ಹೈದರಾಬಾದ್: ಕನ್ನಡತಿ, ಸ್ಟಾರ್ ನಟಿಯಾಗಿರುವ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಡಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ದುಬೈನ ಕಾರ್ಯಕ್ರಮದಲ್ಲಿ ನಡೆದ ಮಾತಿನ ಚಕಮಕಿಯಲ್ಲಿ ಈ ರೀತಿಯ ಹತ್ಯೆ ಬೆದರಿಕೆ ಬಂದಿದೆ ಎಂಬ ಸುದ್ದಿ ಬುಧವಾರ ಹರಿದಾಡಿದೆ.
ದುಬೈ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ನಡೆದ ಮಾತಿನ ಚಕಮಕಿ ವೇಳೆ ನಟಿಗೆ ಕೊಲೆ ಬೆದರಿಕೆ ಬಂದಿದೆ ಎಂದು ಬಾಲಿವುಡ್ನ ಪ್ರಮುಖ ಪ್ಯಾಪಾರಾಜಿಗಳಲ್ಲಿ ಒಬ್ಬರಾಗಿರುವ ವೈರಲ್ ಬಯಾನಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ, ಇದೀಗ ನಟಿ ಕಾರ್ಯಕ್ರಮ ಮುಗಿಸಿಕೊಂಡು ದುಬೈನಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಈ ಸುದ್ದಿ ಕೇಳಿದ ಅಭಿಮಾನಿಗಳು, ಕಳವಳ ವ್ಯಕ್ತಪಡಿಸಿದ್ದು, ನಟಿ ಸುರಕ್ಷಿತವಾಗಿರಲಿ ಎಂದು ಹಾರೈಸಿದ್ದಾರೆ.
ನಟಿಗೆ ಕೊಲೆ ಬೆದರಿಕೆ ಇದೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ ಈ ಕುರಿತು ವೆಬ್ಲಾಯ್ಡ್ ಸತ್ಯಾಸತ್ಯತೆ ಪರಿಶೀಲನೆಗೆ ನಟಿಯ ತಂಡವನ್ನು ಸಂಪರ್ಕಿಸಿದ್ದಾರೆ. 'ಇದು ತಪ್ಪು ಮಾಹಿತಿಯಾಗಿದ್ದು, ಈ ವಿಚಾರದ ಬಗ್ಗೆ ತಮಗೆ ತಿಳಿದಿಲ್ಲ. ಯಾರು ಈ ಸುದ್ದಿ ಹರಡಿದರು ಎಂದು ತಿಳಿದಿಲ್ಲ. ಇದು ಸಂಪೂರ್ಣವಾಗಿ ಆಧಾರ ರಹಿತವಾಗಿದೆ. ನಟಿಗೆ ಈ ರೀತಿಯ ಯಾವುದೇ ಬೆದರಿಕೆ ಇಲ್ಲ' ಎಂದಿದ್ದಾರೆ.
ಬಾಲಿವುಡ್ ಅಂಗಳದಲ್ಲಿ ಇದೀಗ ನಟಿಯ ಕೊಲೆ ಬೆದರಿಕೆ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದೆಯಾದರೂ, ಈ ಸಂಬಂಧ ನಟಿ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಈ ನಡುವೆ ವೈರಲ್ ಬಯಾನಿ ಕೂಡ ತಮ್ಮ ಸಾಮಾಜಿಕ ಜಾಲತಾಣದಿಂದ ಈ ಮುಂಚೆ ಪೋಸ್ಟ್ ಮಾಡಿದ್ದ ಸುದ್ದಿಯನ್ನು ತೆಗೆದು ಹಾಕಿದ್ದಾರೆ. ಬುಧವಾರ ಮುಂಬೈನಿಂದ ನಿರ್ಗಮಿಸುವ ವೇಳೆ ಮಹಿಳೆ. ಮೊಮೊ ಜೀನ್ಸ್ ಜೊತೆಗೆ ಕ್ರಾಪ್ ಟಾಪ್ ಧರಿಸಿ ಗಮನ ಸಳೆದರು.
ಬಾಲಿವುಡ್ನಲ್ಲಿ ನಟ ಸಲ್ಮಾನ್ ಖಾನ್ ಜೊತೆಗೆ ಕಿಸಿ ಕಾ ಬಾಯ್ ಕಿಸಿ ಕಿ ಜಾನ್ ಚಿತ್ರದಲ್ಲಿ ನಟಿ ಪೂಜಾ ಗಾಂಧಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಮುಂದಿನ ಚಿತ್ರವಾದ ದೇವಾದಲ್ಲಿ ನಟ ಶಹೀದ್ ಜಪೂರ್ ಜೊತೆಗೆ ಅವರು ನಟಿಸುತ್ತಿದ್ದು, ಈ ಚಿತ್ರಕ್ಕೆ ರೋಶನ್ ಆ್ಯಂಡ್ರ್ಯೂ ನಿರ್ದೇಶನವಿದೆ, ಸಿದ್ಧಾರ್ಥ್ ರಾಯ್ ಕಪೂರ್ ಮತ್ತು ಜೀ ಸ್ಟುಡಿಯೋ ಇದರ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಇದರ ಹೊರತಾಗಿ ನಟ ಅಕ್ಷಯ್ ಕುಮಾರ್ ಜೊತೆಗೆ ಹೌಸ್ಫುಲ್ 5ನಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: 'ಅನಿಮಲ್'ನಲ್ಲಿದ್ದ ರಣ್ಬೀರ್ ಕಪೂರ್ - ಬಾಬಿ ಡಿಯೋಲ್ ಕಿಸ್ಸಿಂಗ್ ಸೀನ್ ಕಟ್