ETV Bharat / entertainment

ವದಂತಿ ಗೆಳೆಯ ರಾಘವ್​ ಜೊತೆ ಮುಂಬೈಗೆ ವಾಪಸಾದ ಪರಿಣಿತಿ - ವಿಡಿಯೋ - ಪರಿಣಿತಿ ರಾಘವ್ ವಿಡಿಯೋ

ಇಂದು ಬೆಳಗ್ಗೆ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

Parineeti Chopra Raghav Chadha
ಪರಿಣಿತಿ ಚೋಪ್ರಾ ರಾಘವ್ ಚಡ್ಡಾ
author img

By

Published : Apr 2, 2023, 2:50 PM IST

ಶೀಘ್ರದಲ್ಲೇ ದಾಂಪತ್ಯ ಜೀವನ ಆರಂಭಿಸಲಿದ್ದಾರೆ ಎನ್ನಲಾದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್​ ಆದ್ಮಿ ಪಕ್ಷದ ಯುವ ನಾಯಕ ರಾಘವ್ ಚಡ್ಡಾ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕಳೆದ ಬುಧವಾರ ದೆಹಲಿಗೆ ತೆರಳಿದ್ದ ಪರಿಣಿತಿ ಅವರು ಇಂದು ಮುಂಜಾನೆ ರಾಘವ್ ಅವರೊಂದಿಗೆ ವಾಪಸಾಗಿದ್ದಾರೆ. ಏರ್‌ಪೋರ್ಟ್‌ನಲ್ಲಿ ಈ ಜೋಡಿ ಸುತ್ತ ಪಾಪರಾಜಿಗಳು ಸುತ್ತುವರೆದು, ಮದುವೆ ಬಗ್ಗೆ ಪ್ರಶ್ನಿಸಲು ಪ್ರಾರಂಭಿಸಿದರು. ನಟಿ ಮತ್ತು ಸಂಸದ ಮಾತ್ರ ಒಂದಕ್ಷರ ಮಾತನಾಡದೇ ಮುಗುಳ್ನಗುತ್ತಾ ಮುಂದುವರಿದರು.

ಪರಿಣಿತಿ ಮತ್ತು ರಾಘವ್ ಅವರು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ವದಂತಿ ಹರಡಿದೆ. ಆದ್ರೆ ಈ ಜೋಡಿ ಮಾತ್ರ ಈ ಸುದ್ದಿಯನ್ನು ಇನ್ನೂ ಖಚಿತಪಡಿಸಿಲ್ಲ. ಈ ಬಗ್ಗೆ ಮೌನ ಮುಂದುವರಿಸಿದ್ದಾರೆ. ಆದರೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವುದರಿಂದಲೂ ಹಿಂದೆ ಸರಿದಿಲ್ಲ.

ಇಂದು ಮುಂಜಾನೆ ಕೂಡ ಮುಂಬೈ ವಿಮಾನ ನಿಲ್ದಾಣದಲ್ಲಿ ಪರಿಣಿತಿ ಮತ್ತು ರಾಘವ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮದುವೆ ಬಗ್ಗೆ ಪಾಪರಾಜಿಗಳು ತೋರಿದ ಉತ್ಸಾಹಕ್ಕೆ, ಈ ಜೋಡಿ ಮುಗುಳ್ನಗುತ್ತಲೇ ಮುಂದುವರಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ದೃಶ್ಯ ವೀಕ್ಷಿಸಿದ ನೆಟ್ಟಿಗರು ಈ ಜೋಡಿ ಮದುವೆ ಆಗುವುದು ಖಚಿತ ಎಂದೆಲ್ಲಾ ಭವಿಷ್ಯ ನುಡಿದಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಪರಿಣಿತಿ ಮತ್ತು ರಾಘವ್ ಅವರ ಉಪಸ್ಥಿತಿಯು ಸಾಕಷ್ಟು ಕುತೂಹಲ ಮೂಡಿಸಿತು. ಪಾಪರಾಜಿಗಳು ಈ ಜೋಡಿ ಫೋಟೋವನ್ನು ಒಟ್ಟಿಗೆ ಸೆರೆ ಹಿಡಿಯಲು ಉತ್ಸುಕರಾಗಿದ್ದರು. ಆದಾಗ್ಯೂ, ಇಬ್ಬರೂ ಕ್ಯಾಮರಾಗೆ ಪೋಸ್ ಕೊಡಲಿಲ್ಲ. ಆದ್ರೆ ಅಭಿಮಾನಿಯೋರ್ವರು ನಟಿ ಪರಿಣಿತಿ ಚೋಪ್ರಾ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಬಳಿಕ ಪರಿಣಿತಿ ಮತ್ತು ರಾಘವ್ ಇಬ್ಬರೂ ಒಂದೇ ಕಾರಿನಲ್ಲಿ ಏರ್​ಪೋರ್ಟ್​​​ನಿಂದ ನಿರ್ಗಮಿಸಿದರು.

ಇದೆಲ್ಲದರ ಮಧ್ಯೆ ಎಎಪಿ ನಾಯಕ ರಾಘವ್ ಚಡ್ಡಾ ಅವರು ಪರಿಣಿತಿ ಅವರ ಸೋದರ ಸಂಬಂಧಿ, ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ. ಮುಂಬೈನಲ್ಲಿ ನಡೆಯುತ್ತಿರುವ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್‌ಎಂಎಸಿಸಿ) ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಕುಟುಂಬ ಶುಕ್ರವಾರ ಭಾರತಕ್ಕೆ ಆಗಮಿಸಿದೆ. ವರದಿಗಳ ಪ್ರಕಾರ, ಪರಿಣಿತಿ ಸಂಬಂಧಿ ಪ್ರಿಯಾಂಕಾ ಅವರೊಂದಿಗೆ ಇದು ರಾಘವ್ ಅವರ ಮೊದಲ ಭೇಟಿ ಆಗಲಿದೆ.

ಇದನ್ನೂ ಓದಿ: ಪರಿಣಿತಿ-ರಾಘವ್ ಮದುವೆ ಖಚಿತಪಡಿಸಿದ ಗಾಯಕ ಹಾರ್ಡಿ ಸಂಧು

ಹಿಂದಿ ಚಿತ್ರನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ ಮುಂಬೈನ ರೆಸ್ಟೋರೆಂಟ್ ಬಳಿ ಒಂದೆರಡು ಬಾರಿ ಕಾಣಿಸಿಕೊಂಡ ಬಳಿಕ ಈ ಜೋಡಿ ಮದುವೆ ಆಗಲಿದ್ದಾರೆ ಎಂಬ ಬಗ್ಗೆ ವದಂತಿಗಳು ಹಬ್ಬಿವೆ. ಇತ್ತೀಚಿನ ದಿನಗಳಲ್ಲಿ ಈ ಜೋಡಿ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ವದಂತಿ ಪ್ರೇಮ ಪಕ್ಷಿಗಳ ಫೋಟೋ, ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಿದೆ. ಕೆಲ ಗಣ್ಯ ವ್ಯಕ್ತಿಗಳು ಕೂಡ ಈ ಜೋಡಿಗೆ ಶುಭ ಹಾರೈಸಿದ್ದಾರೆ. ಆದ್ರೆ ಈವರೆಗೆ ಈ ಜೋಡಿಯಿಂದಾಗಲಿ ಅಥವಾ ಕುಟುಂಬಸ್ಥರಿಂದಾಗಲಿ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: 'ಆಮ್ ಆದ್ಮಿ' ರಾಘವ್​ ಜೊತೆ ಮದುವೆ ಪ್ರಶ್ನೆಗೆ ನಾಚಿ ನೀರಾದ ಪರಿಣಿತಿ ಚೋಪ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.