ETV Bharat / entertainment

ಪ್ರಭಾಸ್​ ಅಭಿನಯದ 'ರಾಜಾ ಡಿಲಕ್ಸ್' ಶೂಟಿಂಗ್‌ ಸೀನ್‌ಗಳು ವೈರಲ್​ - ಟ ಪ್ರಭಾಸ್​ ಅವರು ಮತ್ತೆ ಆ್ಯಕ್ಷನ್​ ಪಾತ್ರಗಳಲ್ಲಿ

ಕೈ ತುಂಬಾ ಸಿನಿಮಾಗಳನ್ನು ಇಟ್ಟುಕೊಂಡಿರುವ ನಟ ಪ್ರಭಾಸ್ ಅವರ ಹೊಸ ಸಿನಿಮಾದ ಹೆಸರು 'ರಾಜಾ ಡಿಲಕ್ಸ್'. ಈ ಕೆಲಸದಲ್ಲಿ ಅವರೇನೋ ಬ್ಯುಸಿಯಾಗಿದ್ದಾರೆ. ಆದ್ರೆ ಇನ್ನೊಂದೆಡೆ, ಚಿತ್ರದ​ ಕೆಲವು ವಿಡಿಯೋ, ಫೋಟೋಗಳು ಸೋರಿಕೆಯಾಗಿವೆ.

ಪ್ರಭಾಸ್​ ಅಭಿನಯದ ರಾಜಾ ಡಿಲಕ್ಸ್​ ಚಿತ್ರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​
The video of Prabhas starrer Raja Deluxe has gone viral on social media
author img

By

Published : Dec 26, 2022, 3:27 PM IST

ಹೈದರಾಬಾದ್​: ನಟ ಪ್ರಭಾಸ್​ ಅವರು ಮತ್ತೆ ಆ್ಯಕ್ಷನ್ ಸಿನಿಮಾ​ ಪಾತ್ರಗಳಲ್ಲಿ ಮಗ್ನರಾಗಿದ್ದಾರೆ. ಅವರ ಮುಂದಿನ ಚಿತ್ರದ ಹೆಸರು 'ರಾಜಾ ಡಿಲಕ್ಸ್'. ಇದರ ಕೆಲವು ಸೀನ್​ಗಳೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ನಿರ್ದೇಶಕ ಮಾರುತಿ ಜೊತೆ ಪ್ರಭಾಸ್​ ಮಾತುಕತೆ ನಡೆಸುತ್ತಿರುವ ಸೆಟ್‌ನ​ ಫೋಟೋಗಳು ಕಂಡುಬಂದಿವೆ. ಶೂಟಿಂಗ್​ಗೆ ಸಜ್ಜಾಗಿ ಕುಳಿತಿರುವ ಪ್ರಭಾಸ್ ಅವರ​ ಚಿತ್ರಗಳನ್ನು ಅಭಿಮಾನಿಗಳು ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದಾರೆ.

'ರಾಜಾ ಡಿಲಕ್ಸ್'​ನಲ್ಲಿ ಪ್ರಭಾಸ್​ಗೆ ಮಾಳವಿಕಾ ಮೋಹನನ್​, ನಿಧಿ ಅಗರ್‌ವಾಲ್​ ಮತ್ತು ರಿದ್ದಿ ಕುಮಾರ್​ ಜೊತೆಯಾಗಿದ್ದಾರೆ. ಇದೊಂದು ಕಾಮಿಡಿ-ಹಾರರ್​ ಚಿತ್ರ ಎನ್ನಲಾಗುತ್ತಿದೆ. ಸಂಜಯ್​ ದತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷತೆ.

'ಬಾಹುಬಲಿ' ದೊಡ್ಡ ಮಟ್ಟದಲ್ಲಿ ಹಿಟ್ ಆದ​ ಬಳಿಕ ಪ್ರೇಮಕಾವ್ಯ 'ರಾಧೆ ಶ್ಯಾಮ್​' ಚಿತ್ರದಲ್ಲಿ ನಟಿಸಿದ ಪ್ರಭಾಸ್​ಗೆ ಅಂತಹ ಯಶಸ್ಸು ಸಿಗಲಿಲ್ಲ. ಬೃಹತ್‌ ಬಜೆಟ್ಟಿನ ಚಿತ್ರಗಳ ನಡುವೆ ರಾಜಾ ಡಿಲಕ್ಸ್​ ಪ್ರಭಾಸ್​ಗೆ ಬ್ರೇಕ್​ ನೀಡಲಿದೆ ಎಂಬುದೊಂದು ಊಹೆ. ಈ ನಡುವೆ 'ಸಲಾರ್'​, 'ಆದಿಪುರುಷ್'​ ಮತ್ತು 'ಪ್ರಾಜೆಕ್ಟ್​ ಕೆ' ಚಿತ್ರಗಳಲ್ಲೂ ಪ್ರಭಾಸ್ ಕಾರ್ಯನಿರತರಾಗಿದ್ದಾರೆ.

ಇದನ್ನೂ ಓದಿ: 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ಕಲಾವಿದ ಚಲಪತಿ ರಾವ್​ ನಿಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.