ETV Bharat / entertainment

ವಿವಾಹದ ಸ್ಥಳಾನ್ವೇಷಣೆ ಮಾಡುತ್ತಿರುವ ಪರಿಣಿತಿ: ಸೋದರಿಯಂತೆ ರಾಜಸ್ಥಾನದಲ್ಲಿ ಸಪ್ತಪದಿ ತುಳಿಯಲಿದ್ದಾರಾ ಚೋಪ್ರಾ? - ETV Bharath Kannada news

ಪರಿಣಿತಿ ಚೋಪ್ರಾ ಅವರು ರಾಜಸ್ಥಾನಕ್ಕೆ ಬಂದಿಳಿದಿದ್ದಾರೆ. ಬೇಸಿಗೆಯ ರಜೆಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ, ಇದರ ಜೊತೆಗೆ ಮದುಗೆ ಹೊಟೇಲ್​ ಹುಡುಕುತ್ತಿದ್ದಾರೆ ಎಂಬ ವರದಿಗಳೂ ಆಗುತ್ತಿದೆ.

parineeti chopra
ಪರಿಣಿತಿ ಚೋಪ್ರಾ
author img

By

Published : May 27, 2023, 7:23 PM IST

ಉದಯಪುರ (ರಾಜಸ್ಥಾನ): ದೇಶ ಮತ್ತು ಪ್ರಪಂಚದ ಸೌಂದರ್ಯಕ್ಕೆ ಹೆಸರುವಾಸಿಯಾದ ನೀಲಿ ಸರೋವರಗಳ ನಗರವು ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಟರಿಂದ ಗಿಜಿಗುಡುತ್ತಿದೆ. ನಟಿ ಪರಿಣಿತಿ ಚೋಪ್ರಾ ಶನಿವಾರ ಉದಯಪುರ ತಲುಪಿದ್ದಾರೆ. ಇಲ್ಲಿ ಬೇಸಿಗೆ ರಜೆಯ ಪ್ರವಾಸದಲ್ಲಿ ಬಂದಿದ್ದಾರೆ ಎನ್ನಲಾಗಿದೆ. ಮಹಾರಾಣಾ ಪ್ರತಾಪ್ ದಾಬೋಕ್ ವಿಮಾನ ನಿಲ್ದಾಣದಲ್ಲಿ ಪರಿಣಿತಿ ಚೋಪ್ರಾ ಕಾಣಿಸಿಕೊಂಡಿದ್ದಾರೆ. ನಟಿ ಪರಿಣಿತಿ ಚೋಪ್ರಾ ಅವರು ಇಂಡಿಗೋ ವಿಮಾನದ ಮೂಲಕ ಉದಯಪುರದ ದಬೋಕ್ ವಿಮಾನ ನಿಲ್ದಾಣ ತಲುಪಿದ್ದಾರೆ. ಅಲ್ಲಿಂದ ಪಂಚತಾರ ಹೊಟೇಲ್​ಗೆ ಪ್ರಯಾಣ ಬೆಳೆಸಿದ್ದಾರೆ.

ಆಪ್​ ಸಂಸದನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಪರಿಣಿತಿ: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ಅವರು ಮೇ 13 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಒಟ್ಟಿಗೆ ಓದಿದವರು. ಲಂಡನ್​ನಲ್ಲಿ ಇಬ್ಬರೂ ಒಂದೇ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಮುಗಿಸಿದರು. ಈ ವೇಳೆ, ಇಬ್ಬರ ಮಧ್ಯೆ ಪ್ರೀತಿ ಮೂಡಿದೆ. ಇಬ್ಬರೂ ಹಲವು ಕಡೆ ಒಟ್ಟಾಗಿ ಕಾಣಿಸಿಕೊಂಡಿದ್ದು, ಹಲವು ಗಾಸಿಪ್​ ಸುದ್ದಿ ಹರಿದಾಡಿದ್ದವು. ಮದುವೆ ಬಗ್ಗೆಯೂ ಸುದ್ದಿ ಹರಿದಾಡಿತ್ತು. ಈಗ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡು ಗಾಸಿಪ್​ನ್ನು ನಿಜವಾಗಿಸಿದ್ದಾರೆ.

ರಾಜಸ್ಥಾನಕ್ಕೆ ನಟಿ ಪರಿಣಿತಿ ಚೋಪ್ರಾ ಬಂದಿರುವುದು ವಿವಾಹಕ್ಕೆ ಸೂಕ್ತ ಸ್ಥಳವನ್ನು ಹುಡುಕಲು ಎಂದು ಹೇಳಲಾಗುತ್ತಿದೆ. ಹೀಗಾಗಿ ರಾಘವ್ ಚಡ್ಡಾ ಕೂಡಾ ಉದಯಪುರಕ್ಕೆ ಬರಲಿದ್ದಾರೆ ಎಂಬ ಮಾತಿದೆ. ಅವರು ಬೇರೆ ವಿಮಾನದಲ್ಲಿ ಬಂದಿಳಿಯಲಿದ್ದಾರೆ ಎಂದು ಕೆಲ ನಂಬಲರ್ಹ ಮೂಲಗಳು ಮಾಹಿತಿಯನ್ನು ಹಂಚಿಕೊಂಡಿದೆ. ನಿಶ್ಚಿತಾರ್ಥದ ನಂತರ ರಾಜಸ್ಥಾನದ ಕೆಲ ಪ್ರವಾಸಿ ಸ್ಥಳಗಳ ಭೇಟಿಯ ಜೊತೆಗೆ ವಿವಾಹಕ್ಕೆ ಸ್ಥಳವನ್ನು ನೋಡಲಿದ್ದಾರೆ ಎಂದು ಹೇಳಲಾಗಿದೆ.

ಸೆಲೆಬ್ರೆಟಿಗಳ ವಿವಾಹಕ್ಕೆ ಹೆಸರುವಾಸಿಯಾದ ರಾಜಸ್ಥಾನ: ಉದಯಪುರ ದೇಶ ಮತ್ತು ಪ್ರಪಂಚದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್‌ಗೆ ಹೆಸರುವಾಸಿಯಾಗಿದೆ. ಅನೇಕ ಸೆಲೆಬ್ರಿಟಿಗಳು ಇಲ್ಲಿ ಮದುವೆಯಾಗಿದ್ದಾರೆ. ಇದಕ್ಕೂ ಮುನ್ನ ನಟಿ ಕಂಗನಾ ಅವರ ಸಹೋದರ ಇಲ್ಲಿ ವಿವಾಹವಾದರು. ಅದೇ ಸಮಯದಲ್ಲಿ, ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಮಗಳ ವಿವಾಹಾ ಹಾಗೇ ನಟಿ ರವೀನಾ ಟಂಡನ್ ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳು ಇಲ್ಲಿ ವಿವಾಹವಾಗಿದ್ದಾರೆ.

ಜೋಧ್‌ಪುರದಲ್ಲಿ ಪ್ರಿಯಾಂಕಾ ಚೋಪ್ರಾ ವಿವಾಹ: ಪರಿಣಿತಿ ಚೋಪ್ರಾ ಅವರ ಸಹೋದರಿ ಪ್ರಿಯಾಂಕಾ ಚೋಪ್ರಾ ಕೂಡ ರಾಜಸ್ಥಾನದ ಜೋಧ್‌ಪುರದಲ್ಲಿ ವಿವಾಹವಾಗಿದ್ದರು. ಪ್ರಿಯಾಂಕಾ ಮತ್ತು ನಿಕ್ ರಾಜಸ್ಥಾನದ ಉಮೈದ್ ಭವನದಲ್ಲಿ ಸಪ್ತಪದಿ ತುಳಿದಿದ್ದರು. ಉಮೈದ್ ಭವನದಲ್ಲಿ ನಡೆದ ಪ್ರಿಯಾಂಕಾ ಚೋಪ್ರಾ ಅವರ ಮದುವೆಯಲ್ಲಿ ಭಾರತ ಮತ್ತು ವಿದೇಶಗಳಿಂದ ಅನೇಕ ತಾರಾ ಅತಿಥಿಗಳು ಭಾಗವಹಿಸಿದ್ದರು. ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯಗಳ ಪ್ರಕಾರ ದಂಪತಿಗಳು ವಿವಾಹವಾಗಿದ್ದರು.

ಇದನ್ನೂ ಓದಿ: ’ಮತ್ತೆ ಮದುವೆ‘ ಬಳಿಕ ತಮ್ಮ ಸಂಭಾವನೆ ಹೆಚ್ಚಿಸಿಕೊಂಡ ಬಹುಭಾಷಾ ತಾರೆ ಪವಿತ್ರಾ ಲೋಕೇಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.