ETV Bharat / entertainment

Bro movie: ₹50 ಕೋಟಿ ಕ್ಲಬ್​ ಸೇರಿದ 'ಬ್ರೋ': ಪವನ್​ ಕಲ್ಯಾಣ್​- ಸಾಯಿ ತೇಜ್​ ಕಾಂಬೋ ಹಿಟ್​ - etv bharat kannada

Bro Day 2 Collections: 'ಬ್ರೋ' ಸಿನಿಮಾ ಎರಡನೇ ದಿನ ಸುಮಾರು 22 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಬ್ರೋ
bro
author img

By

Published : Jul 30, 2023, 12:34 PM IST

ಟಾಲಿವುಡ್​ ಪವರ್‌ಸ್ಟಾರ್​ ಪವನ್​ ಕಲ್ಯಾಣ್​ ಮತ್ತು ಮೆಗಾ ಹೀರೋ ಸಾಯಿ ಧರಂ ತೇಜ್​ ನಟನೆಯ 'ಬ್ರೋ' ಸಿನಿಮಾ ಭಾರಿ ನಿರೀಕ್ಷೆಗಳ ನಡುವೆ ಜುಲೈ 29ರಂದು ಬಿಡುಗಡೆಯಾಗಿದೆ. ವೀಕೆಂಡ್​ ಟ್ರೆಂಡ್​ ಆಗಿ ಸದ್ದು ಮಾಡುತ್ತಿರುವ ಈ ಚಿತ್ರ ಎಲ್ಲ ಥಿಯೇಟರ್​ನಲ್ಲೂ ಧೂಳೆಬ್ಬಿಸುತ್ತಿದೆ. ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಪಡೆಯುತ್ತಿದೆ. ​ಪವನ್​ ಕಲ್ಯಾಣ್​ ಅಭಿಮಾನಿಗಳ ಮನಸೂರೆಗೊಳ್ಳುವ ಮ್ಯಾನರಿಸಂನೊಂದಿಗೆ ಬಂದರೆ, ಸಾಯಿ ಧರಂ ತೇಜ್​ ನಟನೆಯೂ ಸಿನಿಮಾದ ಹೈಲೈಟ್​ ಆಗಿದೆ. ಕಲೆಕ್ಷನ್​ ವಿಚಾರದಲ್ಲೂ ವೇಗದ ಓಟ ಮುಂದುವರೆಸಿದೆ.

ಎರಡನೇ ದಿನದ ಕಲೆಕ್ಷನ್​: 'ಬ್ರೋ' ಸಿನಿಮಾಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನವೇ ಚಿತ್ರ ಸುಮಾರು 30 ಕೋಟಿ ರೂಪಾಯಿ ಬಾಚಿಕೊಂಡಿದೆ. ಎರಡನೇ ದಿನ ಸುಮಾರು 22 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನದ ಕಲೆಕ್ಷನ್ ಸ್ವಲ್ಪ ಕಡಿಮೆಯಾದಂತಿದೆ. ಆದರೆ ಈ ಚಿತ್ರ ಎರಡು ದಿನದ ಕಲೆಕ್ಷನ್​ ಮೂಲಕ ₹50 ಕೋಟಿ ಕ್ಲಬ್​ ಸೇರಿದೆ. ವಾರಾಂತ್ಯದ ಕಾರಣ ಭಾನುವಾರದಂದು ಚಿತ್ರದ ಕಲೆಕ್ಷನ್​ ವೇಗವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಟ್ರೇಡ್​ ಮೂಲಗಳು ತಿಳಿಸಿವೆ.

'ಬ್ರೋ' ತಮಿಳಿನ 'ವಿನೋದಯ ಸೀತಂ' ಚಿತ್ರದ ರಿಮೇಕ್​ ಆಗಿದ್ದು, ತಮಿಳು ನಿರ್ದೇಶಕ ಸಮುದ್ರಖನಿ ನಿರ್ದೇಶಿಸಿದ್ದಾರೆ. ಪವನ್​ ಕಲ್ಯಾಣ್​ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ ಅವರಿಗೆ ಸರಿ ಹೊಂದುವಂತೆ ಚಿತ್ರದ ಕಥೆಯನ್ನು ಕೊಂಚ ಬದಲಾವಣೆ ಮಾಡಲಾಗಿದೆ. ಪವನ್​ ಬಗ್ಗೆ ಚಿರಪರಿಚಿತರಾಗಿರುವ ತ್ರಿವಿಕ್ರಮ್​ ತಮ್ಮದೇ ಬರವಣಿಗೆಯ ಶೈಲಿಯಲ್ಲಿ ಈ ಕಥೆಯನ್ನು ಕೊಂಚ ತಿರುಚಿದ್ದಾರೆ. ಇದು ಅಭಿಮಾನಿಗಳನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಚಿತ್ರದಲ್ಲಿ ಪವನ್​ ಕಲ್ಯಾಣ್​ ಮತ್ತು ಸಾಯಿ ಧರಂ ತೇಜ್​ ನಡುವಿನ ದೃಶ್ಯಗಳೇ ಹೈಲೈಟ್​. ಅವರಿಬ್ಬರ ಪಾತ್ರಗಳು ಆಕರ್ಷಕವಾಗಿದೆ. ಈ ಸ್ಟಾರ್​ ಅಭಿಮಾನಿಗಳನ್ನು ಮಾತ್ರವಲ್ಲದೇ, ಒಬ್ಬ ಸಾಮಾನ್ಯ ಪ್ರೇಕ್ಷಕನನ್ನು ತೃಪ್ತಿಪಡಿಸುವ ಅಂಶಗಳು ಈ ಸಿನಿಮಾದಲ್ಲಿದೆ. ಪವನ್​ ಕಲ್ಯಾಣ್​ ಅವರ ಹಳೆಯ ಸಿನಿಮಾ ಹಾಡುಗಳು, ಅವರ ಟ್ರೇಡ್​ ಮಾರ್ಕ್​ ಮ್ಯಾನರಿಸಂ ಮತ್ತು ಕೆಲವು ಫೇಮಸ್​ ಗೆಟಪ್​ಗಳನ್ನು ಈ ಸಿನಿಮಾದಲ್ಲೂ ತೋರಿಸಲಾಗಿದೆ. ಇದು ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.

ಚಿತ್ರತಂಡ ಹೀಗಿದೆ..: ಬಹುದಿನಗಳ ನಂತರ ಬ್ರಹ್ಮಾನಂದ ಮತ್ತೆ ತೆರೆ ಮೇಲೆ ಹಾಸ್ಯನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಯಿ ತೇಜ್ ಎದುರು ನಾಯಕಿಯರಾಗಿ ಕೇತಿಕಾ ಶರ್ಮಾ ಮತ್ತು ಪ್ರಿಯಾ ಪ್ರಕಾಶ್ ನಟಿಸಿದ್ದಾರೆ. ಚಿತ್ರದಲ್ಲಿ ತಣಿಕೆಲ್ಲ ಭರಣಿ, ಸುಬ್ಬರಾಜು, ವೆನ್ನೆಲ ಕಿಶೋರ್, ಅಲಿ ರೆಜಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಜೀ ಸ್ಟುಡಿಯೋಸ್ ಜೊತೆಗೆ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿಯಲ್ಲಿ ವಿವೇಕ್ ಕುಚಿಬೋಟ್ಲ ಮತ್ತು ಟಿ.ಜಿ.ವಿಶ್ವಪ್ರಸಾದ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ಸಂಗೀತ ತಮನ್ ಹಾಡು ಚಿತ್ರವನ್ನು ಉತ್ತಮವಾಗಿಸಿದೆ.

ಇದನ್ನೂ ಓದಿ: Bro: ಪವನ್ ಕಲ್ಯಾಣ್ - ಸಾಯಿ ಧರಂ ತೇಜ್ ಕಾಂಬೋದಲ್ಲಿ 'ಬ್ರೋ' ಸಿನಿಮಾ: ಪ್ರೀ ರಿಲೀಸ್​ ಈವೆಂಟ್​ ಫೋಟೋಗಳಿವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.