ETV Bharat / entertainment

Watch Video: 50 ದಿನಗಳ ಬಳಿಕ ಹೈದರಾಬಾದ್‌ಗೆ ಮರಳಿದ ಪ್ರಭಾಸ್ - ಹೈದರಾಬಾದ್ ವಿಮಾನ ನಿಲ್ದಾಣ

ಡಾರ್ಲಿಂಗ್ ಪ್ರಭಾಸ್ ಅಭಿನಯದ ‘ಕಲ್ಕಿ 2898 AD’ ಚಿತ್ರ ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಚಿತ್ರದ ಪ್ರತಿ ಹೆಜ್ಜೆಯನ್ನು ಅವರ ಅಭಿಮಾನಿಗಳು ಗಮನಿಸುತ್ತಿದ್ದು ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ.

Prabhas returns to Hyderabad after Kalki 2898 AD launch at Comic Con 2023 - watch video

author img

By

Published : Jul 26, 2023, 7:04 PM IST

ಹೈದರಾಬಾದ್: ಆದಿಪುರುಷ್ ಬಿಡುಗಡೆ ಬಳಿಕ ವಿದೇಶಕ್ಕೆ ಹಾರಿದ್ದ ಡಾರ್ಲಿಂಗ್ ಪ್ರಭಾಸ್, ಇದೀಗ ಮತ್ತೆ ವಾಪಸ್ ಭಾರತಕ್ಕೆ ಬಂದಿದ್ದಾರೆ. ಅಮೆರಿಕದಲ್ಲಿ ಪ್ರತಿಷ್ಠಿತ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (SDCC) ಈವೆಂಟ್​​ನಲ್ಲಿ ಭಾಗವಹಿಸಿದ್ದ ಅವರು, ಇಂದು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

ಅಂತಾರಾಷ್ಟ್ರೀಯ ಮಟ್ಟದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಸಮಾರಂಭದಲ್ಲಿ ಪ್ರಭಾಸ್ ಜೊತೆಗೆ ‘ಕಲ್ಕಿ 2898 AD’ ಚಿತ್ರ ತಂಡದ ಎಲ್ಲ ನಟ-ನಟಿಯರು ಕೂಡ ಭಾಗಿಯಾಗಿದ್ದರು. ಚಿತ್ರೀಕರಣ ವೇಳೆ ಪೆಟ್ಟು ಬಿದ್ದು ಸುರಿಸುಮಾರು 50 ದಿನಗಳನ್ನು ವಿದೇಶದಲ್ಲಿಯೇ ಕಳೆದ ಡಾರ್ಲಿಂಗ್ ಪ್ರಭಾಸ್, ಇದೀಗ ಭಾರತಕ್ಕೆ ಮರಳಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಅವರು ಆಗಮಿಸುತ್ತಿದ್ದಂತೆ ಕ್ಯಾಮರಾಗಳ ಕಣ್ಣು ಅವರ ಮೇಲೆ ಬಿದ್ದಿವೆ. ಕಪ್ಪು ಪ್ಯಾಂಟ್‌ ಮತ್ತು ಅದೇ ಬಣ್ಣದ ದೊಡ್ಡ ಸ್ವೆಟ್‌ಶರ್ಟ್ ಧರಿಸಿದ್ದರು. ಅದರ ಜೊತೆ ಟೋಪಿ ಧರಿಸಿದ್ದ ಅವರು ಮುಖಕ್ಕೆ ಮಾಸ್ಕ್​ ಹಾಕಿಕೊಂಡಿದ್ದರು. ಅವರ ಈ ವಿಶೇಷ ಲುಕ್​ ಕಂಡ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಲಾರ್​ ಚಿತ್ರೀಕರಣ ಮೊಣಕಾಲಿಗೆ ಪೆಟ್ಟು ಬಿದ್ದಿದ್ದರಿಂದ ಅಮೆರಿಕಕ್ಕೆ ತೆರಳಿದ್ದ ಪ್ರಭಾಸ್, ಅದರ ನಿವಾರಣೆಗಾಗಿ ಅಲ್ಲಿಯೇ ಫಿಸಿಯೋಥೆರಪಿಗೆ ಒಳಗಾಗಿದ್ದರು. ಬಳಿಕ ಅಲ್ಲಿಯೇ ನೆರವೇರಿದ್ದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ಈವೆಂಟ್​ನಲ್ಲಿಯೂ ಕಾಣಿಸಿಕೊಂಡಿದ್ದರು. ಇದೀಗ ಎಲ್ಲವನ್ನು ಯಶಸ್ವಿಗೊಳಿಸಿ ಮತ್ತೆ ತಾಯ್ನಾಡಿಗೆ ಬಂದಿದ್ದಾರೆ.

ಪ್ರತಿಷ್ಠಿತ 'ಸ್ಯಾನ್ ಡಿಯಾಗೋ ಕಾಮಿಕ್ ಕಾನ್' ಸಮಾರಂಭದಲ್ಲಿ ‘ಕಲ್ಕಿ 2898 AD’ ಚಿತ್ರದ ಗ್ಲಿಂಪ್ಸಸ್‌ ಮತ್ತು ಶೀರ್ಷಿಕೆ ಅನಾವರಣಗೊಂಡಿದ್ದು ಜಾಲತಾಣದಲ್ಲಿ ಜಾಗ ಪಡೆದಿದೆ. ಬಿಗ್​ ಬಜೆಟ್​ ಚಿತ್ರ ಇದಾಗಿದ್ದು, ಇಂಗ್ಲಿಷ್​ ಚಿತ್ರಗಳಿಗೂ ಪೈಪೋಟಿ ನೀಡುವ ರೀತಿಯಲ್ಲೇ ಸಿದ್ಧಗೊಳ್ಳುತ್ತಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟ ಪ್ರಭಾಸ್, ಚಿತ್ರದ ಬಗ್ಗೆ ಹಾಗೂ ತಮ್ಮ ಪಾತ್ರದ ಬಗ್ಗೆ ಬಹಿರಂಗಪಡಿಸಿದ್ದರು. ಇದೇ ವೇಳೆ, ಪ್ರಭಾಸ್ ಅವರ ನಟನಾ ಕೌಶಲ್ಯದ ಬಗ್ಗೆ ಚಿತ್ರ ನಿರ್ದೇಶಕ ನಾಗ್ ಅಶ್ವಿನ್ ಕೂಡ ಶ್ಲಾಘಿಸಿದ್ದರು.

‘ಕಲ್ಕಿ 2898 AD’ ಇದೊಂದು ಬಹುನಿರೀಕ್ಷಿತ ಮತ್ತು ಪ್ಯಾನ್​ ಚಿತ್ರವಾಗಿದ್ದು ದೊಡ್ಡ ತಾರಾ ಬಳಗವೇ ಇದೆ. ಮಹಾನಟಿ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್​​ ಕಟ್​​ ಹೇಳುತ್ತಿರುವ ಈ ಸಿನಿಮಾದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಅಲ್ಲದೇ ಬಿಗ್ ಬಿ ಅಮಿತಾಭ್​ ಬಚ್ಚನ್, ಕಾಲಿವುಡ್ ಸೂಪರ್​ ಸ್ಟಾರ್ ಕಮಲ್ ಹಾಸನ್, ಬಾಲಿವುಡ್​ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ, ಫಿಟ್ನೆಸ್​ ಐಕಾನ್​​ ದಿಶಾ ಪಟಾನಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಾಣಾ ದಗ್ಗುಬಾಟಿ ಕೂಡ ಇದೀಗ ಸೇರಿಕೊಂಡಿದ್ದು, ಚಿತ್ರದ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಸಿನಿಮಾ ಪ್ರೊಡಕ್ಷನ್ ಹೌಸ್ ವೈಜಯಂತಿ ಮೂವೀಸ್ ಹಣ ಹೂಡಿದ್ದು ಸಂತೋಷ್ ನಾರಾಯಣನ್ ಸಂಗೀತವಿದೆ.

ಕಲ್ಕಿ ಜೊತೆಗೆ, ಪ್ರಭಾಸ್ ಅವರು ಪ್ರಶಾಂತ್ ನೀಲ್ ನಿರ್ದೇಶನ ‘ಸಲಾರ್’ ಚಿತ್ರದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಂಬಾಳೆ ಸಂಸ್ಥೆ ಈ ಚಿತ್ರಕ್ಕೆ ಹಣ ಹೂಡಿದ್ದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಶ್ರುತಿ ಹಾಸನ್ ಈ ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ. ಪ್ರಶಾಂತ್ ಮತ್ತು ಶ್ರುತಿ ಹಾಸನ್ ಜೊತೆಗೆ ಮಲಯಾಳಂನ ಪೃಥ್ವಿರಾಜ್ ಸುಕುಮಾರನ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: 15 ಕೋಟಿ ರೂ. ಬಜೆಟ್​ನಲ್ಲಿ ಶಾರುಖ್​ ಸಾಂಗ್ ಶೂಟ್ - 1,000 ಲೇಡಿ ಡ್ಯಾನ್ಸರ್ಸ್ ಮಧ್ಯೆ ಕಿಂಗ್​ ಖಾನ್ ಡ್ಯಾನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.