ETV Bharat / entertainment

Prabhu Deva ಮನೆಗೆ ಲಕ್ಷ್ಮಿ: 50ರ ಹರೆಯಲ್ಲಿ ತಂದೆಯಾದ 'ಇಂಡಿಯನ್​​ ಮೈಕಲ್​​ ಜಾಕ್ಸನ್​'

ಪ್ರಭುದೇವ ಮತ್ತು ಹಿಮಾನಿ ದಂಪತಿ ಪೋಷಕರಾಗಿ ಬಡ್ತಿ ಪಡೆದಿದ್ದಾರೆ.

Prabhu dheva becomes father
ತಂದೆಯಾದ ಪ್ರಭು ದೇವ
author img

By

Published : Jun 13, 2023, 10:28 AM IST

ಭಾರತೀಯ ಚಿತ್ರರಂಗದ ನಿರ್ದೇಶಕ, ನೃತ್ಯ ನಿರ್ದೇಶಕ, ನರ್ತಕ ಪ್ರಭು ದೇವ ಮತ್ತು ಪತ್ನಿ ಡಾ. ಹಿಮಾನಿ ಸಿಂಗ್​ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. 'ಇಂಡಿಯನ್​​ ಮೈಕಲ್​​ ಜಾಕ್ಸನ್​' ಖ್ಯಾತಿಯ ಪ್ರಭು ದೇವ ಮನೆಗೆ ಲಕ್ಷ್ಮಿಯ ಎಂಟ್ರಿ ಆಗಿದೆ.

ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲಿದ್ದೇನೆ: 50ರ ಹರೆಯದಲ್ಲಿ ತಂದೆಯಾದ ಸಂತಸದ ಸುದ್ದಿಯನ್ನು ನೃತ್ಯ ನಿರ್ದೇಶಕ ಪ್ರಭು ದೇವ ಸೋಮವಾರ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೌದು ನಿಜ. 50ರ ಹರೆಯದಲ್ಲಿ ಮತ್ತೊಮ್ಮೆ ತಂದೆಯಾಗಿದ್ದೇನೆ. ನನಗೆ ಬಹಳ 'ಸಂತೋಷ ಮತ್ತು ಸಂಪೂರ್ಣ' ಎನ್ನುವ ಅನುಭವ ಆಗುತ್ತಿದೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನನ್ನ ಕೆಲಸದ ಹೊರೆ ಕಡಿಮೆ ಮಾಡಿದ್ದೇನೆ ಎಂದು ಪ್ರಭು ದೇವ ತಿಳಿಸಿದರು.

ಮೊದಲ ಪತ್ನಿ ರಮ್ಲತಾ ಅವರಿಗೆ ವಿಚ್ಛೇದನ ನೀಡಿದ ಒಂಬತ್ತು ವರ್ಷಗಳ ನಂತರ ಪ್ರಭು ದೇವ ಅವರು 2020ರಲ್ಲಿ ಡಾ. ಹಿಮಾನಿ ಅವರೊಂದಿಗೆ ದಾಂಪತ್ಯ ಜೀವನ ಶುರು ಮಾಡಿದರು. ಅವರು ತಮ್ಮ ಮೊದಲ ಪತ್ನಿಯೊಂದಿಗೆ ಮೂರು ಮಕ್ಕಳನ್ನು ಹೊಂದಿದ್ದರು. ಆ ಪೈಕಿ ಮೊದಲ ಮಗ 2008ರಲ್ಲಿ ಬ್ರೈನ್ ಟ್ಯೂಮರ್‌ನಿಂದ ನಿಧನರಾದರು. ಇತರ ಇಬ್ಬರು ಗಂಡು ಮಕ್ಕಳು ತಮ್ಮ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ.

ನಿರ್ದೇಶಕ ಮತ್ತು ಅವರ ಪತ್ನಿ ಹಿಮಾನಿ ಇದುವರೆಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. 2023ರ ಏಪ್ರಿಲ್​ನಲ್ಲಿ, ಅವರ 50ನೇ ಹುಟ್ಟುಹಬ್ಬದ ಸ್ಮರಣಾರ್ಥ ವಿಡಿಯೋವೊಂದರಲ್ಲಿ ಕಾಣಿಸಿಕೊಂಡರು. ವಿಡಿಯೋದಲ್ಲಿ ಪ್ರಭುದೇವ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.

"ಒಟ್ಟಿಗೆ ಜೀವನ ಆರಂಭಿಸಿ ಮೂರು ವರ್ಷಗಳಾಗಿದೆ, ಇದೊಂದು ಜೊತೆಯಾಗಿ ಅದ್ಭುತ ಪ್ರಯಾಣ. ನಿಮ್ಮ ಅನೇಕ ವಿಷಯಗಳು ನನ್ನ ಉತ್ಸಾಹಕ್ಕೆ ಕಾರಣವಾಗಿದೆ. ನೀವು ಬಹಳ ಶ್ರದ್ಧೆಯುಳ್ಳ ವ್ಯಕ್ತಿಯಾಗಿದ್ದೀರಿ. ಒಬ್ಬ ವ್ಯಕ್ತಿಯು ಹೇಗೆ ದಯೆ, ಪ್ರೀತಿ ಹಾಸ್ಯಮಯವಾಗಿರಬಹುದು ಎಂಬುದಕ್ಕೆ ನೀವು ಸ್ಫೂರ್ತಿಯಾಗಿದ್ದೀರಿ. ನೀವು ಉತ್ತಮ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದೀರಿ ಮತ್ತು ನಿಮ್ಮ ಉಪಸ್ಥಿತಿಯು ಯಾವಾಗಲೂ ನನಗೆ ಸಂತೋಷವನ್ನು ನೀಡುತ್ತದೆ. ನಿಮ್ಮನ್ನು ಮದುವೆಯಾಗಿರುವುದು ಒಂದು ಆಶೀರ್ವಾದ" ಎಂದು ಹಿಮಾನಿ ತಿಳಿಸಿದ್ರು.

ಇದನ್ನೂ ಓದಿ: Adipurush: 24 ಗಂಟೆಯಲ್ಲಿ 36 ಸಾವಿರ 'ಆದಿಪುರುಷ್' ಟಿಕೆಟ್​ಗಳ ಮಾರಾಟ.. ಆರ್​ಆರ್​ಆರ್​​, ಪಠಾಣ್​ ದಾಖಲೆಗಳು ಉಡೀಸ್​!

ಪ್ರಭು ದೇವ ಅವರು ಬಹುಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗೆ ನಿರ್ದೇಶಕರಾಗಿ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ಅವರ ರಾಧೆ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ವಾಂಟೆಡ್ (2009), ರೌಡಿ ರಾಥೋರ್ (2012), ರಾಮಯ್ಯ ವಸ್ತವಯ್ಯ (2013), ಆರ್ ರಾಜ್​ಕುಮಾರ್ (2014) ಸೇರಿದಂತೆ ಮುಂತಾದ ಹಿಂದಿ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನಿರ್ದೇಶನ ಮತ್ತು ನೃತ್ಯ ಸಂಯೋಜನೆಯ ಜೊತೆಗೆ, ಅವರು ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Weekend with Ramesh: ಡಿಕೆಶಿ ಬದುಕಿನ ಅನಾವರಣದೊಂದಿಗೆ ಮುಕ್ತಾಯಗೊಂಡ ಸಾಧಕರ ಶೋ 'ವೀಕೆಂಡ್​ ವಿತ್​ ರಮೇಶ್​'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.