ETV Bharat / entertainment

ರಿಲೀಸ್​ಗೂ ಮುನ್ನ ಪಠಾಣ್​ ದಾಖಲೆ: ಒಂದೇ ದಿನದಲ್ಲಿ 15 ಕೋಟಿ ರೂ. ವ್ಯವಹಾರ! - ​ ಶಾರುಖ್​ ಖಾನ್​ ಪಠಾಣ್​

ಪಠಾಣ್​ ಸಿನಿಮಾದ ಮುಂಗಡ ಟಿಕೆಟ್​ ಬುಕ್ಕಿಂಗ್ ಪ್ರಕ್ರಿಯೆ ದಾಖಲೆ ಬರೆದಿದೆ. ಒಂದೇ ದಿನದಲ್ಲಿ ​15ಕೋಟಿಗೂ ಹೆಚ್ಚು ರೂಪಾಯಿ ವ್ಯವಹಾರ ನಡೆಸಿದೆ.

Pathaan advance ticket sales
ಪಠಾಣ್​ ದಾಖಲೆ
author img

By

Published : Jan 21, 2023, 12:53 PM IST

ಬಾಲಿವುಡ್​​ನ ಬಹುನಿರೀಕ್ಷಿತ ಚಿತ್ರ ಪಠಾಣ್​ ಬಿಡುಗಡೆಗೆ ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿವೆ. ಚೇತರಿಕೆ ಮಾರ್ಗದಲ್ಲಿರುವ ಬಾಲಿವುಡ್​ಗೆ ಪಠಾಣ್​​ ಸಿನಿಮಾ ಸಿಹಿ ಸುದ್ದಿ ನೀಡುವ ಲಕ್ಷಣಗಳು ಕಾಣುತ್ತಿದೆ. ಹೌದು, ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​ ಖಾನ್​, ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ, ಬಹುಬೇಡಿಕೆ ನಟ ಜಾನ್​ ಅಬ್ರಹಾಂ ಮುಖ್ಯಭೂಮಿಕೆಯಲ್ಲಿರುವ ಪಠಾಣ್​ ಸಿನಿಮಾದ ಮುಂಗಡ ಟಿಕೆಟ್​ ಬುಕ್ಕಿಂಗ್ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ.

ರಿಲೀಸ್​ಗೂ ಮುನ್ನ ಪಠಾಣ್​ ದಾಖಲೆ: ಶಾರುಖ್​ ಖಾನ್​ ಅವರ ಮುಂಬರುವ ಆ್ಯಕ್ಷನ್​ ಥ್ರಿಲ್ಲರ್ ಸಿನಿಮಾ ಪಠಾಣ್​ನ ಮುಂಗಡ ಟಿಕೆಟ್​ ಬುಕ್ಕಿಂಗ್​​ ಪ್ರಕ್ರಿಯೆಯು ಜನವರಿ 20ರಿಂದ (ನಿನ್ನೆ, ಶುಕ್ರವಾರ) ಆರಂಭಗೊಂಡಿದೆ. ಒಂದೇ ದಿನದಲ್ಲಿ ಪಠಾಣ್​ನ ಮುಂಗಡ ಟಿಕೆಟ್ ಮಾರಾಟವು 15 ಕೋಟಿಗೂ ಹೆಚ್ಚು ರೂಪಾಯಿ ಸಂಗ್ರಹ ಮಾಡಿದೆ. ಆಲಿಯಾ ಭಟ್ ಮತ್ತು ರಣ್​ಬೀರ್​ ಕಪೂರ್​ ಅಭಿನಯದ ಬ್ರಹ್ಮಾಸ್ತ್ರದ ಮುಂಗಡ ಟಿಕೆಟ್​ ಬುಕ್ಕಿಂಗ್​​ ವ್ಯವಹಾರವನ್ನು ಮೀರಿಸುವ ಸಮೀಪದಲ್ಲಿದೆ.

ಮೊದಲ ದಿನದ ಮುಂಗಡ ಟಿಕೆಟ್​​ ಬುಕ್ಕಿಂಗ್: ಪಠಾಣ್​ ಸಿನಿಮಾದ ಹಾಡು ವಿವಾದಕ್ಕೊಳಗಾದರೂ ಕೂಡ ಚಿತ್ರ ಭರ್ಜರಿ ಯಶಸ್ಸು ಕಾಣುವ ಲಕ್ಷಣಗಳು ಗೋಚರಿಸುತ್ತಿದೆ. ಬಾಲಿವುಡ್​ ಬಾದ್​ ಶಾ ಶಾರುಖ್​ ಖಾನ್ ನಾಲ್ಕು ವರ್ಷಗಳ ಬಳಿಕ ಬಿಗ್​ ಸ್ಕ್ರೀನ್​ಗೆ ಮರಳುತ್ತಿದ್ದು, ಅವರ ಅಭಿಮಾನಿಗಳ ನಿರೀಕ್ಷೆ ಶಿಖರದಷ್ಟಿದೆ. ಮೊದಲ ದಿನದ ಮುಂಗಡ ಟಿಕೆಟ್​​ ಬುಕ್ಕಿಂಗ್ ಮಾಹಿತಿ ಪ್ರಕಾರ 15.18 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಇದು ಪಠಾಣ್​ ತಂಡದ ಉತ್ಸಾಹ ಹೆಚ್ಚಿಸಿದೆ.

ಯಾವ ಭಾಷೆಯ ಸಿನಿಮಾ ಟಿಕೆಟ್ ಹೆಚ್ಚು ಮಾರಾಟ?: ಪಠಾಣ್​ ಚಿತ್ರದ ಹಿಂದಿ ಮತ್ತು ತೆಲುಗು ಆವೃತ್ತಿಗಳು ಹೆಚ್ಚಿನ ಸಂಖ್ಯೆಯ ಟಿಕೆಟ್​ಗಳನ್ನು ಮಾರಾಟ ಮಾಡಿವೆ. ತಮಿಳು ಸಿನಿಮಾ ಮಾರುಕಟ್ಟೆ ಮೊದಲೆರಡು ಭಾಷೆಗಳಷ್ಟರ ಮಟ್ಟಿಗೆ ಪ್ರತಿಕ್ರಿಯಿಸಿಲ್ಲ. ತಮಿಳು ಆವೃತ್ತಿಯಲ್ಲೂ ಹೆಚ್ಚಿನ ಸಂಖ್ಯೆಯ ಟಿಕೆಟ್​​ಗಳು ಮಾರಾಟವಾದರೆ ಪಠಾಣ್​ ಯಶಸ್ವಿಗೆ ಮಾರ್ಗ ಸರಳವಾಗುತ್ತದೆ. ಪಠಾಣ್​ ಸಿನಿಮಾದ ಆರಂಭಿಕ ದಿನದ ವಹಿವಾಟು ಸರಿಸುಮಾರು 40 ಕೋಟಿ ರೂಪಾಯಿ ಆಗಲಿದೆ ಎಂಬ ಊಹಾಪೋಹಗಳು ಎಲ್ಲೆಡೆ ಹರಿದಾಡುತ್ತಿವೆ.

ಈವರೆಗೆ, ಪಠಾಣ್​ ಚಿತ್ರದ ಸರಿಸುಮಾರು 4,86,424 ಟಿಕೆಟ್​ಗಳು ಮಾರಾಟವಾಗಿವೆ. ಸಿನಿಮಾ ವ್ಯಾಪಾರ ವಿಶ್ಲೇಷಕ ತರಣ್​ ಆದರ್ಶ್​ ಅವರ ಮಾಹಿತಿ ಪ್ರಕಾರ, ನಿನ್ನೆ ಸಂಜೆ 6 ಗಂಟೆವರೆಗೆ PVR, INOX, CINEPOLIS (ಮಲ್ಟಿಫ್ಲೆಕ್ಸ್​ಗಳು) 1,71,500 ಟಿಕೆಟ್​ ಮಾರಾಟ ಮಾಡಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪಠಾಣ್​ ಬಿಡುಗಡೆಗೆ ದಿನಗಣನೆ: ಥಿಯೇಟರ್​ನ ಸಂಪೂರ್ಣ ಟಿಕೆಟ್ ಖರೀದಿಸಿದ ಶಾರುಖ್​​ ಅಭಿಮಾನಿಗಳ ಸಂಘ

250 ಕೋಟಿ ರೂ. ಬಂಡವಾಳದಲ್ಲಿ ನಿರ್ಮಾಣ ಆಗಿರುವ ಪಠಾಣ್​ ಸಿನಿಮಾ ಜನವರಿ 25 (ಬುಧವಾರ) ರಂದು ರಿಲೀಸ್​ ಆಗಲಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಜೊತೆ ಜಾನ್​ ಅಬ್ರಹಾಂ, ಡಿಂಪಲ್ ಕಪಾಡಿಯಾ ನಟಿಸಿದ್ದಾರೆ. ಆದಿತ್ಯ ಚೋಪ್ರಾ ಮತ್ತು ಅಲೆಕ್ಸಾಂಡರ್ ದೋಸ್ಟಲ್ ನಿರ್ಮಾಣ ಮಾಡಿದ್ದಾರೆ.

ಇನ್ನೂ ಓಂ ಶಾಂತಿ ಓಂ, ಚೆನ್ನೈ ಎಕ್ಸ್‌ಪ್ರೆಸ್ ಮತ್ತು ಹ್ಯಾಪಿ ನ್ಯೂ ಇಯರ್ ಸಿನಿಮಾಗಳಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಶಾರುಖ್ ಖಾನ್​ ಮತ್ತು ದೀಪಿಕಾ ಪಡುಕೋಣೆ ಅವರಿಗಿದು ನಾಲ್ಕನೇ ಚಿತ್ರ. ಈ ಸೂಪರ್​ ಸ್ಟಾರ್​ಗಳ ಅಭಿಮಾನಿಗಳು ಚಿತ್ರದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ನನಗೆ ನನ್ನದೇಯಾದ ಆರೋಗ್ಯ ಸಮಸ್ಯೆಗಳಿವೆ! ಸರೋಗಸಿ ಬಗ್ಗೆ ಮೌನ ಮುರಿದ ತಾರೆ ಪ್ರಿಯಾಂಕಾ ಚೋಪ್ರಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.