ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸಿನಿಮಾ ಅಂದ ಮೇಲೆ ನಿರೀಕ್ಷೆ ಹೆಚ್ಚೇ ಅಲ್ವಾ?. 'ಪಠಾಣ್' ಬಾಲಿವುಡ್ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಅದರಲ್ಲೂ ನಾಲ್ಕು ವರ್ಷಗಳ ಬ್ರೇಕ್ ನಂತರ ಮರಳುತ್ತಿರುವ ಶಾರುಖ್ ಅವರ ನಟನೆ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಅದರಂತೆ ಇಂದು ಬಹುನಿರೀಕ್ಷಿತ ಪಠಾನ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಅಭಿಮಾನಿಗಳ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ. ಆ್ಯಕ್ಷನ್ ಚಿತ್ರಗಳನ್ನು ಮಾಡಿದ್ದರೂ ಕೂಡ ಶಾರುಖ್ ಖಾನ್ ರೊಮ್ಯಾಂಟಿಕ್ ಹೀರೋ ಅಂತಾನೆ ಫೇಮಸ್. ಆದರೆ ಪಠಾಣ್ ಚಿತ್ರದಲ್ಲಿ ನಿಮಗೆ ಭರಪೂರ ಆ್ಯಕ್ಷನ್ ಸೀನ್ಗಳು ಸಿಗಲಿದೆ ಅನ್ನೋ ಸುಳಿವನ್ನು ಟ್ರೈಲರ್ ನೀಡಿದೆ.
- " class="align-text-top noRightClick twitterSection" data="">
ಪಠಾಣ್ ಟ್ರೈಲರ್: ನಟ ಜಾನ್ ಅಬ್ರಾಹಂ ನೆಗೆಟಿವ್ ರೋಲ್ನಲ್ಲಿ ನಟಿಸಿದ್ದಾರೆ. ಉಗ್ರ ಸಂಘಟನೆ ನಡೆಸುವ ಅವರು ಕಾಂಟ್ರ್ಯಾಕ್ಟ್ ತೆಗೆದುಕೊಂಡು ದೇಶಗಳ ಮೇಲೆ ದಾಳಿ ಮಾಡುತ್ತಿರುತ್ತಾರೆ. ಈ ಸಂಘಟನೆ ಭಾರತವನ್ನು ಟಾರ್ಗೆಟ್ ಮಾಡುತ್ತದೆ. ಈ ದಾಳಿಯನ್ನು ತಪ್ಪಿಸಲು ಶಾರುಖ್ ಹೋರಾಡುತ್ತಾರೆ. ಇದಕ್ಕೆ ದೀಪಿಕಾ ಪಡುಕೋಣೆ ಸಾಥ್ ನೀಡುತ್ತಾರೆ. ಇದು ಚಿತ್ರ ಕಥೆ. ಟ್ರೈಲರ್ನಲ್ಲಿ ಸಾಕಷ್ಟು ಆ್ಯಕ್ಷನ್ ಸೀನ್ಗಳಿವೆ. ಶಾರುಖ್ ಹಾಗೂ ಜಾನ್ ಅಬ್ರಾಹಂ ಮುಖಾಮುಖಿಯಾಗಿ ಭರ್ಜರಿ ಫೈಟ್ ಮಾಡಿದ್ದಾರೆ. ವಾರ್ ಅಂತಹ ಆ್ಯಕ್ಷನ್ ಸಿನಿಮಾಗೆ ಹೆಸರುವಾಸಿಯಾಗಿರುವ ಸಿದ್ದಾರ್ಥ್ ಆನಂದ್ ಪಠಾಣ್ ಚಿತ್ರದಲ್ಲಿಯೂ ಭರಪೂರ ಆ್ಯಕ್ಷನ್ ಸೀನ್ಗಳನ್ನಿಟ್ಟಿದ್ದಾರೆ.
-
Wishing @iamsrk sir and the team all the best for #Pathaan
— Vijay (@actorvijay) January 10, 2023 " class="align-text-top noRightClick twitterSection" data="
Here is the trailer https://t.co/LLPfa6LR3r#PathaanTrailer
">Wishing @iamsrk sir and the team all the best for #Pathaan
— Vijay (@actorvijay) January 10, 2023
Here is the trailer https://t.co/LLPfa6LR3r#PathaanTrailerWishing @iamsrk sir and the team all the best for #Pathaan
— Vijay (@actorvijay) January 10, 2023
Here is the trailer https://t.co/LLPfa6LR3r#PathaanTrailer
ಮೂರು ಭಾಷೆಗಳಲ್ಲಿ ಪಠಾಣ್: ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಜನವರಿ 25ರಂದು ಬಿಡುಗಡೆ ಆಗಲಿದೆ. ಬಿಡುಗಡೆಗೆ ಮುಂಚಿತವಾಗಿ ಇಂದು ಚಿತ್ರ ತಯಾರಕರು ಎಲ್ಲ ಮೂರು ಭಾಷೆಗಳಲ್ಲಿ ಟ್ರೈಲರ್ ಅನ್ನು ಅನಾವರಣಗೊಳಿಸಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಪಠಾಣ್‌ನ ತಮಿಳು ಮತ್ತು ತೆಲುಗು ಭಾಷೆಯ ಟ್ರೇಲರ್‌ಗಳನ್ನು ಬಿಡುಗಡೆ ಮಾಡಲು ದಕ್ಷಿಣ ಚಿತ್ರರಂಗದ ಇಬ್ಬರು ಸೂಪರ್‌ಸ್ಟಾರ್‌ಗಳಾದ ದಳಪತಿ ವಿಜಯ್ ಮತ್ತು ರಾಮ್ ಚರಣ್ ಅವರನ್ನು ಆಹ್ವಾನಿಸಿತ್ತು.
ಸೌತ್ ಸೂಪರ್ಸ್ಟಾರ್ಸ್ ರಿಯಾಕ್ಷನ್: ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ 4.1 ಮಿಲಿಯನ್ ಫಾಲೋವರ್ಸ್ ಹೊಂದಿರುವ ದಳಪತಿ ವಿಜಯ್ ಪಠಾಣ್ ಟ್ರೈಲರ್ ಅನ್ನು ಹಂಚಿಕೊಂಡಿದ್ದಾರೆ. ಎಸ್‌ಆರ್‌ಕೆ ಮತ್ತು ಪಠಾಣ್ ತಂಡಕ್ಕೆ ಚಿತ್ರಕ್ಕಾಗಿ ಶುಭ ಹಾರೈಸಿದ್ದಾರೆ. ಪಠಾಣ್‌ಗೆ ತಂಡಕ್ಕೆ ಮತ್ತು ಶಾರುಖ್ ಅವರಿಗೆ ಶುಭವಾಗಲಿ ಎಂದು ವಿಜಯ್ ಟ್ವೀಟ್ ಮಾಡಿದ್ದಾರೆ.
-
Wishing the whole team of #Pathaan all the very best!@iamsrk Sir looking fwd to seeing you in action sequences like never before! #PathaanTrailerhttps://t.co/63G1CC4R20 @deepikapadukone | @TheJohnAbraham | #SiddharthAnand | @yrf pic.twitter.com/MTQBfYUfjg
— Ram Charan (@AlwaysRamCharan) January 10, 2023 " class="align-text-top noRightClick twitterSection" data="
">Wishing the whole team of #Pathaan all the very best!@iamsrk Sir looking fwd to seeing you in action sequences like never before! #PathaanTrailerhttps://t.co/63G1CC4R20 @deepikapadukone | @TheJohnAbraham | #SiddharthAnand | @yrf pic.twitter.com/MTQBfYUfjg
— Ram Charan (@AlwaysRamCharan) January 10, 2023Wishing the whole team of #Pathaan all the very best!@iamsrk Sir looking fwd to seeing you in action sequences like never before! #PathaanTrailerhttps://t.co/63G1CC4R20 @deepikapadukone | @TheJohnAbraham | #SiddharthAnand | @yrf pic.twitter.com/MTQBfYUfjg
— Ram Charan (@AlwaysRamCharan) January 10, 2023
ಆರ್ಆರ್ಆರ್ ಸ್ಟಾರ್ ರಾಮ್ ಚರಣ್ ಪಠಾಣ್ ಟ್ರೈಲರ್‌ನ ತೆಲುಗು ಆವೃತ್ತಿ ಹಂಚಿಕೊಂಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಪುತ್ರರಾದ ಚರಣ್ ಕೂಡ ಶಾರುಖ್ ಅವರನ್ನು ಆ್ಯಕ್ಷನ್ ಅವತಾರದಲ್ಲಿ ನೋಡಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ. ಜೊತೆಗೆ ಪಠಾಣ್ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ: ಆಸ್ಕರ್ ರೇಸ್ಗೆ ಕಾಂತಾರ ಎಂಟ್ರಿ.. ಸಂತಸ ಹಂಚಿಕೊಂಡ ಚಿತ್ರತಂಡ
ಪಠಾಣ್ ಟ್ರೈಲರ್‌ನ ಮೂರು ಆವೃತ್ತಿಗಳನ್ನು ಶಾರುಖ್ ಖಾನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರ ಕಾಮೆಂಟ್ ವಿಭಾಗವು ತುಂಬಿ ತುಳುಕುತ್ತಿದೆ. ಈ ಟ್ರೈಲರ್ಗೆ ಚಿತ್ರರಂಗದವರು ಸಹ ರಿಯಾಕ್ಟ್ ಮಾಡಿದ್ದು, ಚಿತ್ರದ ಯಶಸ್ವಿಗೆ ಶುಭ ಹಾರೈಸಿದ್ದಾರೆ. ದುಲ್ಕರ್ ಸಲ್ಮಾನ್ ಕೂಡ ಫೈಯರ್ ಇಮೋಜಿ ಹಾಕಿ "Mic drop" ಎಂದು ಬರೆದಿದ್ದಾರೆ.
- " class="align-text-top noRightClick twitterSection" data="">
ಜನವರಿ 25ಕ್ಕೆ ಪಠಾಣ್ ಬಿಡುಗಡೆ: ವಾರ್ ಮತ್ತು ಬ್ಯಾಂಗ್ ಬ್ಯಾಂಗ್ ಖ್ಯಾತಿಯ ಸಿದ್ಧಾರ್ಥ್ ಆನಂದ್ ಅವರ ನಿರ್ದೇಶನದ ಪಠಾನ್ ಜನವರಿ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿದೆ. ಝೀರೋ ನಂತರ ಎಸ್‌ಆರ್‌ಕೆ ಪಠಾಣದ್ ಮೂಲಕ ತೆರೆ ಮೇಲೆ ಅಬ್ಬರಿಸಲಿದ್ದಾರೆ. ಬಳಿಕ ಡಂಕಿ ಮತ್ತು ಜವಾನ್ ಚಿತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಶಾರುಖ್ ಖಾನ್.