ನವದೆಹಲಿ: ನಾಲ್ಕು ವರ್ಷದ ಬಿಡುವಿನ ಬಳಿಕ 'ಪಠಾಣ್' ಆಗಿ ಬೆಳ್ಳಿತೆರೆಗೆ ಬಂದ ಶಾರುಖ್ ಖಾನ್ ಮತ್ತೊಮ್ಮೆ ಬಾಲಿವುಡ್ ಕಿಂಗ್ ಖಾನ್ ಎಂದು ಸಾಬೀತು ಮಾಡಿದ್ದಾರೆ. ಶಾರುಖ್ ಮತ್ತು ದೀಪಿಕಾ ಅಭಿನಯದ 'ಪಠಾಣ್' ಬಿಡುಗಡೆಗೊಂಡು ಐದು ದಿನಗಳ ಬಳಿಕವೂ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದ್ದು, ಉತ್ತಮ ಗಳಿಕೆ ಮಾಡುತ್ತಿದೆ. 57ರ ಹರೆಯದಲ್ಲೂ ಶಾರುಖ್ ಖಾನ್ ಆಕ್ಷನ್ಗೆ ಅಭಿಮಾನಿಗಳು ಫಿದಾ ಆಗಿದ್ದು, ಚಿತ್ರ ಹೊಸ ದಾಖಲೆ ಸೃಷ್ಟಿಸಲಿದೆ. ಇನ್ನು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, 'ಪಠಾಣ್' ಸಿನಿಮಾ ಹಿಂದಿಯಲ್ಲಿ ಭಾನುವಾರ 60 ರಿಂದ 62 ಕೋಟಿ ಗಳಿಕೆ ಮಾಡಿದ್ದು, ಈ ಸಂಬಂಧ ನಿರ್ಮಾಪಕರಾಗಲಿ, ಚಿತ್ರತಂಡವಾಗಲಿ ಅಧಿಕೃತ ಅಂಕಿ - ಅಂಶ ನೀಡಿಲ್ಲ.
-
#Pathaan *early estimates* Sun [Day 5]: ₹ 60 cr to ₹ 62 cr. #Hindi version. 🔥🔥🔥
— taran adarsh (@taran_adarsh) January 29, 2023 " class="align-text-top noRightClick twitterSection" data="
Note: Final total could be marginally higher/lower.
">#Pathaan *early estimates* Sun [Day 5]: ₹ 60 cr to ₹ 62 cr. #Hindi version. 🔥🔥🔥
— taran adarsh (@taran_adarsh) January 29, 2023
Note: Final total could be marginally higher/lower.#Pathaan *early estimates* Sun [Day 5]: ₹ 60 cr to ₹ 62 cr. #Hindi version. 🔥🔥🔥
— taran adarsh (@taran_adarsh) January 29, 2023
Note: Final total could be marginally higher/lower.
ಭಾನುವಾರ ಒಂದೇ ದಿನವೇ 'ಪಠಾಣ್' ಸಿನಿಮಾ ಇಷ್ಟು ಮೊತ್ತದ ಗಳಿಕೆ ಮಾಡುವ ಮೂಲಕ ಐದನೇ ದಿನವೂ ಬಾಕ್ಸ್ ಆಫೀಸ್ನಲ್ಲಿ ತಮ್ಮ ನಾಗಾಲೋಟ ಮುಂದುವರೆಸಿದೆ. ಈ ಲೆಕ್ಕಾಚಾರ ನಡೆಸಿದರೆ ಚಿತ್ರ ಬಿಡುಗಡೆಯಾದ ದಿನದಿಂದ ಸಿನಿಮಾ ನಿರೀಕ್ಷೆಗೂ ಮೀರಿದ ಗಳಿಕೆ ಮಾಡಿದೆ ಎಂದು ಅಂದಾಜಿಸಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ಮೊದಲು ಭಾರತದಲ್ಲಿ ಸಿನಿಮಾಗಳು ಬಿಡುಗಡೆಯಾದ ಐದೇ ದಿನದಲ್ಲಿ 250 ಕೋಟಿ ಸಂಪಾದನೆ ಮಾಡಿದಲ್ಲಿ ಪಠಾಣ್ ಮೊದಲ ಸ್ಥಾನದಲ್ಲಿರಬಹುದು ಎಂದು ಅಂದಾಜಿಸಲಾಗಿದೆ. 'ಪಠಾಣ್' ಹೊಸ ಮೈಲಿಗಲ್ಲು, ಈ ಹಿಂದೆ 250 ಕೋಟಿ ಗಳಿಕೆ ಮಾಡಿದ್ದ 'ದಂಗಲ್', 'ಬಾಹುಬಲಿ 2' ಮತ್ತು 'ಕೆಜಿಎಫ್2' ದಾಖಲೆಯನ್ನು ಪಠಾಣ್ ಮೀರಿಸಲಿದೆ. ಈ ಹಿಂದೆ 'ಕೆಜಿಎಫ್ 2' ಹಿಂದಿ ಸಿನಿಮಾ ಏಳು ದಿನದಲ್ಲಿ 250 ಕೋಟಿ ಗಳಿಕೆ ಮಾಡಿದರೆ, 'ಬಾಹುಬಲಿ 2' ಹಿಂದಿ ಸಿನಿಮಾ 8ದಿನದಲ್ಲಿ, 'ದಂಗಲ್', 'ಸಂಜು' ಮತ್ತು 'ಟೈಗರ್ ಜಿಂದಾ ಹೇ' ಹಿಂದಿ ಸಿನಿಮಾ 10 ದಿನದಲ್ಲಿ 250 ಕೋಟಿ ಸಂಪಾದಿಸಿದ್ದವು ಎಂದಿದ್ದಾರೆ.
-
‘PATHAAN’: ₹ 429 CR WORLDWIDE *GROSS* IN 4 DAYS… #Pathaan WORLDWIDE [#India + #Overseas] *Gross* BOC… *4 days*…
— taran adarsh (@taran_adarsh) January 29, 2023 " class="align-text-top noRightClick twitterSection" data="
⭐️ #India: ₹ 265 cr
⭐️ #Overseas: ₹ 164 cr
⭐️ Worldwide Total *GROSS*: ₹ 429 cr
🔥🔥🔥 pic.twitter.com/Qd8xriCFvX
">‘PATHAAN’: ₹ 429 CR WORLDWIDE *GROSS* IN 4 DAYS… #Pathaan WORLDWIDE [#India + #Overseas] *Gross* BOC… *4 days*…
— taran adarsh (@taran_adarsh) January 29, 2023
⭐️ #India: ₹ 265 cr
⭐️ #Overseas: ₹ 164 cr
⭐️ Worldwide Total *GROSS*: ₹ 429 cr
🔥🔥🔥 pic.twitter.com/Qd8xriCFvX‘PATHAAN’: ₹ 429 CR WORLDWIDE *GROSS* IN 4 DAYS… #Pathaan WORLDWIDE [#India + #Overseas] *Gross* BOC… *4 days*…
— taran adarsh (@taran_adarsh) January 29, 2023
⭐️ #India: ₹ 265 cr
⭐️ #Overseas: ₹ 164 cr
⭐️ Worldwide Total *GROSS*: ₹ 429 cr
🔥🔥🔥 pic.twitter.com/Qd8xriCFvX
ಈ ಮಧ್ಯೆ ಜಗತ್ತಿನಾದ್ಯಂತ ಪಠಾಣ್ 429 ಕೋಟಿ ಹಣ ಗಳಿಕೆ ಮಾಡಿದೆ. ಭಾರತದಲ್ಲಿ 265 ಕೋಟಿ ಮತ್ತು ಹೊರ ದೇಶದಲ್ಲಿ 164 ಕೋಟಿ ಹಣ ಸಂಪಾದಿಸಿದೆ. ನಾಲ್ಕು ವರ್ಷಗಳ ಬಳಿಕ ತೆರೆಗೆ ಬಂದ ಶಾರುಖ್ಗೆ ಅಭಿಮಾನಿಗಳಿಂದು ಉತ್ತಮ ಆರಂಭ ಸಿಕ್ಕಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ ಸಿನಿಮಾ 100 ಕೋಟಿ ಕ್ಲಬ್ ಸೇರಿತ್ತು. ವಾರಾಂತ್ಯದಲ್ಲಿ ಚಿತ್ರ ಮತ್ತಷ್ಟು ದಾಖಲೆ ಸೃಷ್ಟಿಸಿದೆ.
-
‘PATHAAN’ NEW MILESTONE: FASTEST
— taran adarsh (@taran_adarsh) January 29, 2023 " class="align-text-top noRightClick twitterSection" data="
TO HIT ₹ 250 CR… AGAIN OVERTAKES ‘KGF2’, ‘BAAHUBALI 2’, ‘DANGAL’…
⭐️ #Pathaan: Will cross ₹ 250 cr today [Day 5]
⭐️ #KGF2 #Hindi: Day 7
⭐️ #Baahubali2 #Hindi: Day 8
⭐️ #Dangal: Day 10
⭐️ #Sanju: Day 10
⭐️ #TigerZindaHai: Day 10#India biz. pic.twitter.com/DFsXcptErD
">‘PATHAAN’ NEW MILESTONE: FASTEST
— taran adarsh (@taran_adarsh) January 29, 2023
TO HIT ₹ 250 CR… AGAIN OVERTAKES ‘KGF2’, ‘BAAHUBALI 2’, ‘DANGAL’…
⭐️ #Pathaan: Will cross ₹ 250 cr today [Day 5]
⭐️ #KGF2 #Hindi: Day 7
⭐️ #Baahubali2 #Hindi: Day 8
⭐️ #Dangal: Day 10
⭐️ #Sanju: Day 10
⭐️ #TigerZindaHai: Day 10#India biz. pic.twitter.com/DFsXcptErD‘PATHAAN’ NEW MILESTONE: FASTEST
— taran adarsh (@taran_adarsh) January 29, 2023
TO HIT ₹ 250 CR… AGAIN OVERTAKES ‘KGF2’, ‘BAAHUBALI 2’, ‘DANGAL’…
⭐️ #Pathaan: Will cross ₹ 250 cr today [Day 5]
⭐️ #KGF2 #Hindi: Day 7
⭐️ #Baahubali2 #Hindi: Day 8
⭐️ #Dangal: Day 10
⭐️ #Sanju: Day 10
⭐️ #TigerZindaHai: Day 10#India biz. pic.twitter.com/DFsXcptErD
ಆಕ್ಷನ್, ಥ್ರಿಲ್ಲರ್ ಜೊತೆ ದೇಶ ಪ್ರೇಮದ ಕಥೆಯನ್ನು ಈ 'ಪಠಾಣ್' ಹೊಂದಿದ್ದು, ಶಾರುಖ್ ಖಾನ್ ಆಕ್ಷನ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿ ದೀಪಿಕಾ ಕೂಡ ಗೂಢಾಚಾರಿಣಿ ಪಾತ್ರದಲ್ಲಿ ಮಿಂಚಿದ್ದು, ಜಾನ್ ಅಬ್ರಹಾಂ ಸೇರಿದಂತೆ ಹಲವು ನಟರ ದಂಡು ಚಿತ್ರದಲ್ಲಿದೆ. ಇನ್ನು ಚಿತ್ರದಲ್ಲಿ ನಟ ಸಲ್ಮಾನ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಮತ್ತಷ್ಟು ವಿಶೇಷ. ಚಿತ್ರ ಬಿಡುಗಡೆಗೆ ಮುಂಚೆ ಉಂಟಾದ ವಿವಾದ, ಗದ್ದಲಗಳ ಹೊರಾತಾಗಿ ಗಲ್ಲ ಪೆಟ್ಟಿಗೆಯಲ್ಲಿ ಕೋಟಿ ಕೋಟಿ ಸಂಗ್ರಹ ಮಾಡುವ ಮೂಲಕ ಚಿತ್ರ ಹೊಸ ದಾಖಲೆ ಬರೆಯಲು ಮುಂದಾಗಿದೆ.
ಇದನ್ನೂ ಓದಿ: ನೂರಾರು ಕೋಟಿ ಬಾಚಿದ 'ಪಠಾಣ್': ಅಭಿಮಾನಿಗಳಿಗೆ ಶಾರುಖ್ ಖಾನ್ ದರ್ಶನ, ಫೈಯಿಂಗ್ ಕಿಸ್!