ETV Bharat / entertainment

ಬಾಹುಬಲಿ ತಂಡದೊಂದಿಗೆ ಮತ್ತೆ ಕೆಲಸ ಮಾಡಲಿದ್ದಾರಾ ಪ್ರಭಾಸ್ - ನಿರ್ಮಾಣವಾಗಲಿದೆಯಾ ಬಿಗ್ ಬಜೆಟ್ ಸಿನಿಮಾ?! - ಪ್ರಭಾಸ್ ಲೇಟೆಸ್ಟ್ ನ್ಯೂಸ್

ಈಗಾಗಲೇ ಮೂರು ಬಿಗ್​ ಬಜೆಟ್​ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟ ಪ್ರಭಾಸ್ ಅವರ ಮತ್ತೊಂದು ಸಿನಿಮಾ ಬಗ್ಗೆ ಸುಳಿವು ಸಿಕ್ಕಿದೆ.

Prabhas next project
ಪ್ರಭಾಸ್ ಮುಂದಿನ ಸಿನಿಮಾ
author img

By

Published : Apr 22, 2023, 4:44 PM IST

2015ರಲ್ಲಿ ಬಿಡುಗಡೆಯಾಗಿ ಚಿತ್ರಮಂದಿರದಲ್ಲಿ ಧೂಳೆಬ್ಬಿಸಿರುವ 'ಬಾಹುಬಲಿ : ದಿ ಬಿಗಿನಿಂಗ್' ಸಿನಿಮಾ ಸೌತ್ ಸೂಪರ್​ ಸ್ಟಾರ್ ಪ್ರಭಾಸ್ ಅವರ ವೃತ್ತಿಜೀವನದ ಪಥವನ್ನೇ ಬದಲಾಯಿಸಿತು. ಎರಡು ವರ್ಷಗಳ ನಂತರ ಬಂದ ಬಾಹುಬಲಿ 2 ಪ್ಯಾನ್ ಇಂಡಿಯಾ ತಾರೆಯಾಗಿ ಅವರ ಸ್ಥಾನವನ್ನು ಭದ್ರಪಡಿಸಿತು. ಸದ್ಯ ಬಹುಬೇಡಿಕೆ ತಾರೆ ಮೆಗಾ ಬಜೆಟ್ ಚಿತ್ರಗಳನ್ನು ಹೊಂದಿದ್ದು, ಮುಂಬರುವ ಚಿತ್ರಗಳ ಸಾಲಿಗೆ ಮತ್ತೊಂದು ಪ್ರತಿಷ್ಠಿತ ಯೋಜನೆಯನ್ನು ಸೇರಿಸಲಿದ್ದಾರೆ.

ಬಾಹುಬಲಿ ತಂಡದೊಂದಿಗೆ ಮತ್ತೆ ಕೆಲಸ ಮಾಡುವ ಬಗ್ಗೆ ನಟ ಪ್ರಭಾಸ್ ಯಾವಾಗಲೂ ಮಾತನಾಡುತ್ತಾರೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಅವರ ಎರಡೂ ಚಿತ್ರಗಳನ್ನು (ಬಾಹುಬಲಿ) ಶೋಬು ಯಾರ್ಲಗಡ್ಡ ಮತ್ತು ಪ್ರಸಾದ್ ದೇವಿನೇನಿ ಅವರ ಬ್ಯಾನರ್ ಆರ್​ಕಾ ಮೀಡಿಯಾ ವರ್ಕ್ಸ್ ಅಡಿ ನಿರ್ಮಾಣ ಮಾಡಲಾಗಿದೆ. ಬಾಹುಬಲಿ ಚಿತ್ರಗಳಿಗೆ ನೀಡಿದ ಅವಕಾಶಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದು ನಟ ಈ ಹಿಂದೆ ಹೇಳಿದ್ದರು. ಇತ್ತೀಚಿನ ವರದಿ ಪ್ರಕಾರ, ಬಾಹುಬಲಿ ತಂಡದೊಂದಿಗೆ ಮತ್ತೆ ಕೆಲಸ ಮಾಡಲಿದ್ದಾರೆ ಪ್ರಭಾಸ್​. ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.

ನಟ ಪ್ರಭಾಸ್ ಮತ್ತು ಬಾಹುಬಲಿ ನಿರ್ಮಾಪಕರಾದ ಶೋಬು ಯಾರ್ಲಗಡ್ಡ, ಪ್ರಸಾದ್ ದೇವಿನೇನಿ ಮುಂದಿನ ಚಿತ್ರಕ್ಕಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಪ್ರಭಾಸ್ ಮತ್ತು ಚಿತ್ರ ತಯಾರಕರು ಯೋಜನೆಯನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. ಮುಂಬರುವ ಚಿತ್ರವು ಪ್ರಭಾಸ್ ಅವರನ್ನು ಅವರ ಹಿಂದಿನ ನೋಟಗಳಿಗಿಂತ ವಿಭಿನ್ನವಾಗಿ ತೋರಿಸಲು ಸಿದ್ಧತೆ ನಡೆಯುತ್ತಿದೆ. ಕಥಾಹಂದರದ ಬಗ್ಗೆ ಎಲ್ಲೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಹೆಸರಿಸದ ಚಿತ್ರದ ಕೆಲಸವನ್ನು ಪ್ರಾರಂಭಿಸುವ ಮೊದಲು, ಪ್ರಭಾಸ್ ಈಗಾಗಲೇ ಒಪ್ಪಿಕೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸುವವರೆಗೂ ತಯಾರಕರು ಕಾಯಬೇಕಾಗುತ್ತದೆ.

ಬಾಹುಬಲಿ 3 ಬಗ್ಗೆ ಊಹಾಪೋಹ ಎದ್ದಿದೆ. ಆದ್ರೆ ಮುಂಬರುವ ಈ ಚಿತ್ರವು ರಾಜಮೌಳಿ ನಿರ್ದೇಶನದ ಬಾಹುಬಲಿ 3 ಅಲ್ಲ. ಹಾಗಂತ ಬಾಹುಬಲಿ 3ರ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಚಿತ್ರದ ವಿಸ್ತರಣೆಗೆ, ಹೊಸತನಕ್ಕೆ ಅವಕಾಶವಿದೆ ಎಂದು ತಯಾರಕರು ಈ ಮೊದಲೇ ಹೇಳಿದ್ದರು. ಆದ್ರೆ ಸದ್ಯ ಪ್ರಗತಿಯಲ್ಲಿರುವ ಯೋಜನೆ ಮಾತ್ರ ಬಾಹುಬಲಿ 3 ಅಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಟೀಕೆ, ಟ್ರೋಲ್​ಗಳನ್ನು ಎದುರಿಸಿ ಮಾದರಿ ದಂಪತಿಯಾದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಾಸ್

ಇನ್ನೂ ಪ್ರಭಾಸ್ ಮತ್ತು ಓಂ ರಾವುತ್ ಕಾಂಬೋದ ಆದಿಪುರುಷ್ ಸಿನಿಮಾ ಜೂನ್‌ನಲ್ಲಿ ಬಿಡುಗಡೆ ಆಗಲು ಸಜ್ಜಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಮತ್ತು ನಾಗ್ ಅಶ್ವಿನ್ ಅವರ ಪ್ರಾಜೆಕ್ಟ್ ಕೆ ಶೂಟಿಂಗ್​ ಮುಂದುವರಿದಿದೆ.

ಇದನ್ನೂ ಓದಿ: 'ತು ಚೀಸ್ ಬಡಿ ಹೈ ಮಸ್ಕ್ ಮಸ್ಕ್': ಎಲಾನ್​ ಮಸ್ಕ್​ಗೆ ಅಮಿತಾಭ್ ಬಚ್ಚನ್​​ ಧನ್ಯವಾದ

ಬಿಡುಗಡೆ ಹೊಸ್ತಿಲಲ್ಲಿರುವ 'ಆದಿಪುರುಷ್'​ ಪ್ರಚಾರದ ಭಾಗವಾಗಿ ಇಂದು ಜೈ ಶ್ರೀ ರಾಮ್​ ಹಾಡಿನ ಸಾಹಿತ್ಯವನ್ನು ಬಿಡುಗಡೆ ಮಾಡಿದೆ. ಆಗಾಗ್ಗೆ ಸಿನಿಮಾ ಬಗ್ಗೆ ಅಪ್​ಡೇಟ್ಸ್ ಹಂಚಿಕೊಳ್ಳುವ ತಂಡ ಇಂದು ಕೂಡ ಹಾಡಿನ ಸಾಹಿತ್ಯವನ್ನು ಅನಾವರಣಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.