ನವದೆಹಲಿ: ರಾಜಮೌಳಿ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ RRR ವಿಶ್ವದಾದ್ಯಂತ ತೆರೆ ಕಂಡು ಭರ್ಜರಿ ಕಲೆಕ್ಷನ್ ಮಾಡಿದ್ದು, ಬಾಕ್ಸ್ ಆಫೀಸ್ನಲ್ಲಿ ಅನೇಕ ಹೊಸ ದಾಖಲೆಗಳನ್ನು ಬರೆದಿದೆ. ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಲು ಸಜ್ಜುಗೊಂಡಿರುವ ಈ ಚಿತ್ರದಲ್ಲಿ ಸ್ಟಾರ್ ನಟರಾದ ರಾಮ್ಚರಣ್ ಹಾಗೂ ಜೂನಿಯರ್ ಎನ್ಟಿಆರ್ ನಟನೆ ಮಾಡಿದ್ದಾರೆ. ತಾವು ಅಭಿನಯಿಸಿರುವ ಸಿನಿಮಾ ಸಕ್ಸಸ್ ಕಾಣ್ತಿದ್ದಂತೆ ರಾಮ್ಚರಣ್ ವಿಶ್ವಪ್ರಸಿದ್ಧ ಗೋಲ್ಡನ್ ಟೆಂಪಲ್ನಲ್ಲಿ ಲಂಗರ್ ಸೇವೆ ಆಯೋಜಿಸಿದ್ದಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: ಹನಿಮೂನ್ ಅಲ್ಲ, ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ.. ಚಿತ್ರೀಕರಣದಲ್ಲಿ ಕಾಣಿಸಿಕೊಂಡ ಆಲಿಯಾ!
ರಾಮ್ ಚರಣ್ ಅವರ ಪತ್ನಿ ಉಪಾಸನ ಇದರ ವಿಡಿಯೋ ತುಣುಕೊಂದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ. ಅದರಲ್ಲಿ ರಾಮ್ ಚರಣ್ ಆಯೋಜನೆ ಮಾಡಿದ್ದ ಲಂಗರ್ ಸೇವೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆರ್ಆರ್ಆರ್ ಯಶಸ್ಸಿನ ಬೆನ್ನಲ್ಲೇ ನಟ ಮತ್ತೊಂದು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಾರಣ ಅವರು ಇಲ್ಲಿಗೆ ಬರಲು ಸಾಧ್ಯವಾಗಿಲ್ಲ, ಹೀಗಾಗಿ, ತಾವು ಭಾಗಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಆರ್ಆರ್ಆರ್ ಚಿತ್ರದ ಯಶಸ್ಸಿಗೋಸ್ಕರ ಅಮೃತಸರದ ಗೋಲ್ಡನ್ ಟೆಂಪಲ್ನಲ್ಲಿ ಲಂಗರ್ ಸೇವೆ ಆಯೋಜನೆ ಮಾಡಲಾಗಿದ್ದು, ನಿಮ್ಮ ಪ್ರೀತಿಯಿಂದ ನಾವು ಆಶೀರ್ವದಿಸಲ್ಪಟ್ಟಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ರಾಮ್ ಚರಣ್ ಅವರ ನಿಸ್ವಾರ್ಥ ಸೇವೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ದೇವರು ಅವರಿಗೆ ಆಶೀರ್ವಾದ ನೀಡಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಸಿನಿಮಾ ಯಶಸ್ಸು ಕಾಣುತ್ತಿದ್ದಂತೆ ಇಡೀ ಚಿತ್ರತಂಡಕ್ಕೆ ರಾಮ್ ಚರಣ್ ದುಬಾರಿ ಉಡುಗೊರೆ ನೀಡಿದ್ದರು. ತೆರೆ ಮರೆಯಲ್ಲಿ ಕೆಲಸ ಮಾಡಿದ್ದ ಎಲ್ಲ ಸದಸ್ಯರಿಗೆ ಚಿನ್ನದ ನಾಣ್ಯ ನೀಡಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಏನಿದು ಲಂಗರ್ ಸೇವಾ?: ಸಿಖ್ಖರ ಪವಿತ್ರ ಧಾರ್ಮಿಕ ಕ್ಷೇತ್ರ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ದಿನನಿತ್ಯ ಜಾತಿ-ಧರ್ಮ ಮೀರಿ ಸಹಸ್ರ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಹೀಗೆ ಬರುವ ಜನರಿಗೆ ಬಿಸಿಯೂಟ ಒದಗಿಸುವುದನ್ನು ಲಂಗರ್ ಸೇವಾ ಎನ್ನುತ್ತಾರೆ. ಸಿಖ್ಖರ ಮೊದಲ ಗುರು ಗುರುನಾನಕ್ ಅವರ ಕಾಲದಿಂದಲೂ ಈ ಪದ್ಧತಿ ನಡೆದುಕೊಂಡು ಬರುತ್ತಿದೆ.