ಆಮ್ ಆದ್ಮಿ ಪಕ್ಷದ ಯುವ ರಾಜಕಾರಣಿ ರಾಘವ್ ಚಡ್ಡಾ ಹಾಗೂ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಇತ್ತೀಚೆಗಷ್ಟೇ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಅದ್ಧೂರಿ ಸಮಾರಂಭದ ಸುಂದರ ಕ್ಷಣಗಳಿಗಾಗಿ ಅಭಿಮಾನಿಗಳು ಕಾತರರಾಗಿದ್ದರು. ಕೊನೆಗೂ ಅಭಿಮಾನಿಗಳ ಕಾಯುವಿಕೆ ಕೊನೆಗೊಂಡಿದೆ.
ಹೌದು, ನವಜೋಡಿ ಸೋಷಿಯಲ್ ಮೀಡಿಯಾದಲ್ಲಿಂದು ತಮ್ಮ ಅದ್ಧೂರಿ ಮದುವೆಯ ವಿಡಿಯೋವನ್ನು ಹಂಚಿಕೊಂಡಿದೆ. ನಟಿ ಪರಿಣಿತಿ ಚೋಪ್ರಾ ಅವರ ಓ ಪಿಯಾ ಹಾಡು ಹಿನ್ನೆಲೆಯಲ್ಲಿ ಕೇಳಿ ಬರುತ್ತಿದ್ದು, ನವಜೀವನ ಆರಂಭದ ಸುಂದರ ಕ್ಷಣಗಳು ಈ ವಿಡಿಯೋದಲ್ಲಿ ತುಂಬಿದೆ. ಸೆಹ್ರಾಬಂದಿ ಶಾಸ್ತ್ರದಿಂದ ಹಿಡಿದು ಸಿಂಧೂರ ಹಚ್ಚುವವರೆಗೂ ಮದುವೆಯ ಕಾರ್ಯಕ್ರಮದ ಪ್ರಮುಖ ಕ್ಷಣಗಳು ಈ ವಿಡಿಯೋದಲ್ಲಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ಗಾಯಕಿಯೂ ಆಗಿರುವ ಬಾಲಿವುಡ್ ಬಹುಬೇಡಿಕೆ ನಟಿ ಪರಿಣಿತಿ ಚೋಪ್ರಾ ಅವರು ’’ಓ ಪಿಯಾ‘‘ ಎಂಬ ಸ್ಪೆಷಲ್ ಸಾಂಗ್ ಅನ್ನು ಸಂಸದ ರಾಘವ್ ಚಡ್ಡಾ ಅವರಿಗೆ ಅರ್ಪಿಸಿದ್ದಾರೆ. ’ಓ ಪಿಯಾ ’ವನ್ನು ಸ್ವತಃ ಪರಿಣಿತಿ ಅವರೇ ಪತಿ ರಾಘವ್ಗಾಗಿ ಹಾಡಿದ್ದಾರೆ. ಸೆಪ್ಟೆಂಬರ್ 24 ರಂದು ರಾಜಸ್ಥಾನದ ಉದಯಪುರದ ಹೋಟೆಲ್ ಲೀಲಾ ಪ್ಯಾಲೇಸ್ನಲ್ಲಿ ಈ ಜೋಡಿ ಹಸೆಮಣೆ ಏರಿತ್ತು. ಇಂದು ಬ್ಯೂಟಿಫುಲ್ ವಿಡಿಯೋವನ್ನು ರಾಘ್ನೀತಿ ಜೋಡಿ ಶೇರ್ ಮಾಡಿದ್ದು, ಹಿನ್ನೆಲೆಯಲ್ಲಿ ಓ ಪಿಯಾ ಹಾಡು ಪ್ಲೇ ಆಗುತ್ತಿದೆ. ವಿಡಿಯೋವನ್ನು ಹಂಚಿಕೊಂಡ ಇಶಕ್ಜಾದೆ ನಟಿ, "ನನ್ನ ಪತಿಗೆ....ನಾನು ಹಾಡಿದ ಅತ್ಯಂತ ಪ್ರಮುಖ ಹಾಡು. ನೀವಿರುವ ಕಡೆ ಹೆಜ್ಜೆ ಹಾಕೋದು, ಬಾರಾತ್ನಿಂದ ನನ್ನನ್ನು ಮರೆಮಾಡಿಕೊಳ್ಳುವುದು, ನಾನೇನು ಹೇಳಲಿ, ಓ ಪಿಯಾ, ಚಲ್ ಚಲೇ ಆ....'' ಎಂದು ಬರೆದುಕೊಂಡಿದ್ದಾರೆ.
ಯ್ಯೂಟ್ಯೂಬ್, ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಓ ಪಿಯಾ ಆಡಿಯೋ ಲಭ್ಯವಿದೆ. ಸದ್ಯ ರಾಘ್ನೀತಿ ಜೋಡಿ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಇದನ್ನೂ ಓದಿ: RagNeeti wedding pictures: ಬಹುಕಾಲದ ಪ್ರೀತಿಗೆ ಮೂರು ಗಂಟಿನ ನಂಟು; ಅದ್ಧೂರಿಯಾಗಿ ಮದುವೆಯಾದ ರಾಘ್ನೀತಿ
ಪರಿಣಿತಿ ರಾಘವ್ ಮದುವೆ ಕಾರ್ಯಕ್ರಮಗಳು ರಾಜಸ್ಥಾನದ ಉದಯಪುರದಲ್ಲಿರುವ ಎರಡು ಐಶಾರಾಮಿ ಹೋಟೆಲ್ಗಳಲ್ಲಿ ಬಹಳ ಅದ್ಧೂರಿಯಾಗಿ ನಡೆಯಿತು. ಸೆಪ್ಟೆಂಬರ್ 23, 24ರಂದು ಕಾರ್ಯಕ್ರಮಗಳು ಜರುಗಿದವು. 24ರಂದು ವಧುವಿನ ಹಣೆಗೆ ವರ ಸಿಂಧೂರ ಹಚ್ಚುವ ಮೂಲಕ ಮದುವೆಯ ಪ್ರಮುಖ ಶಾಸ್ತ್ರವನ್ನು ಸಂಪನ್ನಗೊಳಿಸಿದರು. ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ರಾಘ್ನೀತಿ ವಿವಾಹವಾದರು. ಸಮಾರಂಭಕ್ಕೆ ರಾಜಕೀಯ ಮತ್ತು ಸಿನಿಮಾ ಗಣ್ಯರು ಸಾಕ್ಷಿಯಾಗಿದ್ದರು. ಬಹುದಿನಗಳ ಪ್ರೀತಿಗೆ ಸೆ. 24ರಂದು ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದರು..
ಇದನ್ನೂ ಓದಿ: 'ರಾಘ್ನೀತಿ' ಅರಶಿಣ ಶಾಸ್ತ್ರದ ವಿಡಿಯೋ ವೈರಲ್; ಮಿಲಿಯನ್ ಡಾಲರ್ ಸ್ಮೈಲ್ನಲ್ಲಿ ಜೋಡಿ