ETV Bharat / entertainment

ಜ್ಯೋತಿಷಿಯ ಶಾಸ್ತ್ರ ಕೇಳಿ ಪೆಟ್ರೋಮ್ಯಾಕ್ಸ್ ಸಿನಿಮಾ‌ ರಿಲೀಸ್ ಡೇಟ್ ಅನೌನ್ಸ್​​  ಮಾಡಿದ "ಅಭಿನಯ ಚತುರ" - ಜುಲೈ 15ಕ್ಕೆ ಸಿನಿಮಾ ಬಿಡುಗಡೆ

ನೀನಾಸಂ ಸತೀಶ್ ಮತ್ತು ಹರಿಪ್ರಿಯಾ ನಟನೆಯ ಬಹು ನಿರೀಕ್ಷಿತ ಚಿತ್ರದ ಬಿಡುಗಡೆಯ ದಿನಾಂಕವನ್ನು ವಿಭಿನ್ನ ರೀತಿಯಲ್ಲಿ ಸಿನಿ ಪ್ರಿಯರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಅಂತೂ ಇದೇ ತಿಂಗಳಲ್ಲಿ ಪೆಟ್ರೋಮ್ಯಾಕ್ಸ್ ತೆರೆಗೆ ಬರಲಿದೆ.

Petromax
ಪೆಟ್ರೋಮ್ಯಾಕ್ಸ್
author img

By

Published : Jul 6, 2022, 7:52 PM IST

ಸ್ಯಾಂಡಲ್ ವುಡ್​ನಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ತನ್ನದೇ ಬೇಡಿಕೆ ಹೊಂದಿರುವ ನಟ‌ ನೀನಾಸಂ ಸತೀಶ್. ಸದ್ಯ ಡಿಯರ್ ವಿಕ್ರಮ್ ಸಿನಿಮಾದ‌ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ನಡುವೆ ನೀನಾಸಂ ಸತೀಶ್ ಅವರ ಮತ್ತೊಂದು ಚಿತ್ರ ಪೆಟ್ರೋಮ್ಯಾಕ್ಸ್​ನ ಬಿಡುಗಡೆ ದಿನಾಂಕ ಅನೌನ್ಸ್​​ ಆಗಿದೆ. ಟ್ರೈಲರ್ ನಿಂದಲೇ ಹೊಸತನಕ್ಕೆ ಸಾಕ್ಷಿಯಾಗಿರೋ ಪೆಟ್ರೋಮ್ಯಾಕ್ಸ್ ಸಿನಿಮಾ ಯಾವ ದಿನ‌ ಬಿಡುಗಡೆ ಮಾಡಿದರೆ ಒಳ್ಳೆಯದು ಎಂದು ಜ್ಯೋತಿಷಿ ಹತ್ತಿರ ಶಾಸ್ತ್ರ ಕೇಳಿ ಅನೌನ್ಸ್​​ ಮಾಡಿದ್ದಾರೆ.

ಪೆಟ್ರೋಮ್ಯಾಕ್ಸ್​ನ ಬಿಡುಗಡೆ ದಿನಾಂಕ ತಿಳಿಸಲು ವಿಭಿನ್ನ ರೀತಿಯಲ್ಲಿ ಸಿನಿಮಾ ತಂಡ ಪ್ರಯತ್ನಿಸಿದೆ. ಮಿಮಿಕ್ರಿ ಗೋಪಿ ಅವರಿಂದ ಬ್ರಹ್ಮಾಂಡ ಗುರೂಜಿಯ ಹೋಲುವ ವೇಷ ಧರಿಸಿ ದಿನಾಂಕ ತಿಳಿಸುತ್ತಾರೆ. ವೇಷ ಧರಿಸಿದ ಜ್ಯೋತಿಷಿ ಹತ್ತಿರ ಸಿನಿಮಾದ ನಾಯಕ, ನಿರ್ದೇಶಕ ಮತ್ತು ನಿರ್ಮಾಪಕರು ಹೋಗಿ ದಿನಾಂಕ ತಿಳಿಸಿವಂತೆ ಕೇಳಿಕೊಳ್ಳುವ ರೀತಿಯ ವಿಡಿಯೋ ಮಾಡಿ ಬಿಡುಗಡೆಯ ದಿನಾಂಕವನ್ನು ತಿಳಿಸಿದ್ದಾರೆ.

ಜ್ಯೋತಿಷ್ಯ ಶಾಸ್ತ್ರ ಕೇಳಿ ಪೆಟ್ರೋಮ್ಯಾಕ್ಸ್ ಸಿನಿಮಾ ಬಿಡುಗಡೆ ದಿನಾಂಕ ತಿಳಿಸಿದ ಚಿತ್ರ ತಂಡ

ಪೆಟ್ರೋಮ್ಯಾಕ್ಸ್ ಹೆಸರಿನಿಂದಲೇ ವಿಭಿನ್ನತೆಯನ್ನು ಕಾಯ್ದುಕೊಂಡು ಬಂದಿದೆ. ಈ ಚಿತ್ರದಲ್ಲಿ ಸತೀಶ್ ನೀನಾಸಂ ಜೊತೆ ಬ್ಯೂಟಿ ಕ್ವೀನ್ ಹರಿಪ್ರಿಯಾ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಸಿದ್ಲಿಂಗು, ನೀರ್ ದೋಸೆ ಚಿತ್ರಗಳ‌ ಮಾಡಿ ಭರವಸೆ ನಿರ್ದೇಶಕ ಅಂತಾ ಕರೆಯಿಸಿಕೊಂಡಿರುವ ವಿಜಯ್ ಪ್ರಸಾದ್ ಕಾಮಿಡಿಯಿಂದಲೇ ಮೆಸೇಜ್ ಹೇಳುವ ಪ್ರಯತ್ನ ಮಾಡಿದ್ದಾರೆ.

ಟ್ರೈಲರ್​ನಲ್ಲಿ ಡಬ್ಬಲ್ ಮಿನಿಂಗ್ ಸಂಭಾಷಣೆ ಜಾಸ್ತಿ ಅನಿಸಿದರೂ ಪಾತ್ರಗಳಿಗೆ ತಕ್ಕಂತೆ ಇದೆ. ಸತೀಶ್ ನೀನಾಸಂ ಹಾಗೂ ಹರಿಪ್ರಿಯಾ ಜೊತೆಗೆ ಗೊಂಬೆಗಳ ಲವ್ ಖ್ಯಾತಿಯ ಅರುಣ್, ನಾಗಭೂಷಣ್, ಕಾರುಣ್ಯಾ ರಾಮ್ ಕಾಣಿಸಿಕೊಳ್ಳಲಿದ್ದಾರೆ.

ಪೆಟ್ರೋಮ್ಯಾಕ್ಸ್​ಗೆ ನಿರಂಜನ್ ಬಾಬು ಅವರ ಛಾಯಾಗ್ರಹಣವಿದ್ದು, ಸುರೇಶ್ ಅರಸ್ ಸಂಕಲನ ಮತ್ತು ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿದೆ‌. ಸತೀಶ್ ಪಿಕ್ಚರ್ ಹೌಸ್​ನಲ್ಲಿ ಪೆಟ್ರೋಮ್ಯಾಕ್ಸ್ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಜ್ಯೋತಿಷಿಗಳು ಹೇಳಿದಂತೆ ಈ ತಿಂಗಳ 15ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ.

ಇದನ್ನೂ ಓದಿ: ಬಾಲಿವುಡ್​ಗೆ ರಿಮೇಕ್ ಆಗಲಿದೆಯಂತೆ ರಂಗಿತರಂಗ ಸಿನಿಮಾ: ಹೀರೋ ಆಗ್ತಾರಾ ಅಕ್ಷಯ್ ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.