ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಶನ್ನ 2023ರ ಬಹುನಿರೀಕ್ಷಿತ ಸಿನಿಮಾ 'ಸಲಾರ್' ಡಿಸೆಂಬರ್ 22ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಆವೃತ್ತಿಯಲ್ಲಿ ಚಿತ್ರಮಂದಿರ ಪ್ರವೇಶಿಸಿತು. ಸಿನಿಮಾ ಉತ್ತಮ ಪ್ರದರ್ಶನ ಮುಂದುವರಿಸಿದೆ. ತೆರೆಕಂಡ 9 ದಿನಗಳಲ್ಲಿ ಅದ್ಭುತ ಕಲೆಕ್ಷನ್ ಮೂಲಕ ಅನೇಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುವಲ್ಲಿ ಯಶಸ್ವಿಯಾಗಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಶನಿವಾರದ ಹೊತ್ತಿಗೆ ಸಲಾರ್ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 329.62 ಕೋಟಿ ರೂಪಾಯಿ ಸಂಗ್ರಹಿಸಿದೆ.
ನಿರೀಕ್ಷೆಯಂತೆ ಸಲಾರ್ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಸ್ಯಾಕ್ನಿಲ್ಕ್ ಮಾಹಿತಿಯಂತೆ, ಒಂಭತ್ತನೇ ದಿನ ಅಂದರೆ ಶನಿವಾರ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 12.50 ಕೋಟಿ ರೂ. ಗಳಿಸಿದೆ. ಶನಿವಾರ ತೆಲುಗಿನಲ್ಲಿ ಶೇ. 38.01 ಮತ್ತು ಹಿಂದಿಯಲ್ಲಿ ಶೇ. 22.84ದಷ್ಟು ಆಕ್ಯುಪೆನ್ಸಿ ದರ ಹೊಂದಿತ್ತು. ಇಂದು ಭಾನುವಾರ ಮತ್ತು ಜನರು ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದು, ಕಲೆಕ್ಷನ್ ಅಂಕಿಅಂಶ ಅತ್ಯುತ್ತಮವಾಗಿರಲಿದೆ ಎಂದು ಅಂದಾಜಿಸಲಾಗಿದೆ.
-
#Salaar WW Box Office
— Manobala Vijayabalan (@ManobalaV) December 30, 2023 " class="align-text-top noRightClick twitterSection" data="
#Prabhas' #SalaarCeaseFire CROSSES ₹5️⃣5️⃣0️⃣ cr gross mark.
Day 1 - ₹ 176.52 cr
Day 2 - ₹… pic.twitter.com/jn6ouF7OeV
">#Salaar WW Box Office
— Manobala Vijayabalan (@ManobalaV) December 30, 2023
#Prabhas' #SalaarCeaseFire CROSSES ₹5️⃣5️⃣0️⃣ cr gross mark.
Day 1 - ₹ 176.52 cr
Day 2 - ₹… pic.twitter.com/jn6ouF7OeV#Salaar WW Box Office
— Manobala Vijayabalan (@ManobalaV) December 30, 2023
#Prabhas' #SalaarCeaseFire CROSSES ₹5️⃣5️⃣0️⃣ cr gross mark.
Day 1 - ₹ 176.52 cr
Day 2 - ₹… pic.twitter.com/jn6ouF7OeV
ಜಾಗತಿಕ ಗಳಿಕೆಯ ವಿವರ: ಉತ್ತರ ಅಮೆರಿಕದಲ್ಲಿ 8 ಮಿಲಿಯನ್ ಡಾಲರ್‌ಗೂ ಹೆಚ್ಚು ಗಳಿಸುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ಉತ್ತರ ಅಮೆರಿಕದಲ್ಲಿ 8 ಮಿಲಿಯನ್ ಡಾಲರ್‌ಗೂ ಹೆಚ್ಚು ಕಲೆಕ್ಷನ್ ಮಾಡಿರುವ ದಕ್ಷಿಣದ ಏಕೈಕ ನಟ ಪ್ರಭಾಸ್. ಅಲ್ಲದೇ ಜಗತ್ತಿನೆಲ್ಲೆಡೆ 500 ಕೋಟಿ ರೂ. ದಾಟಿದ ಮೂರು ಸಿನಿಮಾಗಳನ್ನು ಹೊಂದಿರುವ ಏಕೈಕ ನಟನೂ ಹೌದು. ಇವರ ಈ ಮೊದಲಿನ ಬಾಹುಬಲಿ 1 ಮತ್ತು 2 ಕೂಡ 500 ಕೋಟಿ ರೂ.ನ ಗಡಿ ದಾಟಿದೆ.
ಇದನ್ನೂ ಓದಿ: 'ಹೃದಯಪೂರ್ವಕ ಧನ್ಯವಾದ ಕರ್ನಾಟಕ': ಕಾಟೇರ ಗೆಲುವಿಗೆ ದರ್ಶನ್ ಖುಷ್
ವ್ಯಾಪಾರ ತಜ್ಞ ಮನೋಬಾಲಾ ವಿಜಯಬಾಲನ್ ಅವರು ಶನಿವಾರದಂದು ಸಲಾರ್ನ ಒಟ್ಟು ಗಳಿಕೆಯ ಬಗ್ಗೆ ಮಾಹಿತಿ ನೀಡಿದ್ದರು. ಎಂಟು ದಿನಗಳಲ್ಲಿ ಚಿತ್ರ 556 ಕೋಟಿ ರೂ. ಗಳಿಸಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಶೇರ್ ಮಾಡಿದ್ದರು. ಹಾಗಾಗಿ, ಸಿನಿಮಾ ಶೀಘ್ರದಲ್ಲಿಯೇ 600 ಕೋಟಿ ರೂ. ಗಡಿ ದಾಟುವ ನಿರೀಕ್ಷೆ ಇದೆ.
ಇದನ್ನೂ ಓದಿ: 'ಕಿರಿಕ್ ಪಾರ್ಟಿ'ಗೆ 7 ವರ್ಷ: ಜ.26ಕ್ಕೆ 'ಬ್ಯಾಚುಲರ್ ಪಾರ್ಟಿ'
ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷಿಣದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಡಿಸೆಂಬರ್ 21ರಂದು ಶಾರುಖ್ ಖಾನ್ ನಟನೆಯ ಡಂಕಿ ತೆರೆಕಂಡ ಬೆನ್ನಲ್ಲೇ ಸಲಾರ್ (ಡಿ. 22) ಬಿಡುಗಡೆಯಾದ ಹಿನ್ನೆಲೆಯಲ್ಲಿ ತೀವ್ರ ಪೈಪೋಟಿ ಎದುರಾಗಿತ್ತು.