ಕನ್ನಡ ಚಿತ್ರರಂಗದ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಕಾಂತಾರ ಪ್ರೀಕ್ವೆಲ್'. 2022ರ ಸೆಪ್ಟೆಂಬರ್ ಕೊನೆಯಲ್ಲಿ ತೆರೆಕಂಡ ಈ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡು, ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಸಂಪಾದಿಸಿತು. ಸಿನಿಪ್ರಿಯರ ಅಪಾರ ಪ್ರತಿಕ್ರಿಯೆ, ಬೇಡಿಕೆ ಮೇರೆಗೆ ಚಿತ್ರದ ಮತ್ತೊಂದು ಭಾಗ ನಿರ್ಮಾಣಗೊಳ್ಳುತ್ತಿದೆ.
-
@shetty_rishab @hombalefilms I've learned that auditions are being held for Kantara Chapter 1. I am eager to contribute to this esteemed project. My recent film, Magalavaaram, has garnered significant praise for my performance. I would appreciate if you could spare some time to…
— paayal rajput (@starlingpayal) December 12, 2023 " class="align-text-top noRightClick twitterSection" data="
">@shetty_rishab @hombalefilms I've learned that auditions are being held for Kantara Chapter 1. I am eager to contribute to this esteemed project. My recent film, Magalavaaram, has garnered significant praise for my performance. I would appreciate if you could spare some time to…
— paayal rajput (@starlingpayal) December 12, 2023@shetty_rishab @hombalefilms I've learned that auditions are being held for Kantara Chapter 1. I am eager to contribute to this esteemed project. My recent film, Magalavaaram, has garnered significant praise for my performance. I would appreciate if you could spare some time to…
— paayal rajput (@starlingpayal) December 12, 2023
ದಿ ಮೋಸ್ಟ್ ಎಕ್ಸ್ಪೆಕ್ಟೆಡ್ ಸಲಾರ್ ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿರುವ ದಕ್ಷಿಣದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿನ್ನೆಯಷ್ಟೇ ಒಂದು ವಿಶೇಷ ಪೋಸ್ಟ್ ಶೇರ್ ಮಾಡಿಕೊಳ್ಳೋ ಮೂಲಕ ಅಭಿಮಾನಿಗಳ ಗಮನ ಸೆಳೆದಿದೆ. ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕು ಎನ್ನುವ ಕನಸು ಹೊತ್ತ ಪ್ರತಿಭೆಗಳಿಗೆ 'ಕಾಂತಾರ' ಬಾಗಿಲು ತೆರೆದಿದೆ. ಹೌದು, ಸಿನಿಮಾಗಾಗಿ ಆಡಿಶನ್ ನಡೆಯಲಿದ್ದು, ಕಲಾವಿದರ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದೆ. ಕಲಾವಿದರು ಬೇಕಾಗಿದ್ದಾರೆ ಎಂಬ ಪೋಸ್ಟ್ ಶೇರ್ ಮಾಡಿದ ಚಿತ್ರತಂಡಕ್ಕೆ ದಕ್ಷಿಣದ ನಟಿ ಪ್ರತಿಕ್ರಿಯಿಸಿದ್ದಾರೆ.
ಆರ್ ಎಕ್ಸ್ 100 ಸಿನಿಮಾ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ದಕ್ಷಿಣದ ನಟಿ ಪಾಯಲ್ ರಜಪೂತ್ ಇತ್ತೀಚೆಗೆ ತೆರೆಕಂಡ ಮಂಗಳವಾರಂ ಸಿನಿಮಾ ಮೂಲಕವೂ ಸದ್ದು ಮಾಡಿದ್ದಾರೆ. ನಿನ್ನೆ ಹೊಂಬಾಳೆ ಫಿಲ್ಮ್ಸ್ ಮತ್ತು ರಿಷಬ್ ಶೆಟ್ಟಿ ಮಾಡಿದ್ದ ಪೋಸ್ಟ್ಗೆ ಪ್ರತಿಕ್ರಿಯಿಸಿ ಮತ್ತೆ ಹಲವರ ಗಮನ ಸೆಳೆದಿದ್ದಾರೆ.
-
I'm interested in being part of this outstanding film. Please consider me for an audition. This message is on my behalf.🦋😊
— paayal rajput (@starlingpayal) December 12, 2023 " class="align-text-top noRightClick twitterSection" data="
Payal Rajput
">I'm interested in being part of this outstanding film. Please consider me for an audition. This message is on my behalf.🦋😊
— paayal rajput (@starlingpayal) December 12, 2023
Payal RajputI'm interested in being part of this outstanding film. Please consider me for an audition. This message is on my behalf.🦋😊
— paayal rajput (@starlingpayal) December 12, 2023
Payal Rajput
ಇದನ್ನೂ ಓದಿ: 'ಕಾಂತಾರ'ದಲ್ಲಿ ನೀವೂ ನಟಿಸಬಹುದು; ಆಸಕ್ತರು ಆಡಿಶನ್ ಅವಕಾಶ ಸದುಪಯೋಗಪಡಿಸಿಕೊಳ್ಳಿ
ಪಾಯಲ್ ರಜಪೂತ್ ಟ್ವೀಟ್: ಹೊಂಬಾಳೆ ಫಿಲ್ಮ್ಸ್ ಮತ್ತು ರಿಷಬ್ ಶೆಟ್ಟಿ ಅವರನ್ನು ಉಲ್ಲೇಖಿಸಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ''ಕಾಂತಾರ ಅಧ್ಯಾಯ 1ಗಾಗಿ ಆಡಿಷನ್ ನಡೆಯುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ಗೌರವಾನ್ವಿತ ಪ್ರೊಜೆಕ್ಟ್ಗೆ ಕೊಡುಗೆ ನೀಡಲು ನಾನು ಬಹಳ ಉತ್ಸುಕಳಾಗಿದ್ದೇನೆ. ನನ್ನ ಇತ್ತೀಚಿನ ಸಿನಿಮಾ ಮಗಳವಾರಂನಲ್ಲಿನ ನನ್ನ ಅಭಿನಯಕ್ಕಾಗಿ ಪ್ರಶಂಸೆ ವ್ಯಕ್ತವಾಗಿದೆ. ನೀವು ನನ್ನ ಸಿನಿಮಾ ವೀಕ್ಷಿಸಲು ಸ್ವಲ್ಪ ಸಮಯ ಮೀಸಲಿಟ್ಟರೆ ನಾನು ಮತ್ತಷ್ಟು ಪ್ರಶಂಸಿಸಲ್ಪಡುತ್ತೇನೆ. ಕಾಂತಾರ ಪ್ರೀಕ್ವೆಲ್ನ ಆಡಿಷನ್ ಪ್ರಕ್ರಿಯೆಯ ಕುರಿತು ದಯವಿಟ್ಟು ನನಗೆ ಸಲಹೆ ನೀಡಿ. ನನ್ನ ಪೋಸ್ಟ್ ಅನ್ನು ರೀಪೋಸ್ಟ್ ಮಾಡುವ ಮೂಲಕ ನನ್ನ ಹೆಸರನ್ನು ಮುನ್ನಲೆಗೆ ತಂದ ನನ್ನ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು'' ಎಂದು ಬರೆದುಕೊಂಡಿದ್ದಾರೆ. ನಟಿ ಪಾಯಲ್ ರಜಪೂತ್ ಅವರ ಪೋಸ್ಟ್ ಟ್ವಿಟರ್ನಲ್ಲಿ ರೀಪೋಸ್ಟ್ ಆಗುವ ಮೂಲಕ ಸದ್ದು ಮಾಡುತ್ತಿದೆ.
-
Step into the Spotlight!#KantaraChapter1 Auditions Open – Apply at https://t.co/OakW1iq90a for Your Shot at Fame.
— Hombale Films (@hombalefilms) December 12, 2023 " class="align-text-top noRightClick twitterSection" data="
Shortlisted talents will be called for in person auditions. #Kantara @shetty_rishab @VKiragandur @hombalefilms @HombaleGroup @AJANEESHB @Banglan16034849… pic.twitter.com/75sm4j5MSt
">Step into the Spotlight!#KantaraChapter1 Auditions Open – Apply at https://t.co/OakW1iq90a for Your Shot at Fame.
— Hombale Films (@hombalefilms) December 12, 2023
Shortlisted talents will be called for in person auditions. #Kantara @shetty_rishab @VKiragandur @hombalefilms @HombaleGroup @AJANEESHB @Banglan16034849… pic.twitter.com/75sm4j5MStStep into the Spotlight!#KantaraChapter1 Auditions Open – Apply at https://t.co/OakW1iq90a for Your Shot at Fame.
— Hombale Films (@hombalefilms) December 12, 2023
Shortlisted talents will be called for in person auditions. #Kantara @shetty_rishab @VKiragandur @hombalefilms @HombaleGroup @AJANEESHB @Banglan16034849… pic.twitter.com/75sm4j5MSt
ಇದನ್ನೂ ಓದಿ: ಯಶ್ ರಾಧಿಕಾ ಪುತ್ರಿ ಐರಾ ಗ್ರ್ಯಾಂಡ್ ಬರ್ತ್ಡೇ ಸೆಲೆಬ್ರೇಶನ್ - ವಿಡಿಯೋ ನೋಡಿ
ಮತ್ತೊಂದು ಟ್ವೀಟ್ನಲ್ಲಿ ''ಈ ಔಟ್ಸ್ಟ್ಯಾಂಡಿಂಗ್ ಫಿಲ್ಮ್ನ ಭಾಗವಾಗಲು ನಾನು ಬಹಳ ಆಸಕ್ತಿ ಹೊಂದಿದ್ದೇನೆ. ದಯವಿಟ್ಟು ನನ್ನನ್ನು ಆಡಿಷನ್‌ಗೆ ಪರಿಗಣಿಸಿ. ಈ ಸಂದೇಶ ನನ್ನ ಪರವಾಗಿ - ಪಾಯಲ್ ರಜಪೂತ್'' ಎಂದು ಬರೆದಿದ್ದಾರೆ.