ETV Bharat / entertainment

ಶ್ರೀನಗರದಲ್ಲಿ ದಶಕದ ನಂತರ ಥಿಯೇಟರ್‌ಗಳು ಭರ್ತಿ ಎಂದ ಮೋದಿ: ಶಾರುಖ್​ ಅಭಿಮಾನಿಗಳು ಖುಷ್‌!

author img

By

Published : Feb 9, 2023, 5:48 PM IST

'ಪಠಾಣ್' ಹೆಸರು ಉಲ್ಲೇಖಿಸದೇ ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರದ ಯಶಸ್ಸನ್ನು ಹೊಗಳಿದ್ದಾರೆ.

Modi praises Pathaan
ಪಠಾಣ್ ಹೊಗಳಿದ ಪ್ರಧಾನಿ ಮೋದಿ

ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದ ಪಠಾಣ್​ ಸಿನಿಮಾ ಹೊಸ ಹೊಸ ದಾಖಲೆಗಳೊಂದಿಗೆ ಮುನ್ನುಗ್ಗುತ್ತಿದೆ. ವಿವಾದಗಳ ಸುಳಿಯಲ್ಲಿ ಸಿಲುಕಿ ಜನವರಿ 25ರಂದು ಬಿಡುಗಡೆಯಾದ ಸಿನಿಮಾ 15 ದಿನಗಳಲ್ಲಿ 877 ಕೋಟಿ ರೂಪಾಯಿ ಸಂಪಾದಿಸಿದೆ. ಬಾಲಿವುಡ್ ಕಿಂಗ್ ಖಾನ್ ಆ್ಯಕ್ಷನ್​ ಅವತಾರದಲ್ಲಿ ಅಬ್ಬರಿಸಿದ್ದು, ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಇದೀಗ 'ಪಠಾಣ್' ಹೆಸರು ಉಲ್ಲೇಖಿಸದೇ ಪ್ರಧಾನಿ ನರೇಂದ್ರ ಮೋದಿ ಅವರು ಸಿನಿಮಾ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು?: ನಿನ್ನೆ ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಮಾತನಾಡುವಾಗ ಜಮ್ಮು ಕಾಶ್ಮೀರದಲ್ಲಾಗುತ್ತಿರುವ ಬದಲಾವಣೆ, ಅಭಿವೃದ್ಧಿಯನ್ನು ಉಲ್ಲೇಖಿಸಿದ್ದರು. ಶ್ರೀನಗರದಲ್ಲಿ ದಶಕಗಳ ನಂತರ ಥಿಯೇಟರ್​ಗಳು ಹೌಸ್​ಫುಲ್​ ಆಗುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಬೇಶರಂ ಹಾಡಿಗೆ ವಿರೋಧ: ಪಠಾಣ್​ ಚಿತ್ರದ ಬೇಶರಂ ಹಾಡು ಕಳೆದ ಡಿಸೆಂಬರ್ ಎರಡನೇ ವಾರದಲ್ಲಿ ರಿಲೀಸ್​ ಆಗಿತ್ತು. ನಟಿ ದೀಪಿಕಾ ಪಡುಕೋಣೆ ಅವರ ವಸ್ತ್ರದ ವಿಚಾರವಾಗಿ ಭಾರಿ ಟೀಕೆ ವ್ಯಕ್ತವಾಗಿತ್ತು. ನಟಿ ಧರಿಸಿದ್ದ ಕೇಸರಿ ಬಣ್ಣದ ಬಿಕಿನಿ ವಿರುದ್ಧ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಹಲವೆಡೆ ಪ್ರತಿಭಟನೆ ನಡೆದಿತ್ತು. ಸಿನಿಮಾ ಬಹಿಷ್ಕರಿಸುವ ಎಚ್ಚರಿಕೆಯೂ ಇತ್ತು. ನಟಿಯ ವೇಷಭೂಷಣ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಹಲವರು ಆರೋಪಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪಠಾಣ್​ ಬಾಯ್ಕಾಟ್ ಅಭಿಯಾನ ಕೂಡ ಆರಂಭವಾಗಿತ್ತು.

ಜನವರಿ 25ರಂದು ಸಿನಿಮಾ ಬಿಡುಗಡೆ ಆಗಿದ್ದು, ಮೊದಲೆರಡು ದಿನಗಳು ಸಹ ಪ್ರತಿಭಟನೆ ನಡೆದವು. ಚಿತ್ರಮಂದಿರಗಳ ಮೇಲೆ ಕಲ್ಲು ತೂರಾಟ ನಡೆಯಿತು. ಆದ್ರೆ ಚಿತ್ರ ನಿರೀಕ್ಷೆ ಮೀರಿ ಯಶಸ್ಸು ಸಾಧಿಸಿದೆ.

ಇದನ್ನೂ ಓದಿ: 'ಬ್ಲ್ಯಾಕ್ ಟೈಗರ್' ರವೀಂದ್ರ ಕೌಶಿಕ್ ಬಯೋಪಿಕ್ ಘೋಷಿಸಿದ ಅನುರಾಗ್​ ಬಸು

ಕಾರ್ಯಕರ್ತರಿಗೆ ಪ್ರಧಾನಿ ಕಿವಿಮಾತು: ಪಠಾಣ್​ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದ ವೇಳೆ ಅನಗತ್ಯ ಟೀಕೆ ಬೇಡ ಎಂದು ಕಾರ್ಯಕರ್ತರಿಗೆ ಪ್ರಧಾನಿ ಕಿವಿಮಾತು ಹೇಳಿದ್ದರು. ಶಾರುಖ್ ಮತ್ತು ದೀಪಿಕಾ ನಟನೆಯ​ ಈ ಚಿತ್ರ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿ ಪರ-ವಿರೋಧ ಚರ್ಚೆ ಆರಂಭವಾಗಿತ್ತು. ಈ ಎಲ್ಲವನ್ನೂ ಗಮನಿಸಿದ್ದ ಪ್ರಧಾನಿ ಮೋದಿ ಅವರು ಅನಗತ್ಯ ಕಮೆಂಟ್​ಗಳಿಂದ ದೂರವಿರುವಂತೆ ಕಿವಿಮಾತು ಹೇಳಿದ್ದರು.

ಇದನ್ನೂ ಓದಿ: ಪಠಾಣ್​ ವಿವಾದ ಬೆನ್ನಲ್ಲೇ, ಅನಗತ್ಯ ಟೀಕೆ ಬೇಡ ಕಾರ್ಯಕರ್ತರಿಗೆ ಪ್ರಧಾನಿ ಕಿವಿಮಾತು

ಪ್ರಧಾನಿ ವಿಡಿಯೋ ವೈರಲ್​: ಶ್ರೀನಗರದಲ್ಲಿ ಚಿತ್ರಮಂದಿರಗಳು ಭರ್ತಿಯಾಗಿವೆ ಎಂದು ಹೇಳಿರುವ ಪ್ರಧಾನಿ ಮೋದಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಿನಿಮಾವನ್ನು ಪರೋಕ್ಷವಾಗಿಯಾದರೂ ಹೊಗಳಿದರೆಂದು ಶಾರುಖ್​ ಖಾನ್​ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.