ETV Bharat / entertainment

'ಸಲಾರ್'​​ ತಿರಸ್ಕರಿಸಿದ್ದರಂತೆ ಪ್ರಭಾಸ್! - ಪ್ರಶಾಂತ್ ನೀಲ್

'ಸಲಾರ್'​​ ಸಿನಿಮಾವನ್ನು ಒಪ್ಪಿಕೊಳ್ಳಲು ಆರಂಭದಲ್ಲಿ ಹಿಂದೇಟು ಹಾಕಿದ್ದರಂತೆ ಪ್ರಭಾಸ್​​.

prabhas rejected Salaar initially
'ಸಲಾರ್'​​ ಪ್ರೊಜೆಕ್ಟ್​​ ತಿರಸ್ಕರಿಸಿದ್ದ ಪ್ರಭಾಸ್
author img

By ETV Bharat Karnataka Team

Published : Dec 20, 2023, 8:12 PM IST

Updated : Dec 21, 2023, 9:19 AM IST

ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಅವರು ತಮ್ಮ ಹೊಸ ಚಿತ್ರದ ಬಿಡುಗಡೆಗೆ ಸಜ್ಜಾಗಿದ್ದಾರೆ. ಬಾಹುಬಲಿ ಯಶಸ್ಸಿನ ನಂತರ ಪ್ಯಾನ್ ಇಂಡಿಯಾ ಸ್ಟಾರ್‌ಡಮ್‌ಗೆ ಹೆಸರುವಾಸಿಯಾದ ಪ್ರಭಾಸ್ ಮತ್ತು ಬ್ಲಾಕ್‌ಬಸ್ಟರ್ ಕೆಜಿಎಫ್ ಸರಣಿ ಸಿನಿಮಾಗಳ ನಿರ್ದೇಶನ ಶೈಲಿಗೆ ಜನಪ್ರಿಯತೆ ಸಂಪಾದಿಸಿದ ಪ್ರಶಾಂತ್ ನೀಲ್​ ಸಲಾರ್‌ ಸಿನಿಮಾಗೆ ಕೈಜೋಡಿಸಿದಾಗಿನಿಂದಲೂ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ವ್ಯಕ್ತವಾಗುತ್ತಿದೆ. ಆದಾಗ್ಯೂ, ಈ ಕಾಂಬಿನೇಶನ್​​ ಮೊದಲ ಹಂತದಲ್ಲೇ ಫೈನಲ್​ ಆಗಿಲ್ಲ ಎಂಬುದನ್ನು ಪ್ರಭಾಸ್ ಇತ್ತೀಚೆಗೆ ಬಹಿರಂಗಪಡಿಸಿದ್ದರು.

ಸಲಾರ್ ಹಿಂದಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ವಿಶೇಷ ಸಂದರ್ಶನದ ವಿಡಿಯೋವನ್ನು ಅನಾವರಣಗೊಳಿಸಿದೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಪ್ರಶಾಂತ್ ನೀಲ್ ಅವರನ್ನು ಜನಪ್ರಿಯ ನಿರ್ದೇಶಕ ಎಸ್ಎಸ್ ರಾಜಮೌಳಿ ಸಂದರ್ಶನ ನಡೆಸಿದ್ದಾರೆ. ಈ ಚರ್ಚೆಯಲ್ಲಿ ರಾಜಮೌಳಿ ಅವರು ಪ್ರಶಾಂತ್ ಅವರಂತಹ ಜನಪ್ರಿಯ, ಪ್ರಮುಖ ನಿರ್ದೇಶಕರಿಂದ ಸಿನಿಮಾ ಆಯ್ಕೆಯಾದ ಅನುಭವದ ಬಗ್ಗೆ ಪ್ರಭಾಸ್ ಅವರಲ್ಲಿ ಪ್ರಶ್ನಿಸಿದರು.

ಅಂದು ಪ್ರಶಾಂತ್ ಹಾಟ್ ಪ್ರಾಪರ್ಟಿ ಆಗಿದ್ದರೆಂದು ತಿಳಿಸಿದ ಪ್ರಭಾಸ್, ಅವರು ಹೋದಲ್ಲೆಲ್ಲಾ ಕೆಜಿಎಫ್ ಬಗ್ಗೆ ಪ್ರಶಂಸೆಯ ಮಾತುಗಳನ್ನೇ ಕೇಳಿದರು. ಅವರ ಸಿನಿಮಾ ವೀಕ್ಷಿಸಿದ ಬಳಿಕ ಪ್ರಶಾಂತ್ ಅವರ ಕೆಲಸದ ಹಿಂದಿನ ಆಕರ್ಷಣೆ ನನ್ನ ಗಮನಕ್ಕೆ ಬಂತು ಎಂದು ತಿಳಿಸಿದರು. ತಮ್ಮನ್ನು ಭೇಟಿಯಾಗಲು ಆಸಕ್ತಿ ವ್ಯಕ್ತಪಡಿಸಿದ್ದ ಪ್ರಶಾಂತ್ ಅವರಿಂದ ಕರೆ ಸ್ವೀಕರಿಸಿದ ಕ್ಷಣವನ್ನು ಪ್ರಭಾಸ್ ಬಹಿರಂಗಪಡಿಸಿದರು. ಭೇಟಿಯಾದ ಸಂದರ್ಭವೂ ಆರಂಭದಲ್ಲಿ ಕೊಲಾಬರೇಶನ್​​ ವಿಷಯವನ್ನು ಪ್ರಸ್ತಾಪಿಸಲಿಲ್ಲ ಎಂಬುದಾಗಿ ಪ್ರಭಾಸ್​ ತಿಳಿಸಿದರು.

ಪ್ರಶಾಂತ್ ನೀಲ್​ ತಮ್ಮ ನಟರನ್ನು ಆರಾಧಿಸುವ ಸೌಮ್ಯ ಆತ್ಮ ಎಂದು ಪ್ರಭಾಸ್ ಬಣ್ಣಿಸಿದ್ದಾರೆ. ಸಿನಿಮಾಗೆ ಒಪ್ಪಿಗೆ ನೀಡುವ ಮೊದಲು ವೈಯಕ್ತಿಕವಾಗಿ ಉತ್ತಮ ಬಾಂಧವ್ಯವನ್ನು ಹೊಂದುವುದು ಅವರಿಗೆ ಪ್ರಮುಖ ವಿಷಯ. ಮೊದಲ ಭೇಟಿ ನಂತರ, ಇಬ್ಬರೂ ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಚರ್ಚಿಸಲಿಲ್ಲ, ಆದರೆ ನಿರ್ಮಾಪಕರು ನಮಗೆ ಸಹಾಯ ಮಾಡಿದರು. ನಾವು ಪರಸ್ಪರ ಮೆಚ್ಚಿಕೊಂಡೆವು. ಆದರೆ ಮೊದಲ ಭೇಟಿಯ ನಂತರ ಕರೆ ಮಾಡಲಿಲ್ಲ. ಇದ್ದಕ್ಕಿದ್ದಂತೆ ಒಂದು ದಿನ ಪ್ರಮೋದ್ (ಪ್ರಭಾಸ್ ಅವರ ಸೋದರಸಂಬಂಧಿ) ಕಾಲ್​ ಒಂದನ್ನು ಸ್ವೀಕರಿಸಿದರು. ಪ್ರಶಾಂತ್ ನನ್ನೊಂದಿಗೆ ಸಿನಿಮಾ ಮಾಡಲಿಚ್ಚಿಸುತ್ತಿರುವುದು ಗೊತ್ತಾಯಿತು.

ಕರೆ ಸ್ವೀಕರಿಸಿದ ನಂತರ, ಪ್ರಭಾಸ್ ಮತ್ತು ಪ್ರಮೋದ್ ಇಬ್ಬರೂ 'ಪ್ರಶಾಂತ್ ನೀಲ್​ ಅವರ ಈ ಆಫರ್ ಅನ್ನು ಹೇಗೆ ನಿರಾಕರಿಸುವುದು?' ಎಂದು ಇಡೀ ದಿನ ಯೋಚಿಸಿದ್ದಾರೆ. ಪ್ರಶಾಂತ್ ಜೊತೆಗಿನ ಸಿನಿಮಾ ಒಂದು ಬಿಗ್ ಪ್ರಾಜೆಕ್ಟ್ ಎಂದು ಈ ಇಬ್ಬರಿಗೂ ತಿಳಿದಿತ್ತು. ಪ್ರಭಾಸ್ ಈಗಾಗಲೇ ಎರಡು ಪ್ರಮುಖ ಚಿತ್ರಗಳಾದ ಆದಿಪುರುಷ (ಈಗಾಗಲೇ ಬಿಡುಗಡೆಗೊಂಡಿದೆ) ಮತ್ತು ಕಲ್ಕಿ 2098 ಎಡಿ ಸಿನಿಮಾಗಳಿಗೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದರು. ಟೈಟ್​ ಶೂಟಿಂಗ್​ ಶೆಡ್ಯೂಲ್ ನಡುವೆ ಪ್ರಶಾಂತ್ ನೀಲ್​ ಅವರ ಸಿನಿಮಾಗೆ ಸೂಕ್ತ ಸಮಯ ಮೀಸಲಿಡುವುದು ಕಷ್ಟ ಎಂದು ಪ್ರಭಾಸ್​ ಭಾವಿಸಿದ್ದರಂತೆ. ಹಾಗಾಗಿ ಪ್ರಶಾಂತ್ ನೀಲ್​ ಅವರ ಈ ಆಫರ್ ಅನ್ನು ಹೇಗೆ ನಿರಾಕರಿಸುವುದು ಎಂಬ ಚಿಂತೆಯಲ್ಲಿದ್ದರು.

ಇದನ್ನೂ ಓದಿ: Salaar Vs Dunki: ಅಡ್ವಾನ್ಸ್ ಟಿಕೆಟ್ ವ್ಯವಹಾರದಲ್ಲಿ ಭರ್ಜರಿ ಪೈಪೋಟಿ; ಯಾವ ಸಿನಿಮಾ ಮುಂದಿದೆ?

''ಯಾವುದೇ ಕಾರಣಕ್ಕೂ ಪ್ರಶಾಂತ್ ನೀಲ್‌ ಅವರ ಆಫರ್​​ ಬೇಡ ಎಂದು ಹೇಳಿದ್ದೇನೆಂದು ಅಭಿಮಾನಿಗಳಿಗೆ ತಿಳಿದರೆ, ಅವರು ಖಂಡಿತಾ ನನ್ನನ್ನು ಕೊಲ್ಲುತ್ತಾರೆ" ಎಂದು ಮರುದಿನ ನಾನು ಚಿಂತೆಯಲ್ಲಿ ಮುಳುಗಿದ್ದೆ. ಅವರ ಅಭಿಮಾನಿಗಳ ಅಗಾಧ ಬೆಂಬಲದಿಂದಾಗಿ ಅಂತಿಮವಾಗಿ ಪ್ರಶಾಂತ್ ನೀಲ್ ಅವರ ಆಫರ್​ ಅನ್ನು ಸ್ವೀಕರಿಸಲು ಕಾರಣವಾಯಿತು ಎಂದು ಪ್ರಭಾಸ್ ತಿಳಿಸಿದರು.

ಇದನ್ನೂ ಓದಿ: ಸಲಾರ್​ ಸೆಟ್​​​ನ 'worst thing' ಹಂಚಿಕೊಂಡ ಪೃಥ್ವಿರಾಜ್

Last Updated : Dec 21, 2023, 9:19 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.