ETV Bharat / entertainment

ಆ್ಯಕ್ಷನ್​ ಅವತಾರದಲ್ಲಿ ಕಿಂಗ್​ ಖಾನ್.. ಅಭಿಮಾನಿಗಳು ಏನಂದ್ರು ಗೊತ್ತಾ? - ಪಠಾಣ್ ವಿಮರ್ಷೆ

ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಇಂದು ಪಠಾಣ್​ ಸಿನಿಮಾ ಬಿಡುಗಡೆ ಆಗಿದ್ದು, ಸೋಷಿಯಲ್​ ಮೀಡಿಯಾಗಳಲ್ಲಿ ಸಿನಿಮಾಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.

Pathaan movie review
ಪಠಾಣ್ ವಿಮರ್ಷೆ
author img

By

Published : Jan 25, 2023, 1:48 PM IST

ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​ ಖಾನ್​, ಬಹು ಬೇಡಿಕೆ ನಟಿ ದೀಪಿಕಾ ಪಡುಕೋಣೆ, ಬಹುಬೇಡಿಕೆ ನಟ ಜಾನ್​ ಅಬ್ರಹಾಂ ಮುಖ್ಯಭೂಮಿಕೆಯಲ್ಲಿರುವ ಬಾಲಿವುಡ್​​ನ ಬಹುನಿರೀಕ್ಷಿತ ಚಿತ್ರ ಪಠಾಣ್ ಜಗತ್ತಿನಾದ್ಯಂತ​ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿಂದಿ, ತಮಿಳು, ತೆಲುಗು ಆವೃತ್ತಿಗಳಲ್ಲಿ ಇಂದು ತೆರೆ ಮೇಲೆ ಬಂದಿರುವ ಪಠಾಣ್​ ಅನ್ನು ನೋಡಿದ ಶಾರುಖ್​ ಅಭಿಮಾನಿಗಳು ಕಿಂಗ್​ ಖಾನ್​​​ ನಟನೆಗೆ ಫುಲ್​ ಮಾರ್ಕ್ಸ್​ ಕೊಟ್ಟಿದ್ದಾರೆ.

ಆ್ಯಕ್ಷನ್​ ಅವತಾರದಲ್ಲಿ ಶಾರುಖ್​​ ಮೈನವರೇಳಿಸುವಂತೆ ಅಭಿನಯಿಸಿದ್ದು, ನೆಗೆಟಿವ್​ ರೋಲ್​ನಲ್ಲಿ ಜಾನ್​ ಅಬ್ರಹಾಂ ಅಬ್ಬರಿಸಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ಅಭಿನಯ ಅತ್ಯದ್ಭುತ ಎನ್ನುತ್ತಿದ್ದಾರೆ ಅಭಿಮಾನಗಳು. ಮೆಚ್ಚುಗೆ ಜೊತೆಗೆ ಹಲವೆಡೆ ತೀವ್ರ ವಿರೋಧವನ್ನೂ ಎದುರಿಸುತ್ತಿದೆ ಪಠಾಣ್​ ಸಿನಿಮಾ. ಬೇಶರಂ ರಂಗ್​ ಹಾಡಿನಲ್ಲಿನ ನಟಿಯ ವೇಷಭೂಷಣಕ್ಕೆ ಭುಗಿಲೆದ್ದ ವಿವಾದ ತಣ್ಣಗಾದಂತೆ ಕಾಣುತ್ತಿಲ್ಲ. ಸಿನಿಮಾ ತೆರೆ ಕಂಡಿರುವ ಕೆಲ ಪ್ರದೇಶಗಳಲ್ಲಿ ಪ್ರತಿಭಟನೆ ಕೂಡ ನಡೆದಿದೆ.

ಟ್ವಿಟರ್​ನಲ್ಲಿ ಪಠಾಣ್​ ಟ್ರೆಂಡ್​: ಪಠಾಣ್​ ಸಿನಿಮಾ ವಿರೋಧಿಸಿ ಹಲವು ಚಿತ್ರಮಂದಿರಗಳ ಎದುರು ಪ್ರತಿಭಟನೆ ನಡೆದರೆ, ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಪಠಾಣ್ ಟ್ರೆಂಡ್​ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಪಠಾಣ್​ ಬಗ್ಗೆ ಪ್ರತಿಕ್ರಿಯೆಗಳ ಮಳೆ ಸುರಿಯುತ್ತಿದೆ. ಬಹುತೇಕರು ಈ ಸಿನಿಮಾ ಬಗ್ಗೆ ಮೆಚ್ಚುಗೆಯನ್ನೇ ವ್ಯಕ್ತಪಡಿಸಿದ್ದಾರೆ. ಬಾಲಿವುಡ್​ನ ರೊಮ್ಯಾಂಟಿಕ್​ ಕಿಂಗ್​ ಎಂದು ಪ್ರಶಂಸಿಸಲ್ಪಟ್ಟ ಶಾರುಖ್​ ಖಾನ್​ ಅವರನ್ನು ಆ್ಯಕ್ಷನ್​ ಅವತಾರದಲ್ಲಿ ಮೆಚ್ಚಿಕೊಂಡಿದ್ದಾರೆ ಅಭಿಮಾನಿಗಳು.

ಪ್ರೇಕ್ಷಕರ ಅಭಿಪ್ರಾಯ: ಎಸ್​ಆರ್​ಕೆ ಅವರನ್ನು ಆ್ಯಕ್ಷನ್ ಅವತಾರದಲ್ಲಿ ಕಂಡ ಪ್ರೇಕ್ಷಕರು, ''ಪಠಾಣ್​ ಒಂದು ಹೈ ವೋಲ್ಟೆಜ್​ ಸಿನಿಮಾ, ಮನಮುಟ್ಟುವ ಕಥೆ, ಸಿನಿಮಾದಲ್ಲಿನ ಸ್ಪೋರಿ ನಮಗೆ (ಪ್ರೇಕ್ಷಕರಿಗೆ) ಬೇಕಾದಂತೆ ಇದೆ. ನಿರ್ದೇಶಕ ಸಿದ್ಧಾರ್ಥ್ ಆನಂದ್​ ಉತ್ತಮವಾಗಿ ಕಥೆಯನ್ನು ರವಾಸಿದ್ದಾರೆ. ಶಾರುಖ್​ ಖಾನ್​ ಅಭಿನಯವು ಅತ್ಯದ್ಭುತವಾಗಿದೆ, ಜಾನ್ ಅಬ್ರಹಾಂ ಮತ್ತು ದೀಪಿಕಾಪಾಡುಕೋಣೆ ಅಭಿನಯ ಕೂಡ ಅತ್ಯುತ್ತಮ, ಸಿನಿಮಾದಲ್ಲಿ ಸಾಕಷ್ಟು ಸರ್​ಪ್ರೈಸ್​ ಮತ್ತು ಟ್ವಿಸ್ಟ್​​ಗಳಿವೆ ಎಂದು ಬರೆದುಕೊಂಡಿದ್ದಾರೆ.

'ರಾಜನಿಗೆ ದಾರಿಮಾಡಿಕೊಡಿ': ಬ್ಲಾಕ್‌ಬಸ್ಟರ್ ಸಿನಿಮಾ, ಚಿತ್ರದ ಮೊದಲಾರ್ಧ ಅತ್ಯುತ್ತಮ, ಈ ಪೋಸ್ಟ್ ಮಾಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ, ಚಿತ್ರವನ್ನು ಸಂಪೂರ್ಣ ನೋಡಿ ಆನಂದಿಸಿದೆ. ಆನಂದ ಭಾಷ್ಪ ಬರುತ್ತಿದೆ, ರಾಜನು (ಕಿಂಗ್​ ಖಾನ್​ ಶಾರುಖ್​) ಹಿಂತಿರುಗಿದ್ದಾನೆ, ಅವರಿಗೆ ದಾರಿಮಾಡಿಕೊಡಿ ಎಂದು ಮತ್ತೋರ್ವ ಅಭಿಮಾನಿ ಬರೆದಿದ್ದಾರೆ.

  • #PathaanReview From My auckland and saudi friends
    - Villain Powerful
    - Interval Scene Suspense
    - Film's Entertainment factor at Top notch
    Overall a movie jisko aap dekh kar ye kahogey ki khatam kyu hogai yar
    No hritik roshan 😭
    But A very big suspense related to him

    — Sahil Ahmed Khan (@Hello_MrKhan) January 25, 2023 " class="align-text-top noRightClick twitterSection" data=" ">

ಅಥಿತಿ ಪಾತ್ರದಲ್ಲಿ ಸಲ್ಮಾನ್ ಖಾನ್: ಎಸ್‌ಆರ್‌ಕೆ ಮತ್ತು ಸಲ್ಮಾನ್ ಖಾನ್ ಸ್ಕ್ರೀನ್ ಶೇರ್​ ಮಾಡಿಕೊಂಡಿದ್ದು, ಸಿನಿಪ್ರಿಯರು ಥ್ರಿಲ್​ ಆಗಿದ್ದಾರೆ. ಚಿತ್ರದಲ್ಲಿ ಸಲ್ಮಾನ್ 10 ನಿಮಿಷಗಳ ಕಾಲ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವರ ಪ್ರವೇಶವು ಕಥೆಯ ನಿರ್ಣಾಯಕ ಘಟ್ಟದಲ್ಲಿ ಬರುತ್ತದೆ. ಚಿತ್ರದ ಯಾವುದೇ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳದಂತೆ ಚಿತ್ರನಿರ್ಮಾಪಕರು ಪ್ರೇಕ್ಷಕರನ್ನು ಒತ್ತಾಯಿಸಿದ್ದು, ಅಭಿಮಾನಿಗಳು ಟ್ವಿಟರ್‌ನಲ್ಲಿ ಸಲ್ಮಾನ್ ಅವರ ಪಠಾಣ್​​ ಪ್ರವೇಶದ ದೃಶ್ಯದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಅವರ ಆಸಕ್ತಿದಾಯಕ ಪಾತ್ರ: ಬೇಶರಂ ರಂಗ್​ ಹಾಡಿನಲ್ಲಿ ತನ್ನ ವೇಷಭೂಷಣದ ಹಿನ್ನೆಲೆ, ನಟಿ ದೀಪಿಕಾ ಪಡುಕೋಣೆ ಹಲವರು ಕೆಂಗಣ್ಣಿಗೆ ಗುರಿಯಾಗಿದ್ದರು. ಕೆಲ ಸಮಯ ಅವರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಯಿತು. ಆದರೆ, ಅವರ ಅಭಿಮಾನಿಗಳು ಮಾತ್ರ ಅವರ ಕೈ ಬಿಡಲಿಲ್ಲ. ಈಗಲೂ ನಟಿಯ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಸಕ್ತಿದಾಯಕ ಪಾತ್ರ ನಿರ್ವಹಿಸಿದ ದೀಪಿಕಾ ಪಡುಕೋಣೆ ಎಂದು ಟ್ರೆಂಡ್​ ಆಗುತ್ತಿದೆ.

ಇದನ್ನೂ ಓದಿ: ಶಾರೂಖ್​ ನಟನೆಯ 'ಪಠಾಣ್​' ವಿರುದ್ಧ ದೇಶದ ಕೆಲವೆಡೆ ಪ್ರತಿಭಟನೆ: ಅಭಿಮಾನಿಗಳ ಪ್ರತಿಕ್ರಿಯೆ ಹೀಗಿದೆ..

ಕಲೆಕ್ಷನ್​ ಬಗ್ಗೆ ಒಂದು ಅಂದಾಜು: ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ 5,200 ಸ್ಕ್ರೀನ್‌ಗಳಲ್ಲಿ ಪಠಾಣ್​​ ಬಿಡುಗಡೆ ಆಗಿದೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದ ಈ ಆಕ್ಷನ್ ಥ್ರಿಲ್ಲರ್ ಚಿತ್ರ ಮೊದಲ ದಿನದಲ್ಲಿ 45 ರಿಂದ 50 ಕೋಟಿ ರೂಪಾಯಿಗಳೊಂದಿಗೆ ಮುನ್ನುಗ್ಗಲಿದೆ ಎಂದು ಅಂದಾಜಿಸಲಾಗಿದೆ. ಏಕೆಂದರೆ ಮುಂಗಡ ಟಿಕೆಟ್​​ ಬುಕಿಂಗ್ ನಿರೀಕ್ಷೆಗಳನ್ನು ಮೀರಿದೆ. ಪಠಾಣ್ 100ಕ್ಕೂ ಹೆಚ್ಚು ದೇಶಗಳಲ್ಲಿ ತೆರೆಕಂಡ ಮೊದಲ ಶಾರುಖ್ ಚಿತ್ರವಾಗಿದೆ.

ಇದನ್ನೂ ಓದಿ: ‘ಪಠಾಣ್’ಗೆ ಬೆಳಗಾವಿಯಲ್ಲಿ ಆಕ್ರೋಶ: ಚಿತ್ರಮಂದಿರದ ಮೇಲೆ ದಾಳಿ, 30 ಹಿಂದೂಪರ ಕಾರ್ಯಕರ್ತರ ವಿರುದ್ಧ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.