‘ಪಠಾಣ್’ಗೆ ಬೆಳಗಾವಿಯಲ್ಲಿ ಆಕ್ರೋಶ: ಚಿತ್ರಮಂದಿರದ ಮೇಲೆ ದಾಳಿ, 30 ಹಿಂದೂಪರ ಕಾರ್ಯಕರ್ತರ ವಿರುದ್ಧ ದೂರು - ಪಠಾಣ್ ಚಿತ್ರದ ದಾಖಲೆ
ಬಾಯ್ಕಾಟ್ ಎಚ್ಚರಿಕೆಯ ನಡುವೆ ಇಂದು ಬಿಡುಗಡೆಯಾದ ‘ಪಠಾಣ್’ ಚಿತ್ರಕ್ಕೆ ಬೆಳಗಾವಿಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬೆಳಗಾವಿ: ಶಾರುಖ್ ಖಾನ್-ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ 'ಪಠಾಣ್' ಚಿತ್ರ ಇಂದು (ಬುಧವಾರ) ತೆರೆಕಂಡಿದ್ದು ಬೆಳಗಾವಿಯಲ್ಲಿ ಆಕ್ರೋಶ ವ್ಯಕ್ತವಾಯಿತು. ನಗರದ ಸ್ವರೂಪ ಮತ್ತು ನರ್ತಕಿ ಚಿತ್ರಮಂದಿರದ ಮೇಲೆ ಬೆಳಗ್ಗೆ ದಾಳಿ ಮಾಡಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಚಿತ್ರದ ಬ್ಯಾನರ್ಗಳನ್ನು ಹರಿದು ಹಾಕಿದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
30 ಮಂದಿ ವಿರುದ್ಧ ದೂರು: ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಕೆಲವು ಹಿಂದೂಪರ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಪೋಸ್ಟರ್ ಹರಿಯಲು ಯತ್ನಿಸಿದ ಹಿನ್ನೆಲೆಯಲ್ಲಿ ಖಡೇಬಜಾರ್ ಠಾಣೆಯಲ್ಲಿ 30 ಹಿಂದೂಪರ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ. ಸದ್ಯ ಚಿತ್ರಮಂದಿರ ಬಳಿ ಉದ್ವಿಗ್ನ ಪರಿಸ್ಥಿತಿ ಇದೆ. ಮುಂಜಾಗ್ರತಾ ಕ್ರಮವಾಗಿ ಓರ್ವ ಸಿಪಿಐ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದ್ದು, ಕೆಎಸ್‌ಆರ್‌ಪಿ ತುಕಡಿ ಸ್ಥಳದಲ್ಲಿದೆ.
'ಪ್ರದರ್ಶನ ಹಿಂಪಡೆಯಿರಿ': ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿರುವ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್, ವಿತರಕರು ಚಿತ್ರ ಪ್ರದರ್ಶನ ಹಿಂಪಡೆಯುವಂತೆ ಮನವಿ ಮಾಡಿದರು. "ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ವಯಂಪ್ರೇರಿತವಾಗಿ ಚಿತ್ರ ಪ್ರದರ್ಶನ ಹಿಂಪಡೆಯಲಿ. ಈ ರೀತಿ ಚಿತ್ರಗಳ ಪ್ರದರ್ಶನ ಮೂಲಕ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ. ಪ್ರತಿಭಟನೆ ಇವತ್ತು ಪ್ರಾರಂಭವಾಗಿದೆ. ಬಹಳಷ್ಟು ಹೆಣ್ಣುಮಕ್ಕಳು ಸಹ ಚಲನಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಿತರಕರೇ ಚಿತ್ರ ಪ್ರದರ್ಶನದಿಂದ ಹಿಂದೆ ಸರೆಯಬೇಕು" ಎಂದು ಅಭಯ್ ಪಾಟೀಲ್ ಆಗ್ರಹಿಸಿದರು. ಸ್ವರೂಪ ಮತ್ತು ನರ್ತಕಿ ಚಿತ್ರ ಮಂದಿರ ಮುಂದೆ ಪೊಲೀಸರು ಬೀಡುಬಿಟ್ಟಿದ್ದಾರೆ.
ಬುಕ್ಕಿಂಗ್ನಲ್ಲಿ ದಾಖಲೆ: ಇನ್ನೊಂದೆಡೆ, ಬಾಯ್ಕಾಟ್ ಎಚ್ಚರಿಕೆ ನಡುವೆಯೂ ‘ಪಠಾಣ್’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರ ಟಿಕೆಟ್ ಬುಕ್ಕಿಂಗ್ನಲ್ಲಿ ದಾಖಲೆ ಬರೆದಿದೆ ಎಂದು ಬಾಲಿವುಡ್ನ ಚಿತ್ರ ವಿಮರ್ಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಹಿಂದಿಗೆ ಡಬ್ ಆದ ಕನ್ನಡದ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯಾದ ಒಂದೇ ದಿನದಲ್ಲಿ 5.15 ಲಕ್ಷ ಟಿಕೆಟ್ಗಳು ಸೋಲ್ಡೌಟ್ ಆಗಿದ್ದವು. ಇದೀಗ ‘ಪಠಾಣ್’ ಬಿಡುಗಡೆಯಾದ ಒಂದೇ ದಿನದಲ್ಲಿ 5.56 ಲಕ್ಷ ಟಿಕೆಟ್ಗಳು ಮಾರಾಟವಾಗಿವೆ. ಬಾಹುಬಲಿ 2 ಚಿತ್ರ ಬಿಡುಗಡೆಯಾದಾಗ 6.50 ಲಕ್ಷ ಟಿಕೆಟ್ಗಳು ಸೋಲ್ಡೌಟ್ ಆಗಿದ್ದವು. ಸದ್ಯಕ್ಕೆ ಇದೇ ಅಗ್ರ ಸ್ಥಾನದಲ್ಲಿದೆ. ಬಾಲಿವುಡ್ನ ಮತ್ತೊಂದು ಹೈ ಬಜೆಟ್ ಸಿನಿಮಾ ವಾರ್ ಚಿತ್ರದ 4.10 ಲಕ್ಷ ಟಿಕೆಟ್ಗಳು ಮಾರಾಟವಾಗಿದ್ದವು. ಥೋ ಚಿತ್ರ ಕೂಡ 3.46 ಲಕ್ಷ ಟಿಕೆಟ್ ಸೋಲ್ಡೌಟ್ ಆಗಿದ್ದವು ಎಂದು ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ.
-
TOP 5
— taran adarsh (@taran_adarsh) January 24, 2023 " class="align-text-top noRightClick twitterSection" data="
Ticket Sales Of *Day 1*… #Hindi and #Hindi dubbed films…
NOTE: National chains only.
1. #Baahubali2 #Hindi 6.50 lacs
2 #Pathaan 5.56 lacs
3. #KGF2 #Hindi 5.15 lacs
4. #War 4.10 lacs
5. #TOH 3.46 lacs pic.twitter.com/PyWiJ2dmXz
">TOP 5
— taran adarsh (@taran_adarsh) January 24, 2023
Ticket Sales Of *Day 1*… #Hindi and #Hindi dubbed films…
NOTE: National chains only.
1. #Baahubali2 #Hindi 6.50 lacs
2 #Pathaan 5.56 lacs
3. #KGF2 #Hindi 5.15 lacs
4. #War 4.10 lacs
5. #TOH 3.46 lacs pic.twitter.com/PyWiJ2dmXzTOP 5
— taran adarsh (@taran_adarsh) January 24, 2023
Ticket Sales Of *Day 1*… #Hindi and #Hindi dubbed films…
NOTE: National chains only.
1. #Baahubali2 #Hindi 6.50 lacs
2 #Pathaan 5.56 lacs
3. #KGF2 #Hindi 5.15 lacs
4. #War 4.10 lacs
5. #TOH 3.46 lacs pic.twitter.com/PyWiJ2dmXz
ಪಠಾಣ್‌ಗೆ ಪೈರಸಿ ಕಾಟ: ಇದರ ನಡುವೆ ಚಿತ್ರತಂಡಕ್ಕೆ ಪೈರಸಿ ಕಾಟವೂ ಶುರುವಾಗಿದೆ. ಸಿನಿಮಾ ರಿಲೀಸ್ಗೂ ಮೊದಲೇ ಹಲವು ವೆಬ್ಸೈಟ್ಗಳಲ್ಲಿ ಸಿನಿಮಾ ಸೋರಿಕೆಯಾಗಿದೆ ಎನ್ನಲಾಗುತ್ತಿದೆ. ಬಾಲಿವುಡ್ ನಟ ಶಾರುಖ್ ಖಾನ್, ಪ್ರಸಿದ್ಧ ನಟಿ ದೀಪಿಕಾ ಪಡುಕೋಣೆ, ನಟ ಜಾನ್ ಅಬ್ರಹಾಂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು ಹಿಂದಿ, ತಮಿಳು, ತೆಲುಗು ಆವೃತ್ತಿಗಳಲ್ಲಿ ದೇಶಾದ್ಯಂತ ಸಿನಿಮಾ ಬಿಡುಗಡೆ ಆಗಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಮೊದಲ ದಿನಗಳಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ಕೋಟ್ಯಂತರ ಬಾಚುವ ಸೂಚನೆ ಸಿಕ್ಕಿದೆ.
ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿ 'ನಾಟು ನಾಟು..' ಹಾಡು: ಗಣ್ಯರಿಂದ ಪ್ರಶಂಸೆಗಳ ಸುರಿಮಳೆ