ETV Bharat / entertainment

ಸಾವಿರ ಕೋಟಿ ಕ್ಲಬ್ ಸೇರಿದ ಪಠಾಣ್​: ಸೆಲೆಬ್ರೇಷನ್​​ ವಿಡಿಯೋ ಶೇರ್ ಮಾಡಿದ ಚಿತ್ರತಂಡ​​ - ಪಠಾಣ್ ಸಿನಿಮಾ

ಪಠಾಣ್ ಸಿನಿಮಾ 27 ದಿನಗಳಲ್ಲಿ ಜಗತ್ತಿನಾದ್ಯಂತ 1,000 ಕೋಟಿ ರೂ. ಕಲೆಕ್ಷನ್​ ಮಾಡಿದೆ.

Pathaan success celebration
ಪಠಾಣ್ ಸಕ್ಸಸ್ ಸೆಲೆಬ್ರೇಶನ್
author img

By

Published : Feb 22, 2023, 1:52 PM IST

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅಭಿನಯದ ಪಠಾಣ್​ ಕ್ರೇಜ್​ ಕಡಿಮೆ ಆಗಿಲ್ಲ. ಶಾರುಖ್​ ಜೊತೆಗೆ ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ ನಟಿಸಿರುವ ಈ ಚಿತ್ರ ಅಭಿಮಾನಿಗಳನ್ನು ತಲುಪುವಲ್ಲಿ ಯಶಸ್ವಿಯಾಗಿದೆ. 27 ದಿನಗಳಲ್ಲಿ ಜಗತ್ತಿನಾದ್ಯಂತ 1,000 ಕೋಟಿ ರೂ. ಕಲೆಕ್ಷನ್​ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ. 1,000 ಕೋಟಿ ರೂಪಾಯಿ ವ್ಯವಹಾರ ನಡೆಸಿರುವ ಶಾರುಖ್ ಖಾನ್ ಅಭಿನಯದ ಮೊದಲ ಸಿನಿಮಾ 'ಪಠಾಣ್​'. ಶಾರುಖ್ ಖಾನ್, ಚಿತ್ರ ನಿರ್ಮಾಪಕರು, ಚಿತ್ರತಂಡದಲ್ಲಿ ಸಂತಸದ ವಾತಾವರಣವಿದ್ದು, ವಿಡಿಯೋವೊಂದನ್ನು ಚಿತ್ರ ನಿರ್ಮಾಪಕರು ಹಂಚಿಕೊಂಡಿದ್ದಾರೆ.

ಪಠಾಣ್ ಬಿಡುಗಡೆ ಆದಾಗಿನಿಂದ 1,000 ಕೋಟಿ ರೂಪಾಯಿ ಗಳಿಸುವವರೆಗಿನ ಪಯಣವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಫ್ಯಾನ್ಸ್​ ಸೆಲೆಬ್ರೇಶನ್​ ಹೊಂದಿರುವ ಈ ವಿಡಿಯೋವನ್ನು ಶೇರ್ ಮಾಡುವ ಮೂಲಕ 'ಪಠಾಣ್' ನಿರ್ಮಾಪಕರು ಸಂತಸ ವ್ಯಕ್ತಪಡಿಸಿದ್ದಾರೆ. ವಿವಾದಗಳ ನಡುವೆ ತೆರೆಕಂಡ 'ಪಠಾಣ್' ಸೂಪರ್ ಹಿಟ್ ಆಗಿದ್ದಕ್ಕೆ ಶಾರುಖ್ ಖಾನ್​​ ಹಾಗೂ ಚಿತ್ರ ನಿರ್ಮಾಪಕರು ಮಾತ್ರವಲ್ಲದೇ ಕಿಂಗ್ ಖಾನ್ ಅಭಿಮಾನಿಗಳೂ ಕೂಡ ಸಂಭ್ರಮಿಸುತ್ತಿದ್ದಾರೆ.

ಪಠಾಣ್ ಬರೋಬ್ಬರಿ 1,000 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಿದ ನಂತರ ಚಲನಚಿತ್ರ ನಿರ್ಮಿಸಿರುವ ಯಶ್ ರಾಜ್ ಫಿಲ್ಮ್ಸ್​​ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಪಠಾಣ್ ಬಿಡುಗಡೆ ಆದಾಗಿನಿಂದ 1,000 ಕೋಟಿ ಗಳಿಸುವವರೆಗಿನ ಪ್ರಯಾಣವನ್ನು ತೋರಿಸಿದ್ದಾರೆ. ಈ ವಿಡಿಯೋದಲ್ಲಿ ಪಠಾಣ್ ಬಗ್ಗೆ ಅಭಿಮಾನಿಗಳಲ್ಲಿ ಯಾವ ರೀತಿಯ ಕ್ರೇಜ್ ಇತ್ತು ಅನ್ನೋದನ್ನು ತೋರಿಸಿದ್ದಾರೆ. ಪಠಾಣ್​ ದಾಖಲೆ ಬರೆದಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

2016ರಲ್ಲಿ ಬಿಡುಗಡೆ ಆದ ನಟ ಅಮೀರ್ ಖಾನ್ ಅಭಿನಯದ 'ದಂಗಲ್' ಭಾರತೀಯ ಚಿತ್ರರಂಗದಲ್ಲಿ ಈವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಆಗಿದೆ. ದಂಗಲ್​​ ಜಗತ್ತಿನೆಲ್ಲೆಡೆ 2,023.81 ಕೋಟಿ ರೂ. ಕಲೆಕ್ಷನ್​​ ಮಾಡಿದೆ. ​​ ಪ್ರಭಾಸ್ ಅಭಿನಯದ​ ಬಾಹುಬಲಿ-2 ಚಿತ್ರ 1,810.59 ಕೋಟಿ ರೂ. ಕಲೆಕ್ಷನ್​ ಮಾಡಿದೆ. ರಾಕಿಂಗ್​​​ ಸ್ಟಾರ್ ಯಶ್​ ನಟನೆಯ​​ ಕೆಜಿಎಫ್-2 ಸಿನಿಮಾ 1,235.20 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇನ್ನೂ ಜೂ. ಎನ್​​ಟಿಆರ್, ರಾಮ್​ಚರಣ್​ ಅಭಿನಯದ​​ 'ಆರ್​ಆರ್​ಆರ್​' ಚಿತ್ರ 1,169 ಕೋಟಿ ರೂ. ಸಂಗ್ರಹಿಸಿದ್ದು, ಇವರು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿರುವ ಭಾರತೀಯ ಚಿತ್ರಗಳಾಗಿವೆ. ಇದೀಗ ಪಠಾಣ್​ ಕೂಡ ಈ ಸಾಲಿಗೆ ಸೇರಿದೆ.

ಇದನ್ನೂ ಓದಿ: ಸಾವಿರ ಕೋಟಿ ಕ್ಲಬ್ ಸೇರಿದ 'ಪಠಾಣ್'​: ಟೀಕೆಗಳನ್ನು ಮೆಟ್ಟಿ ಸಾಧನೆ ಮಾಡಿದ ಹಿಂದಿ ಚಿತ್ರ!

ಇನ್ನೂ ಶಾರುಖ್ ಖಾನ್ ಅಭಿನಯದ ಚಿತ್ರಗಳ ಕಲೆಕ್ಷನ್​​ ನೋಡುವುದಾದರೆ, ದೀಪಿಕಾ ಪಡುಕೋಣೆ ಜೊತೆಗಿನ ಅಭಿನಯದ ಚೆನ್ನೈ ಎಕ್ಸ್‌ಪ್ರೆಸ್ ಸಿನಿಮಾ ಜಗತ್ತಿನಾದ್ಯಂತ 424.54 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹ್ಯಾಪಿ ನ್ಯೂ ಇಯರ್ ಸಿನಿಮಾ 383 ಕೋಟಿ ರೂ. ಸಂಗ್ರಹಿಸಿದೆ. ದಿಲ್​ವಾಲೆ ಸಿನಿಮಾ 376.85 ಕೋಟಿ ರೂ. ಗಳಿಸಿದೆ. ರಯೀಸ್ ವಿಶ್ವದಾದ್ಯಂತ 281.44 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದೀಗ ಪಠಾಣ್ ಚಿತ್ರದ ಕೋಟಿ ಕೋಟಿ ಕಲೆಕ್ಷನ್​​​ ವೇಗ ಮುಂದುವರಿದಿದೆ. ಪಠಾಣ್‌ ಸಿನಿಮಾಗೂ ಮೊದಲು ಶಾರುಖ್‌ ಖಾನ್​ ಅವರ ಚೆನ್ನೈ ಎಕ್ಸ್‌ಪ್ರೆಸ್ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿತ್ತು.

ಇದನ್ನೂ ಓದಿ: ಕಾಮರ್ಸ್​​ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಪಠಾಣ್​ ಹಾಡಿಗೆ ಭರ್ಜರಿ ಡ್ಯಾನ್ಸ್​: ಶಾರುಖ್​ನಿಂದ ಮೆಚ್ಚುಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.