ETV Bharat / entertainment

ಪರಿಣಿತಿ ರಾಘವ್​ ಮದುವೆ: ಉದಯಪುರಕ್ಕೆ ಆಗಮಿಸಿದ ಅತಿಥಿಗಳು - ಸಮಾರಂಭ ಆರಂಭ - ಪರಿಣಿತಿ ರಾಘವ್​ ವಿಡಿಯೋ

Parineeti Raghav wedding: ರಾಘ್​ನೀತಿ ಜೋಡಿಯ ಮದುವೆಗಾಗಿ ಈಗಾಗಲೇ ಅತಿಥಿಗಳು ಆಗಮಿಸಿದ್ದಾರೆ. ಸಮಾರಂಭ ಆರಂಭಗೊಂಡಿದೆ.

Parineeti Raghav wedding
ಪರಿಣಿತಿ ರಾಘವ್​ ಮದುವೆ
author img

By ETV Bharat Karnataka Team

Published : Sep 23, 2023, 2:13 PM IST

Updated : Sep 23, 2023, 2:21 PM IST

ಪರಿಣಿತಿ ರಾಘವ್​ ಮದುವೆ: ಉದಯಪುರಕ್ಕೆ ಆಗಮಿಸಿದ ಅತಿಥಿಗಳು

ನೈಸರ್ಗಿಕ ಸೌಂದರ್ಯಕ್ಕೆ ಹೆಸರಾದ ರಾಜಸ್ಥಾನದ ಉದಯಪುರದಲ್ಲಿ ಆಪ್ ನಾಯಕ ರಾಘವ್ ಚಡ್ಡಾ ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಜೋಡಿಯ ಮದುವೆ ಸಂಭ್ರಮ ಮನೆ ಮಾಡಿದೆ. ಇಂದು ಕಾರ್ಯಕ್ರಮಗಳು ಆರಂಭಗೊಂಡಿದ್ದು, ನಾಳೆ ವಿವಾಹ ಸಂಪನ್ನಗೊಳ್ಳಲಿದೆ. ಸಂಗೀತ ಸಮಾರಂಭದ ಸಿದ್ಧತೆ ಪೂರ್ಣಗೊಂಡಿದೆ.

ನಿನ್ನೆ ಬೆಳಿಗ್ಗೆ ವಧು ವರರು ಉದಯಪುರಕ್ಕೆ ತಲುಪಿದರು. ಅದಾದ ಬಳಿಕ ಜೋಡಿಯ ಪೋಷಕರು ಆಗಮಿಸಿದರು. ನಂತರ ಕುಟುಂಬಸ್ಥರು, ಆಪ್ತರು ಆಗಮಿಸಿದ್ದಾರೆ. ಇಂದು ಕೂಡ ಹಲವರು ಆಗಮಿಸಿದ್ದು, ವಿಡಿಯೋಗಳು ವೈರಲ್​ ಆಗುತ್ತಿವೆ. ಪಾಪರಾಜಿಗಳು ಏರ್​ಪೋರ್ಟ್​ ಬಳಿಯೇ ಇದ್ದು, ಕಾರ್ಯಕ್ರಮಕ್ಕೆ ಆಗಮಿಸುವವರ ಫೋಟೋ, ವಿಡಿಯೋಗಳನ್ನು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡುತ್ತಿದ್ದಾರೆ. ಅವುಗಳು ಸೋಷಿಯಲ್​ ಮೀಡಿಯಾ ಸುತ್ತುವರಿಯುತ್ತಿದ್ದು, ಮದುವೆ ಕುರಿತ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

ಅದ್ಧೂರಿ ಸಮಾರಂಭಕ್ಕೆ ಸಾಕ್ಷಿಯಾಗಲು ಅತಿಥಿಗಳು ಆಗಮಿಸುತ್ತಿದ್ದಾರೆ. ಪರಿಣಿತಿ ಮತ್ತು ಪ್ರಿಯಾಂಕಾ ಚೋಪ್ರಾ ಅವರ ಆಂಟಿ ಈಗಾಗಲೇ ಉದಯಪುರಕ್ಕೆ ತಲುಪಿದ್ದಾರೆ. ಕಾಮಿನಿ ಚೋಪ್ರಾ ಪತಿಯೊಂದಿಗೆ ಮದುವೆಗೆ ಆಗಮಿಸಿದ್ದಾರೆ. ಇತ್ತ ರಾಜ್ಯಸಭಾ ಸಂಸದ ಡೆರೆಕ್ ಓಬ್ರಿಯೆನ್, ಉದ್ಯಮಿ ಅಶೋಕ್ ಮಿತ್ತಲ್, ರಾಜ್ಯಸಭಾ ಸಂಸದ ವಿಕ್ರಮ್​​​ಜಿತ್ ಸಿಂಗ್ ಸಹ್ನಿ ಕೂಡ ಆಗಮಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಗಣ್ಯರು, ನವಜೋಡಿಗಳು ನೂರ್ಕಾಲ ಖುಷಿಯಾಗಿರಲಿ ಎಂದು ಶುಭ ಹಾರೈಸಿದ್ದಾರೆ.

ಮಧ್ಯಾಹ್ನದ ಅದ್ಧೂರಿ ಭೋಜನ ವ್ಯವಸ್ಥೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿದೆ. ಸಂಜೆ 7 ಗಂಟೆಗೆ ಸಂಗೀತ ಸಮಾರಂಭ ನಡೆಯಲಿದೆ. 90ರ ಸೂಪರ್​ ಹಿಟ್​ ಹಾಡುಗಳು ಸಮಾರಂಭದ ಮೆರುಗು ಹೆಚ್ಚಿಸಲಿದೆ. ಮದುವೆಯ ಶಾಸ್ತ್ರ, ಈವೆಂಟ್​ಗಳು ಹೋಟೆಲ್​ ಲೀಲಾ ಪ್ಯಾಲೆಸ್​​, ತಾಜ್​ ಲೇಕ್​ ಪ್ಯಾಲೆಸ್​ನಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: ಉದಯಪುರ ತಲುಪಿದ ಚೋಪ್ರಾ - ಚಡ್ಡಾ ಕುಟುಂಬ: ವರ ಕುದುರೆ ಏರಲ್ಲ, ದೋಣಿಯಲ್ಲಿ ಎಂಟ್ರಿ ಕೊಡಲಿದ್ದಾರೆ ರಾಘವ್​​

ಮದುವೆ ಮುನ್ನದ ಆಚರಣೆಗಳಲ್ಲಿ ಒಂದಾದ ಚೂರ ಸಮಾರಂಭ (choora ceremony) ಪಂಜಾಬಿ ವಿವಾಹದ ಪ್ರಮುಖ ಪದ್ಧತಿ. ಪ್ರೀತಿಯಿಂದ ಅಲಂಕರಿಸಿ ("Adorn with love") ಎಂಬ ಥೀಮ್​ನೊಂದಿಗೆ ಇಂದು ಬೆಳಗ್ಗೆ 10 ಗಂಟೆಗೆ ಹೋಟೆಲ್​ ಲೀಲಾ ಪ್ಯಾಲೆಸ್​ನ ಮಹಾರಾಜ್​​ ಸೂಟ್‌ನಲ್ಲಿ ನಡೆಯಿತು. ಈ ಆಚರಣೆಯಲ್ಲಿ ಪರಿಣಿತಿ ಅವರ ಕುಟುಂಬ ಸದಸ್ಯರು ಹಾಜರಿದ್ದರು. ಚೂರ ಸಮಾರಂಭ ಪಂಜಾಬಿ ಸಂಸ್ಕೃತಿಯ ಪ್ರತೀಕ. ವಧುವಿನ ಚಿಕ್ಕಪ್ಪ ಅಥವಾ ಚಿಕ್ಕಮ್ಮ (ತಾಯಿಯ ಕಡೆಯವರು) ಕೆಂಪು, ಬಿಳಿ ಬಳೆಗಳನ್ನು ವಧುವಿಗೆ ಉಡುಗೊರೆಯಾಗಿ ನೀಡುತ್ತಾರೆ. ಮದುವೆ ಸಂಭ್ರಮದ ಪ್ರಮುಖ ಆಚರಣೆ ಇದು.

ಇದನ್ನೂ ಓದಿ: 'ಯಾರೂ ಮಿತಿ ಮೀರಬಾರದು': ಬಿಜೆಪಿ ಸಂಸದರಿಗೆ ಕಂಗನಾ ಕ್ಲಾಸ್

ವಧು ಪರಿಣಿತಿ ಅವರ ಸೋದರಸಂಬಂಧಿ, ಗ್ಲೋಬಲ್​ ಐಕಾನ್ ಪ್ರಿಯಾಂಕಾ ಚೋಪ್ರಾ ಅವರು ಮದುವೆಗೆ ಹಾಜರಾಗುವ ನಿರೀಕ್ಷೆಯಿದೆ. ಆದಾಗ್ಯೂ, ಪ್ರಿಯಾಂಕಾ ಅವರು ಮದುವೆಗೆ ಹಾಜರಾಗದಿರುವ ಬಗ್ಗೆ ಸುಳಿವು ನೀಡಿದ್ದಾರೆ. ಕೊನೆ ಘಳಿಗೆಯಲ್ಲಾದರೂ ಆಗಮಿಸುತ್ತಾರೆ ಎಂಬುದು ಅಭಿಮಾನಿಗಳ ನಂಬಿಕೆ.

Last Updated : Sep 23, 2023, 2:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.