ಟಾಲಿವುಡ್ ಪವರ್ಸ್ಟಾರ್ ಪವನ್ ಕಲ್ಯಾಣ್ ಮತ್ತು ಮೆಗಾ ಹೀರೋ ಸಾಯಿ ಧರಂ ತೇಜ್ ಕಾಂಬೋದಲ್ಲಿ ತಯಾರಾಗಿರುವ 'ಬ್ರೋ' ಸಿನಿಮಾ ನಿನ್ನೆ (ಜುಲೈ 29) ತೆರೆ ಕಂಡಿದೆ. ಈ ವಾರಾಂತ್ಯದಲ್ಲಿ ಅನೇಕ ಚಿತ್ರಗಳು ಬಿಡುಗಡೆಯಾಗಿದ್ದು, ಎಲ್ಲಾ ಚಿತ್ರಮಂದಿರಗಳು ಸಿನಿ ಪ್ರೇಕ್ಷಕರಿಂದ ಹೌಸ್ ಫುಲ್ ಆಗಿದೆ. ಅದರಲ್ಲೂ 'ಬ್ರೋ' ಸಿನಿಮಾ ಹೆಚ್ಚು ಸದ್ದು ಮಾಡುತ್ತಿದೆ. ಅಭಿಮಾನಿಗಳ ಶಿಳ್ಳೆಯ ಮಧ್ಯೆ, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. 'ಬ್ರೋ' ತಮಿಳಿನ 'ವಿನೋದಯ ಸೀತಂ' ಚಿತ್ರದ ರಿಮೇಕ್ ಆಗಿದ್ದು, ತಮಿಳು ನಿರ್ದೇಶಕ ಸಮುದ್ರಖನಿ ನಿರ್ದೇಶಿಸಿದ್ದಾರೆ.
ಮೊದಲ ದಿನದ ಕಲೆಕ್ಷನ್ ಎಷ್ಟು?: 'ಬ್ರೋ' ಸಿನಿಮಾಗೆ ಮೊದಲ ದಿನವೇ ತಕ್ಕ ಪ್ರತಿಕ್ರಿಯೆ ಸಿಕ್ಕಿದೆ. ನಿರೀಕ್ಷೆಗೂ ಮೀರಿದ ಗಳಿಕೆ ಕಂಡಿದೆ. ಮೊದಲ ದಿನ 30 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಮಾಡಿದೆ ಎನ್ನುತ್ತಿದೆ ಟ್ರೇಡ್ ವಲಯಗಳು. ವಾಸ್ತವವಾಗಿ ನೋಡುವುದಾದರೆ, ತೆಲುಗು ರಾಜ್ಯಗಳಲ್ಲಿ ವಿಪರೀತ ಮಳೆಯಾಗುತ್ತಿದೆ. ಹೀಗಾಗಿ ಬ್ರೋ ಚಿತ್ರವು ಮೊದಲ ದಿನ 20 ರಿಂದ 22 ಕೋಟಿ ರೂಪಾಯಿವರೆಗೆ ಕಲೆಕ್ಷನ್ ಮಾಡಬಹುದು ಎಂದು ಟ್ರೇಡ್ ವಲಯಗಳು ಅಂದಾಜಿಸಿದ್ದವು. ಆದರೆ, ಅವರ ನಿರೀಕ್ಷೆಯನ್ನು ಮೀರಿ ಚಿತ್ರ 30 ಕೋಟಿ ರೂಪಾಯಿವರೆಗೆ ಗಳಿಸಿದೆ.
ಇದನ್ನೂ ಓದಿ: ಸಂಜಯ್ ದತ್ ಜನ್ಮದಿನ: ಬಿಗ್ ಬುಲ್ ಪೋಸ್ಟರ್ ಅನಾವರಣ - 'ಡಬಲ್ ಇಸ್ಮಾರ್ಟ್' ವಿಲನ್ ಇವ್ರು
ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ: ಬ್ರೋ ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರು ಈ ಸಿನಿಮೀಯ ಪ್ರಯತ್ನದ ಬಗ್ಗೆ ಉತ್ತಮ ಅಭಿಪ್ರಾಯಗಳನ್ನೇ ವ್ಯಕ್ತಪಡಿಸಿದ್ದಾರೆ. ಪವನ್ ಕಲ್ಯಾಣ್ ಮತ್ತು ಸಾಯಿ ಧರಂ ತೇಜ್ ನಡುವಿನ ದೃಶ್ಯಗಳು ಮತ್ತು ಅವರಿಬ್ಬರ ನಡುವಿನ ಪಾತ್ರಗಳು ಆಕರ್ಷಕವಾಗಿದೆ ಎಂದಿದ್ದಾರೆ. ಪವನ್ ಕಲ್ಯಾಣ್ ಅಭಿಮಾನಿಗಳ ಮನಸೂರೆಗೊಳ್ಳುವ ಮ್ಯಾನರಿಸಂನೊಂದಿಗೆ ಬಂದರೆ, ಸಾಯಿ ಧರಂ ತೇಜ್ ಪಾತ್ರವು ಹೆಚ್ಚು ಮನರಂಜನೆಯನ್ನು ನೀಡುತ್ತದೆ.
ಚಿತ್ರತಂಡ ಹೀಗಿದೆ.. ಈ ಸಿನಿಮಾದಲ್ಲಿ ಸಾಯಿ ತೇಜ್ ಎದುರು ನಾಯಕಿಯರಾಗಿ ಕೇತಿಕಾ ಶರ್ಮಾ ಮತ್ತು ಪ್ರಿಯಾ ಪ್ರಕಾಶ್ ನಟಿಸಿದ್ದಾರೆ. ಈ ಚಿತ್ರಕ್ಕೆ ತಮನ್ ಸಂಗೀತ ಸಂಯೋಜಿಸಿದ್ದಾರೆ. ಇನ್ನೊಂದೆಡೆ ತ್ರಿವಿಕ್ರಮ್ ಮೂಲ ಕಥೆಯಲ್ಲಿ ಕೊಂಚ ಬದಲಾವಣೆ ಮಾಡಿ ತೆಲುಗು ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಕಟ್ಟಿಕೊಟ್ಟಿದ್ದಾರೆ. ಜೀ ಸ್ಟುಡಿಯೋಸ್ ಜೊತೆಗೆ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿಯಲ್ಲಿ ವಿವೇಕ್ ಕುಚಿಬೋಟ್ಲ ಮತ್ತು ಟಿಜಿ ವಿಶ್ವಪ್ರಸಾದ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ತಣಿಕೆಲ್ಲ ಭರಣಿ, ಬ್ರಹ್ಮಾನಂದಂ, ಸುಬ್ಬರಾಜು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಹುದಿನಗಳ ನಂತರ ಬ್ರಹ್ಮಾನಂದ ಮತ್ತೆ ತೆರೆ ಮೇಲೆ ಹಾಸ್ಯನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಪಾರ್ಟಿ.. ರಣ್ವೀರ್ ಸಿಂಗ್ಗೆ ಪತ್ನಿ ದೀಪಿಕಾ ಪಡುಕೋಣೆ ಸಾಥ್