ETV Bharat / entertainment

ಮೂರೇ ದಿನದಲ್ಲಿ 150 ಕೋಟಿ ಬಾಚಿದ 'ಪೊನ್ನಿಯನ್​ ಸೆಲ್ವನ್​ 2': ವಿಕ್ರಮ್​, ಐಶ್ವರ್ಯ ಚಿತ್ರ ಸೂಪರ್​ ಹಿಟ್​

'ಪೊನ್ನಿಯನ್​ ಸೆಲ್ವನ್​ 2' ಚಿತ್ರ ಕೇವಲ ಮೂರೇ ದಿನದಲ್ಲಿ 150 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

Ponniyin Selvan 2
'ಪೊನ್ನಿಯನ್​ ಸೆಲ್ವನ್​ 2'
author img

By

Published : May 1, 2023, 7:31 PM IST

ಬಹುನಿರೀಕ್ಷಿತ 'ಪೊನ್ನಿಯನ್​ ಸೆಲ್ವನ್​ 2 ಚಿತ್ರ ಶುಕ್ರವಾರ ತೆರೆ ಕಂಡಿದ್ದು, ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ವಿಮರ್ಷಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಸಂಪಾದಿಸಿದೆ. ಸಿನಿಮಾವು ತೆರೆಕಂಡ ಮೊದಲ ದಿನ 32 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ಎರಡನೇ ದಿನ 24 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವಲ್ಲಿ ಯಶಸ್ವಿಯಾಗಿತ್ತು. ನಿನ್ನೆ 3 ದಿನ ಭಾನುವಾರ ಆದ್ದರಿಂದ ಸಿನಿಮಾ ಉತ್ತಮ ಗಳಿಕೆ ಕಂಡಿದೆ. ಕೇವಲ ಮೂರೇ ದಿನದಲ್ಲಿ ಚಿತ್ರ 150 ಕೋಟಿ ರೂಪಾಯಿ ಬಾಚಿಕೊಂಡಿದೆ.

ಈ ಅಂಕಿ ಅಂಶದೊಂದಿಗೆ ಚಿತ್ರವು ಮುಂದಿನ ದಿನಗಳಲ್ಲಿ ಬಾಕ್ಸ್​ ಆಫೀಸ್​ನಲ್ಲಿ ಪ್ರಾಬಲ್ಯ ಸಾಧಿಸಲಿದೆ. ಮೂರನೇ ದಿನವೂ ಗಲ್ಲಾಪೆಟ್ಟಿಗೆಯಲ್ಲಿ ವಿಕ್ರಮ್​ ಮತ್ತು ಐಶ್ವರ್ಯಾ ರೈ ಅವರ ಚಿತ್ರವು ಯಶಸ್ವಿಯಾಗಿದೆ. ದಕ್ಷಿಣದ ಟಾಪ್​ ಡೈರೆಕ್ಟರ್​ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 2 ಹೆಚ್ಚಿನ ಉತ್ಸಾಹ ಮತ್ತು ನಿರೀಕ್ಷೆಯ ನಡುವೆ ಬಿಡುಗಡೆಯಾಗಿದ್ದು, ಅದರಂತೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಎರಡು ಭಾಗಗಳ ಐತಿಹಾಸಿಕ ಸಾಹಸಗಾಥೆ ಸಿನಿಪ್ರಿಯರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

ಕೇವಲ ಮೂರೇ ದಿನದಲ್ಲಿ ಚಿತ್ರ ಅದ್ಭುತ ಕಲೆಕ್ಷನ್​ ಮಾಡಿದೆ. ಪೊನ್ನಿಯನ್​ ಸೆಲ್ವನ್​ 2 ಭಾರತ ಮತ್ತು ವಿದೇಶಗಳ ಬಾಕ್ಸ್​ ಆಫೀಸ್​ನಲ್ಲಿ ಲಾಭದಾಯಕ ಓಟ ಮುಂದುವರೆಸಿದೆ. ಮೂರು ದಿನಗಳಲ್ಲಿ 150 ಕೋಟಿ ಗಳಿಸಿದೆ ಎಂದು ವ್ಯಾಪಾರ ತಜ್ಞ ರಮೇಶ್ ಬಾಲಾ ತಮ್ಮ ಟ್ವೀಟ್‌ನಲ್ಲಿ ಖಚಿತಪಡಿಸಿದ್ದಾರೆ. ವಾರಾಂತ್ಯದಲ್ಲಿ ಯಶಸ್ವಿ ಪ್ರದರ್ಶನದ ನಂತರ ವಾರದ ದಿನಗಳಲ್ಲಿ ವೀಕ್ಷಕರ ಪ್ರತಿಕ್ರಿಯೆಗಾಗಿ ಚಿತ್ರತಂಡ ಕಾಯುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಾದ ಉತ್ತರ ಅಮೆರಿಕದಲ್ಲಿ ಚಿತ್ರವು ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ.

ಇದನ್ನೂ ಓದಿ: 'ನನಗೆಲ್ಲವೂ ಆಗಿರುವ ನಿನಗೆ ಹ್ಯಾಪಿ ಬರ್ತ್​ಡೇ': ಸರಣಿ ಫೋಟೋ ಹಂಚಿಕೊಂಡು ಪತ್ನಿಗೆ ವಿಶ್​ ಮಾಡಿದ ವಿರಾಟ್​

ವಿಕ್ರಮ್ - ಐಶ್ವರ್ಯ ರೈ ಅಭಿನಯದ ಎಪಿಕ್ ಡ್ರಾಮಾಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಚಿತ್ರ. ಅವರ ಕಾದಂಬರಿ ಹೆಸರನ್ನೇ ಈ ಸಿನಿಮಾಗೂ ಇಡಲಾಗಿದೆ. 'ಪೊನ್ನಿಯಿನ್ ಸೆಲ್ವನ್ 1' 2022ರ ಸೆಪ್ಟೆಂಬರ್​ನಲ್ಲಿ ಬಿಡುಗಡೆ ಆಗಿತ್ತು. ಮೊದಲ ಭಾಗ ಕೂಡ ಉತ್ತಮ ಸ್ಪಂದನೆ ಸ್ವೀಕರಿಸಿತ್ತು. ಮೊದಲ ದಿನವೇ 80 ಕೋಟಿ ರೂಪಾಯಿ ಗಳಿಸಿ ಒಟ್ಟು 500 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಹಾಗಾಗಿ ಸೀಕ್ವೆಲ್​ ಮೇಲೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ವಿಕ್ರಮ್, ಕಾರ್ತಿ, ಐಶ್ವರ್ಯ ರೈ ಬಚ್ಚನ್, ಜಯಂ ರವಿ, ತ್ರಿಶಾ ಕೃಷ್ಣನ್, ಶೋಭಿತಾ ಧೂಳಿಪಾಲ, ಐಶ್ವರ್ಯ ಲಕ್ಷ್ಮಿ, ಪ್ರಕಾಶ್ ರಾಜ್ ಮತ್ತು ವಿಕ್ರಮ್ ಪ್ರಭು ಸೇರಿದಂತೆ ಹಲವರು ಅಭಿನಯಿಸಿರುವ ಈ ಚಿತ್ರ ಚೋಳ ಸಾಮ್ರಾಜ್ಯದ ಇತಿಹಾಸವನ್ನು ವಿವರಿಸಿದೆ. ಚಿತ್ರವು 3,200ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಿದೆ. ಮುಂಗಡ ಟಿಕೆಟ್​ ಬುಕಿಂಗ್​ನಲ್ಲೇ 11 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 'ದಿ ಕೇರಳ ಸ್ಟೋರಿ'ಯಲ್ಲಿನ ಆರೋಪ ಸಾಬೀತು ಮಾಡಿದ್ರೆ 1 ಕೋಟಿ ರೂ. ಬಹುಮಾನ: ಎಂವೈಎಲ್ ಮುಖಂಡ ಫಿರೋಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.