದಗಳು. ಆರ್‌ಸಿ 15 ಶೂಟಿಂಗ್​ ಸೆಟ್​ಗೆ ಮರಳಿರುವುದು ಅದ್ಭುತ ಅನುಭವ ಕೊಟ್ಟಿದೆ ಎಂದು ರಾಮ್​ಚರನ್​ ಬರೆದಿದ್ದಾರೆ.

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ದಿಲ್ ರಾಜು ಮತ್ತು ಸಿರಿಶ್ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ. ರಾಮ್​ ಚರಣ್​ ಜೊತೆ ಕಿಯಾರಾ ಅಡ್ವಾಣಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಲನಚಿತ್ರವನ್ನು 2021ರ ಫೆಬ್ರವರಿಯಲ್ಲಿ ಘೋಷಿಸಲಾಯಿತು. ಅಕ್ಟೋಬರ್​ನಲ್ಲಿ ಶೂಟಿಂಗ್​​ ಪ್ರಾರಂಭಿಸಲಾಯಿತು. ರಾಮ್ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ಎಸ್ ಜೆ ಸೂರ್ಯ, ಜಯರಾಮ್, ಸುನೀಲ್, ಶ್ರೀಕಾಂತ್ ಮತ್ತು ನವೀನ್ ಚಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: 'ನನ್ನ ಬಹುದಿನದ ಕನಸು ನನಸಾಗ್ತಿದೆ': ಜೂ. NTR ಜೊತೆ ನಟನೆಗೆ ಜಾನ್ವಿ ಕಪೂರ್​ ಸಂತಸ

ಆರ್​ಆರ್​ಆರ್​ ನಟ ರಾಮ್ ಚರಣ್ ಅಮೆರಿಕದಿಂದ ಶುಕ್ರವಾರ ದೇಶಕ್ಕೆ ಮರಳಿದರು. ಅಂದು ದೆಹಲಿಯಲ್ಲಿ ಸಂಪೂರ್ಣ ದಿನ ಕಳೆದರು. ತಂದೆ, ನಟ ಚಿರಂಜೀವಿ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿ ಮಾಡಿ ಸನ್ಮಾನ ಸ್ವೀಕರಿಸಿದ್ದರು. ಇತರೆ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು. ಶುಕ್ರವಾರ ಮಧ್ಯರಾತ್ರಿ ಹೈದರಾಬಾದ್ ವಾಪಸ್ಸಾದರು. ಅಭಿಮಾನಿಗಳಿಂದ ಅವರಿಗೆ ಆತ್ಮೀಯ, ಅದ್ಧೂರಿ ಸ್ವಾಗತ ಸಿಕ್ಕಿತ್ತು.

ಇದನ್ನೂ ಓದಿ: ಹಾಲಿವುಡ್​ ಸಿನಿಮಾದಲ್ಲಿ ರಾಮ್ ಚರಣ್.. ನೆಪೋಟಿಸಂ ಬಗ್ಗೆ RRR ಸ್ಟಾರ್ ಹೀಗಂದ್ರು

ಇನ್ನು ನಟ ಕೆಲ ಸಂದರ್ಶನಗಳಲ್ಲಿ ಆರ್​ಆರ್​ಆರ್​ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ನೆಪೋಟಿಸಂ ಬಗ್ಗೆಯೂ ಮಾತನಾಡಿದ್ದಾರೆ. ಈ ಸ್ವಜನಪಕ್ಷಪಾತ ಕುರಿತು ಹೆಚ್ಚು ಚರ್ಚೆ ಆಗುತ್ತದೆ. ಆದ್ರೆ ಆ ಬಗ್ಗೆ ನನಗಿನ್ನೂ ಸರಿಯಾಗಿ ಏನೂ ಅರ್ಥ ಆಗಿಲ್ಲ. ಪ್ರತಿಭೆ ಇಲ್ಲದಿದ್ದರೆ ಚಿತ್ರೋದ್ಯಮದಲ್ಲಿ ಹೆಚ್ಚು ಸಮಯ ಉಳಿಯಲು ಸಾಧ್ಯವಿಲ್ಲ. ನನಗೆ ಇಷ್ಟವಾದ ಕೆಲಸ ಮಾಡಿದ್ದರಿಂದ 14 ವರ್ಷ ಇಲ್ಲಿ ನಿಲ್ಲಲು ಸಾಧ್ಯವಾಗಿದೆ. ನಟನ ಮಗನಾಗಿ ಸಿನಿಮಾ ಇಂಡಸ್ಟ್ರಿಗೆ ಬಂದರೂ ಕೂಡ ನನ್ನ ಪ್ರಯಾಣ ನಾನೇ ಮುಂದುವರಿಸಿದ್ದೇನೆ ಎಂದು ತಿಳಿಸಿದ್ದರು.

Last Updated : Mar 19, 2023, 4:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.