ETV Bharat / entertainment

Adipurush: ಪ್ರಭಾಸ್​ ನಟನೆಯ 'ಆದಿಪುರುಷ್​' ಬಿಡುಗಡೆ ಜವಾಬ್ದಾರಿ ಹೊತ್ತ ಕನ್ನಡದ ಕೆಆರ್​​​ಜಿ ಸಂಸ್ಥೆ

author img

By

Published : Jun 10, 2023, 12:26 PM IST

ಪ್ರಭಾಸ್​ ನಟನೆಯ 'ಆದಿಪುರುಷ್'​ ಚಿತ್ರವನ್ನು ಕನ್ನಡ ಭಾಷೆಯಲ್ಲಿ ರಿಲೀಸ್​ ಮಾಡುವ ಜವಾಬ್ದಾರಿಯನ್ನು ಕೆ.ಆರ್​.ಜಿ ಸ್ಟುಡಿಯೋಸ್​ ಸಂಸ್ಥೆ ಹೊತ್ತುಕೊಂಡಿದೆ.

Adipurush
ಆದಿಪುರುಷ್

ದೇಶ, ವಿದೇಶದಾದ್ಯಂತ ಧೂಳೆಬ್ಬಿಸಿದ ಕೆಜಿಎಫ್​ 1, ಕೆಜಿಎಫ್ 2, ಕಾಂತಾರ, ಚಾರ್ಲಿ 777, ಗಂಧದ ಗುಡಿ, ವಕೀಲ್​ ಸಾಬ್​ ಮತ್ತು ದಸರಾ ಮುಂತಾದ ಚಿತ್ರಗಳನ್ನು ಬಿಡುಗಡೆ ಮಾಡಿದ್ದ ಕೆ.ಆರ್​.ಜಿ ಸ್ಟುಡಿಯೋಸ್​ ಸಂಸ್ಥೆ ಇದೀಗ ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಅಭಿನಯದ 'ಆದಿಪುರುಷ್​' ಚಿತ್ರವನ್ನು ಕನ್ನಡ ಭಾಷೆಯಲ್ಲಿ ರಿಲೀಸ್​ ಮಾಡುವ ಜವಾಬ್ದಾರಿ ಹೊತ್ತುಕೊಂಡಿದೆ.

ಸ್ಯಾಂಡಲ್​ವುಡ್​ನಲ್ಲಿ ಕೆ.ಆರ್​.ಜಿ ಸಂಸ್ಥೆ ಬಿಡುಗಡೆ ಮಾಡುವ ಎಲ್ಲ ಸಿನಿಮಾಗಳು ಸೂಪರ್​ ಹಿಟ್​ ಆಗುತ್ತವೆ. ಇದು ಕರ್ನಾಟಕ ಜನತೆಗೆ ತಿಳಿದಿರುವ ವಿಚಾರ. ಸದಭಿರುಚಿಯ ಚಿತ್ರಗಳನ್ನು ಸಿನಿಮಾ ಪ್ರೇಕ್ಷಕರಿಗೆ ತಲುಪಿಸುವ ಕೈಕಂರ್ಯದಲ್ಲಿ ಕೆ.ಆರ್​.ಜಿ ಸ್ಟುಡಿಯೋಸ್​ ಸಂಸ್ಥೆ ತೊಡಗಿದೆ. ಈ ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಗರಿ ಆದಿಪುರುಷ್​ ಸಿನಿಮಾವನ್ನು ಕರ್ನಾಟಕದಾದ್ಯಂತ ವಿತರಣೆ ಮಾಡುವ ಹೊಣೆ ಹೊತ್ತಿರೋದು.

ನಮ್ಮ ಹಿಂದೂ ಸಂಸ್ಕೃತಿಯ ಮಹಾಕಾವ್ಯ ಎಂದೇ ಹೇಳಲ್ಪಡುವ ಪವಿತ್ರ ಗ್ರಂಥ ರಾಮಾಯಣದ ಎಳೆ ಆಧರಿಸಿ ತಯಾರಿಸಿರುವ ಚಿತ್ರ ಆದಿಪುರುಷ್. ಟಿ ಸೀರೀಸ್ ಮತ್ತು ರೆಟ್ರೋಫಿಲ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಕಥೆ ಹೆಣೆದು ನಿರ್ದೇಶನ ಮಾಡುತ್ತಿರುವುದು ಓಂ ರಾವತ್​ಅವರು. ಆದಿಪುರುಷ್ ಚಿತ್ರವು ಏಕಕಾಲಕ್ಕೆ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಿದೆ. ಚಿತ್ರದ ತಾರಾಗಣದಲ್ಲಿ ಪ್ರಭಾಸ್, ಕೃತಿ ಸನೋನ್ , ಸೈಫ್ ಅಲಿ ಖಾನ್, ಸನ್ನಿ ಸಿಂಗ್, ದೇವದತ್ತ ನಾಗೇ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಹಿಂದೆಂದೂ ನಡೆಯದಿರುವಂತೆ 'ಆದಿಪುರುಷ್​​' ಪ್ರೀ ರಿಲೀಸ್ ಸಮಾರಂಭಕ್ಕೆ ತಯಾರಿ: ಏನಿದರ ವಿಶೇಷತೆ

"ಆದಿಪುರುಷ್ ಚಿತ್ರದ ಕರ್ನಾಟಕದ ವಿತರಣೆ ನಮಗೆ ಸಿಕ್ಕಿರುವುದು ಬಹಳ ಹೆಮ್ಮೆಯ ಸಂಗತಿ" ಎಂದು ಹೊಂಬಾಳೆ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕರು ಮತ್ತು ಕೆ.ಆರ್​.ಜಿ ಸ್ಟುಡಿಯೋಸ್ ಸಂಸ್ಥೆಯ ಸಂಸ್ಥಾಪಕರು ಆಗಿರುವ ಕಾರ್ತಿಕ್ ಗೌಡ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಪೌರಾಣಿಕ ಮಹಾಕಾವ್ಯವಾದ ರಾಮಾಯಣದಲ್ಲಿರುವ ಸಾರವನ್ನು ಇಂದಿನ ಕಾಲಘಟ್ಟಕ್ಕೆ ಮತ್ತು ಇಂದಿನ ಪೀಳಿಗೆಗೆ ಅನುಗುಣವಾಗಿ ಆದಿಪುರುಷ್ ಚಿತ್ರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಚಿತ್ರವು ಪ್ರಭಾಸ್ ಮತ್ತು ಯು ವಿ ಕ್ರಿಯೇಷನ್ಸ್ ಜೊತೆಗಿನ ಕೆಆರ್​ಜಿ ಸ್ಟುಡಿಯೋಸ್ ಒಡನಾಟಕ್ಕೂ ಸಾಕ್ಷಿಯಾಗಲಿದೆ.

ಆದಿಪುರುಷ್ ಚಿತ್ರ ಜೂನ್ 16 ರಂದು ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ. ಚಿತ್ರವು ರಿಲೀಸ್​ಗೂ ಮುನ್ನವೇ ಸಿನಿಮಾ 400 ಕೋಟಿ ರೂಪಾಯಿ ಬಾಚಿಕೊಂಡಿದೆ. ಪ್ರಭಾಸ್​ ರಾಮನಾಗಿ, ಕೃತಿ ಸನೋನ್​ ಸೀತೆಯಾಗಿ, ಸನ್ನಿ ಸಿಂಗ್​ ಲಕ್ಷ್ಮಣನಾಗಿ ಮತ್ತು ಸೈಫ್​ ಅಲಿ ಖಾನ್​ ರಾವಣನಾಗಿ ನಟಿಸಿದ್ದಾರೆ. ಈಗಾಗಲೇ 'ಸಾಹೋ', 'ರಾಧೇಶ್ಯಂ' ಫ್ಲಾಪ್‌ಗಳಿಂದ ಕಂಗೆಟ್ಟಿರುವ ಪ್ರಭಾಸ್‌ಗೆ 'ಆದಿಪುರುಷ್​' ಚಿತ್ರ ಯಾವ ರೀತಿಯ ಯಶಸ್ಸನ್ನು ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: 'ನಾನು ಸೀತೆಯ ಪಾತ್ರ ಮಾಡಿದಾಗ ಸೀತೆಯಂತೆ ಬದುಕಿದ್ದೆ, ಇಂದಿನ ಕಲಾವಿದರಿಗೆ ಅದು ಕೇವಲ ಪಾತ್ರ': ದೀಪಿಕಾ ಚಿಖ್ಲಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.