ETV Bharat / entertainment

ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ​ 'ಪಠಾಣ್'​ ಸಿನಿಮಾದ್ದಲ್ಲ - ಪಠಾಣ್ ಟ್ರೈಲರ್ ಲೀಕ್

ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದು ಸಖತ್​ ವೈರಲ್​ ಅಗಿ ಸದ್ದು ಮಾಡಿದೆ - ಆದರೆ ಅದು ಪಠಾಣ್ ಚಿತ್ರದ್ದಲ್ಲ - ಶಾರುಖ್ ಖಾನ್ ಅವರ ಜಾಹೀರಾತೊಂದರ ವಿಡಿಯೋ ಎಂದು ಹೇಳಲಾಗಿದೆ.

shah rukh khan pathaan
ಶಾರುಖ್ ಖಾನ್ ಪಠಾಣ್ ಸಿನಿಮಾ
author img

By

Published : Jan 4, 2023, 1:58 PM IST

ಬಾಲಿವುಡ್​​ ಸೂಪರ್​ ಸ್ಟಾರ್​ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ಅವರ ಮುಂಬರುವ ಚಿತ್ರ ಪಠಾಣ್​​ ಈ ವರ್ಷ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಚಿತ್ರ ತಯಾರಕರು ಪಠಾಣ್‌ ಯಶಸ್ವಿಗೆ ಆಸಕ್ತಿದಾಯಕ ಪ್ರಚಾರದ ಯೋಜನೆಯನ್ನು ರೂಪಿಸಿದ್ದರು. ಟ್ರೈಲರ್‌ಗೂ ಮೊದಲು ಹಾಡುಗಳನ್ನು ಬಿಡುಗಡೆ ಮಾಡಿದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಇದು ಪಠಾನ್ ಟ್ರೈಲರ್​ನದ್ದು ಎಂದು ಹಲವರು ಊಹಿಸಿದ್ದಾರೆ.

ಪಠಾಣ್ ಟ್ರೈಲರ್ ರಿಲೀಸ್​ ಡೇಟ್: ಶಾರುಖ್ ಖಾನ್ ಅವರ ಪಾನೀಯ ಜಾಹೀರಾತಿನ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಖತ್​​ ವೈರಲ್ ಆಗುತ್ತಿದೆ. ಈ ವಿಡಿಯೋ ಪಠಾಣ್​ ಟ್ರೈಲರ್‌ನಿಂದ ಬಂದಿದೆ ಎಂದು ಹಲವರು ಭಾವಿಸಿದ್ದರು. ಆದರೆ, ಅದು ಸತ್ಯಾಂಶವಲ್ಲ. ಪಠಾಣ್ ಚಿತ್ರದ ಟ್ರೈಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇತ್ತೀಚಿನ ವರದಿಗಳ ಪ್ರಕಾರ, ಪಠಾಣ್​ ಟ್ರೈಲರ್ ಅನ್ನು ಜನವರಿ 10, 2023 ರಂದು ಬಿಡುಗಡೆ ಮಾಡಲು ತಯಾರಕರು ಯೋಜಿಸುತ್ತಿದ್ದಾರೆ.

ಪಠಾಣ್ ಟ್ರೈಲರ್: ಯಶ್ ರಾಜ್ ಫಿಲ್ಮ್ಸ್ ಒಂದು ವಾರದೊಳಗೆ ಕಿಂಗ್​ ಖಾನ್​ನ ಬಹು ನಿರೀಕ್ಷಿತ ಪಠಾಣ್ ಟ್ರೈಲರ್ ಅನ್ನು ಅನಾವರಣಗೊಳಿಸಲಿದೆ. 2 ನಿಮಿಷದ 37 ಸೆಕೆಂಡ್​ನ ಟ್ರೈಲರ್ ಆ್ಯಕ್ಷನ್​ ಸೀನ್​ಗಳಿಂದ ಕೂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ಅಭಿಮಾನಿಗಳು ಕೂಡ ತಮ್ಮ ಮೆಚ್ಚಿನ ನಟನನ್ನು ಆ್ಯಕ್ಷನ್​ ಅವತಾರದಲ್ಲಿ ಕಾಣಲು ಸಜ್ಜಾಗಿದ್ದಾರೆ.

ನಾಲ್ಕು ವರ್ಷಗಳ ಬ್ರೇಕ್​ ನಂತರ..: ಈ ಚಿತ್ರವು 4 ವರ್ಷಗಳ ನಂತರ ಕಿಂಗ್ ಖಾನ್‌ನ ಪುನರಾಗಮನವನ್ನು ಗುರುತಿಸುತ್ತದೆ. ಹಾಗಾಗಿ ಅವರ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಆ್ಯಕ್ಷನ್ ಎಂಟರ್‌ಟೈನ್​ಗಿಂತ ಉತ್ತಮವಾದದ್ದನ್ನು ಅಭಿಮಾನಿಗಳು ಕೇಳಲು ಸಾಧ್ಯವಿಲ್ಲ ಅನ್ನೋದು ಚಿತ್ರತಂಡದ ಅಭಿಪ್ರಾಯ. ಮೂರು ದಶಕಗಳ ಸುದೀರ್ಘ ವೃತ್ತಿ ಜೀವನದಲ್ಲಿ ಅವರು ಎಂದಿಗೂ ಕಾಣಿಸಿಕೊಂಡಿರದ ರೀತಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಶಾರುಖ್ ನಾಲ್ಕನೇ ಬಾರಿ ದೀಪಿಕಾ ಪಡುಕೋಣೆ ಜೊತೆ ಒಂದಾಗಲಿದ್ದಾರೆ. ಸಿದ್ಧಾರ್ಥ್ ಆನಂದ್ ಅವರ ನಿರ್ದೇಶನದ ಈ ಪಠಾಣ್‌ನಲ್ಲಿ ಜಾನ್ ಅಬ್ರಹಾಂ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದಾರೆ.

  • " class="align-text-top noRightClick twitterSection" data="">

ಇದನ್ನೂ ಓದಿ: ಬೇಶರಂ ರಂಗ್​ ಬೆನ್ನಲ್ಲೇ 'ಜೂಮೇ ಜೋ ಪಠಾನ್' ರಿಲೀಸ್​

ಡಿಸೆಂಬರ್ 12 ರಂದು ಬಿಡುಗಡೆಯಾದ ಮೊದಲ ಹಾಡು ಬೇಷರಮ್ ರಂಗ್ ಭಾರೀ ವಿವಾದಕ್ಕೆ ಒಳಗಾಯಿತು. ಈ ಹಾಡಿನಲ್ಲಿ ಶಾರುಖ್​ ಮತ್ತು ದೀಪಿಕಾ ಅವರ ಕೆಮಿಸ್ಟ್ರಿ ಚೆನ್ನಾಗಿ ಮೂಡಿ ಬಂದಿದ್ದರೂ ನಟಿಯ ವೇಷಭೂಷಣಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ಅದರಲ್ಲೂ ಕೇಸರಿ ಬಣ್ಣದ ಬಿಕಿನಿಗೆ ಬಹುತೇಕ ಜನರಿಂದ ಅಸಮಾಧಾನ ವ್ಯಕ್ತವಾಯಿತು. ಈ ಬೆಳವಣಿಗೆ ಬಳಿಕ ನಾನು ಸಕಾರಾತ್ಮಕವಾಗಿಯೇ ಮುಂದುವರೆಯುತ್ತೇನೆ ಎಂದು ಶಾರುಖ್​ ಖಾನ್​ ತಿಳಿಸಿದ್ದರು. ಅದಾದ ಬೆನ್ನಲ್ಲೇ ಜೂಮೆ ಜೋ ಪಠಾಣ್​ ಸಾಂಗ್​ ಕೂಡ ರಿಲೀಸ್​ ಆಗಿ, ಸ್ಟ್ರೀಮಿಂಗ್​ ಪ್ಲಾಟ್​ಫಾರ್ಮ್​ಗಳಲ್ಲಿ ಉತ್ತಮ ವೀಕ್ಷಣೆ ಕಂಡಿದೆ.

ಇದನ್ನೂ ಓದಿ: ಬೇಶರಂ ರಂಗ್​ ಹಾಡಿನಲ್ಲಿ ಬದಲಾವಣೆ ಮಾಡಲು ಚಿತ್ರತಂಡಕ್ಕೆ ಸಿಬಿಎಫ್‌ಸಿ ಸೂಚನೆ

ಇನ್ನೂ ಪಠಾಣ್​ ಚಿತ್ರದ ಹಾಡುಗಳಲ್ಲಿ ಬದಲಾವಣೆಗಳನ್ನು ಮಾಡಲು ಮತ್ತು ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸಲು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಈ ಸಿನಿಮಾ ನಿರ್ಮಾಪಕರಿಗೆ ತಿಳಿಸಿದೆ ಎಂದು ಈ ಹಿಂದೆ ಸಿಬಿಎಫ್​ಸಿ ಅಧ್ಯಕ್ಷ ಪ್ರಸೂನ್ ಜೋಶಿ ಮಾಹಿತಿ ನೀಡಿದ್ದರು. ಹಲವು ವಿವಾದಗಳ ನಡುವೆ ಚಿತ್ರತಂಡ ಇದೇ ತಿಂಗಳ ಕೊನೆ ವಾರದಲ್ಲಿ ಚಿತ್ರ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಅಭಿಮಾನಿಗಳು ಕೂಡ ಸಿನಿಮಾ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.