ಸಿದ್ಧಾರ್ಥ್ ಆನಂದ್ ನಿರ್ದೇಶನದ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ದಾಖಲೆ ನಿರ್ಮಿಸಿದೆ. ಈವರೆಗೆ ನಿರ್ಮಾಣವಾಗಿದ್ದ ಅದೆಷ್ಟೋ ದಾಖಲೆಗಳು ಪುಡಿಪುಡಿ ಆಗಿವೆ. ಸಿನಿಮಾ ಬಿಡುಗಡೆ ಕಂಡ 3ನೇ ದಿನಕ್ಕೆ ವಿಶ್ವಾದ್ಯಂತ 313 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇಂದು ಮತ್ತು ನಾಳೆ ವಾರಾಂಂತ್ಯ ಹಿನ್ನೆಲೆ ಮತ್ತಷ್ಟು ಕೋಟಿ ಕಲೆಕ್ಷನ್ ಆಗಲಿರುವ ಭರವಸೆಯಲ್ಲಿ ಚಿತ್ರತಂಡವಿದೆ.
-
History created with love from all over the world ❤️
— Yash Raj Films (@yrf) January 28, 2023 " class="align-text-top noRightClick twitterSection" data="
Book your tickets NOW - https://t.co/SD17p6x9HI | https://t.co/VkhFng6vBj
Celebrate #Pathaan with #YRF50 only at a big screen near you, in Hindi, Tamil and Telugu. pic.twitter.com/g9A0A67IRA
">History created with love from all over the world ❤️
— Yash Raj Films (@yrf) January 28, 2023
Book your tickets NOW - https://t.co/SD17p6x9HI | https://t.co/VkhFng6vBj
Celebrate #Pathaan with #YRF50 only at a big screen near you, in Hindi, Tamil and Telugu. pic.twitter.com/g9A0A67IRAHistory created with love from all over the world ❤️
— Yash Raj Films (@yrf) January 28, 2023
Book your tickets NOW - https://t.co/SD17p6x9HI | https://t.co/VkhFng6vBj
Celebrate #Pathaan with #YRF50 only at a big screen near you, in Hindi, Tamil and Telugu. pic.twitter.com/g9A0A67IRA
ಆ್ಯಕ್ಷನ್ ಅವತಾರದಲ್ಲಿ ಶಾರುಖ್ ಅಬ್ಬರ: ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಹೊರಗೆ ಪ್ರತಿಭಟನೆಯ ಕಾವಿದ್ದರೂ, ಸಿನಿಮಾ ತೆರೆ ಕಂಡಿರುವ ಬಹುತೇಕ ಚಿತ್ರಮಂದಿರದೊಳಗೆ ಭರ್ಜರಿ ಪ್ರದರ್ಶನ ನಡೆಯುತ್ತಿದೆ. ಮೂರು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಶಾರುಖ್ ಖಾನ್ ಮೊದಲ ಬಾರಿಗೆ ಆ್ಯಕ್ಷನ್ ಅವತಾರದಲ್ಲಿ ಅಬ್ಬರಿಸಿದ್ದು, ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಪಠಾಣ್ ಕಲೆಕ್ಷನ್: ದೊರೆತ ಮಾಹಿತಿ ಪ್ರಕಾರ, ಪಠಾಣ್ ಚಿತ್ರ ಮೊದಲ ದಿನ 106 ಕೋಟಿ (ಭಾರತದಲ್ಲಿ 55 ಕೋಟಿ ರೂ. + ವಿದೇಶದಲ್ಲಿ 49 ಕೋಟಿ ಕೋಟಿ ರೂ.) ರೂಪಾಯಿ ಕಲೆಕ್ಷನ್ ಮಾಡಿದೆ. ಎರಡನೇ ದಿನ 113.6 ಕೋಟಿ (ಭಾರತದಲ್ಲಿ 82.94 ಕೋಟಿ ರೂ. + ವಿದೇಶದಲ್ಲಿ 30.70 ಕೋಟಿ ಕೋಟಿ ರೂ.) ರೂಪಾಯಿ ಕಲೆಕ್ಷನ್ ಮಾಡಿದೆ. ಮೂರನೇ ದಿನ 90 ಕೋಟಿ (ಭಾರತದಲ್ಲಿ 47 ಕೋಟಿ ರೂ. + ವಿದೇಶದಲ್ಲಿ 43 ಕೋಟಿ ಕೋಟಿ ರೂ.) ರೂಪಾಯಿ ಕಲೆಕ್ಷನ್ ಮಾಡಿದೆ.
ದೆಹಲಿ ಮತ್ತು ಮುಂಬೈನಂತಹ ಮಹಾ ನಗರಗಳು ಸೇರಿದಂತೆ ದೇಶದಾದ್ಯಂತ ಸುಮಾರು 5,000 ಕ್ಕೂ ಹೆಚ್ಚು ಪರದೆಗಳಲ್ಲಿ ಪಠಾಣ್ ಚಿತ್ರ ಬುಧವಾರ ತೆರೆಕಂಡಿತ್ತು. ಸಿನಿಮಾಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಯಶ್ ರಾಜ್ ಫಿಲ್ಮ್ಸ್ ಬುಧವಾರ ಮಧ್ಯರಾತ್ರಿ 12.30ರ ನಂತರದ ಪ್ರದರ್ಶನವನ್ನು ದೇಶಾದ್ಯಂತ ಸೇರಿಸಿದೆ. ಸದ್ಯ ಪಠಾಣ್ ಚಿತ್ರ ವಿಶ್ವಾದ್ಯಂತ ಪ್ರದರ್ಶನಗೊಳ್ಳುತ್ತಿರುವ ಒಟ್ಟು ಪರದೆಯ ಸಂಖ್ಯೆ 8,500 ಆಗಿದೆ.
'ಪಠಾಣ್ ಯಶಸ್ಸು ನನಗೆ ಹೆಮ್ಮೆ ತಂದಿದೆ': ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಅಭೂತ ಪೂರ್ವ ಯಶಸ್ಸು ನನಗೆ ಹೆಮ್ಮೆ ತಂದಿದೆ ಎಂದು ಸೂಪರ್ ಸ್ಟಾರ್ ಶಾರುಖ್ ಖಾನ್ ಹೇಳಿದ್ದಾರೆ. ಪಠಾಣ್ ಯಶಸ್ಸನ್ನು ಆಚರಿಸಲು ಪೂರ್ವಸಿದ್ಧತೆಯಿಲ್ಲದ AskSRK ಸೆಷನ್ ಅನ್ನು ನಡೆಸಿದ್ದು, ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ಪ್ರೀತಿಯನ್ನು ಹೇಗೆ ಸ್ವೀಕರಿಸುತ್ತಿದ್ದೀರಾ ಎಂಬ ಅಭಿಮಾನಿಯ ಪ್ರಶ್ನೆಗೆ ಪ್ರತಿಕ್ರಿಯಿಸಿಸಿರುವ ಶಾರುಖ್ ಖಾನ್, "ತನ್ನ ಮಗು ಮೆಚ್ಚುಗೆ ವ್ಯಕ್ತಪಡಿಸುವುದನ್ನು ನೋಡಿದಾಗ ಎಷ್ಟು ಸಂತೋಷವಾಗುತ್ತದೆ ಹೇಳಿ" ಎಂದು ತಿಳಿಸಿದ್ದಾರೆ. ಮತ್ತೊಬ್ಬ ಅಭಿಮಾನಿ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ ಬಗ್ಗೆ ಕೇಳಿದ್ದು, ಚಲನಚಿತ್ರ ಮಾಡುವ ಹಣದ ಬಗ್ಗೆ ಚಿಂತಿಸುವುದಿಲ್ಲ ಎಂದು ಹೇಳಿದ್ದಾರೆ. ಸಂಖ್ಯೆಗಳು ಫೋನ್ನಲ್ಲಿರುತ್ತವೆ, ನಾವು ಖುಷಿಯನ್ನು ಕೌಂಟ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಅಭಿನಯದ ಮಿಷನ್ ಮಜ್ನು ಟೀಕಿಸಿದ ಪಾಕ್ ನಟ
ಶಾರುಖ್ ಖಾನ್ ತಮ್ಮ ಮಕ್ಕಳಾದ ಆರ್ಯನ್, ಸುಹಾನಾ ಮತ್ತು ಅಬ್ರಾಂ ಸೇರಿದಂತೆ ಅವರ ಕುಟುಂಬಕ್ಕಾಗಿ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು. ಚಿತ್ರದ ಬಗ್ಗೆ ಕಿರಿಯ ಮಗ ಅಬ್ರಾಂನ ಪ್ರತಿಕ್ರಿಯೆಯನ್ನು ತಿಳಿಯಲು ಬಯಸಿದ ಅಭಿಮಾನಿಗಳಿಗೆ ಉತ್ತರಿಸಿದ ಶಾರುಖ್, "ನನಗೆ ಹೇಗೆ ಎಂಬುದು ಗೊತ್ತಿಲ್ಲ. ಆದರೆ ಅವರು ಅಪ್ಪಾ ಇದು ಎಲ್ಲಾ ಕೆಲಸ/ಕರ್ಮ ಫಲ ಎಂದು ಹೇಳಿದರು. ಹಾಗಾಗಿ ನಾನು ಅದನ್ನು ನಂಬುತ್ತೇನೆ ಎಂದು ಶಾರುಖ್ ಹೇಳಿದರು. ಸಂದರ್ಶನಗಳು, ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಚಲನಚಿತ್ರ ಪ್ರಚಾರದ ಸಾಮಾನ್ಯ ಪ್ರವೃತ್ತಿಯನ್ನು ಅವಲಂಬಿಸದೇ ಯಶ್ ರಾಜ್ ಫಿಲ್ಮ್ಸ್ ತಂಡವು ಸಿನಿಮಾ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಹೆಚ್ಚಾಗಿ ಅವಲಂಬಿಸಿದೆ.
ಟ್ವಿಟರ್ ಬಳಕೆದಾರರಲ್ಲಿ ಒಬ್ಬರು ಯಾವುದೇ ಸಂದರ್ಶನಗಳಿಲ್ಲದೇ ಬ್ಲಾಕ್ ಬಸ್ಟರ್ ನೀಡಿದ್ದಕ್ಕಾಗಿ ಶಾರುಖ್ ಅವರನ್ನು ಹೊಗಳಿದ್ದಾರೆ. ಇದಕ್ಕೆ ಕಿಂಗ್ ಖಾನ್ ಹಾಸ್ಯಮಯ ಪ್ರತಿಕ್ರಿಯೆ ನೀಡಿದ್ದಾರೆ. ಸಿಂಹಗಳು ಸಂದರ್ಶನಗಳನ್ನು ನೀಡುವುದಿಲ್ಲ. ಹಾಗಾಗಿ ಈ ಬಾರಿ ನಾನು ಸಹ ಬೇಡ ಎಂದು ನಿರ್ಧರಿಸಿದೆ ಎಂದು ಹೇಳಿದ್ದಾರೆ.