ETV Bharat / entertainment

ಪರಿಣಿತಿ ಚೋಪ್ರಾ-ರಾಘವ್​ ಚಡ್ಡಾ ಮದುವೆ ವಿಚಾರ: ಶುಭ ಕೋರಿದ ಸಂಸದ - ಪರಿಣಿತಿ ಚೋಪ್ರಾ ರಾಘವ್​ ಚಡ್ಡಾ ಫೋಟೋ

ಪರಿಣಿತಿ ಚೋಪ್ರಾ ರಾಘವ್​ ಚಡ್ಡಾ ಮದುವೆ ಆಗಲಿದ್ದಾರೆಂಬ ಸುದ್ದಿ ಜೋರಾಗಿ ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾ ಈ ಇಬ್ಬರನ್ನೂ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.

Parineeti Chopra Raghav Chadha wedding
ಪರಿಣಿತಿ ಚೋಪ್ರಾ ರಾಘವ್​ ಚಡ್ಡಾ ಮದುವೆ
author img

By

Published : Mar 28, 2023, 4:31 PM IST

ಹಿಂದಿ ಸಿನಿ ಲೋಕದಲ್ಲಿ ಗುರುತಿಸಿಕೊಂಡಿರುವ​ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್​ ಆದ್ಮಿ ಪಕ್ಷದ ನಾಯಕ, ಸಂಸದ, ಯುವ ರಾಜಕಾರಣಿ ರಾಘವ್​ ಚಡ್ಡಾ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಕೇಳಿಬರುತ್ತಿದೆ. ಈ ಜೋಡಿಯ ಕುಟುಂಬಸ್ಥರು ಸಹ ಮದುವೆ ವಿಚಾರವಾಗಿ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಸಾಕಷ್ಟು ಸೌಂಡ್​ ಮಾಡುತ್ತಿರುವ ಈ ಹೊತ್ತಿನಲ್ಲಿ ಆಪ್​​ ಮುಖಂಡನ ಟ್ವೀಟ್​ ವದಂತಿಗೆ ಪುಷ್ಠಿ ನೀಡಿದಂತಿದೆ.

ಸಂಜೀವ್ ಅರೋರಾ ಟ್ವೀಟ್: ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾ ಈ ಇಬ್ಬರನ್ನೂ ಅಭಿನಂದಿಸಿ ಟ್ವೀಟ್ ಮಾಡುವ ಮೂಲಕ ಅವರ ನಿಶ್ಚಿತಾರ್ಥದ ಬಗ್ಗೆ ಊಹಾಪೋಹ ಹುಟ್ಟಲು ಕಾರಣರಾಗಿದ್ದಾರೆ. ಪರಿಣಿತಿ ಮತ್ತು ರಾಘವ್ ಅವರನ್ನು ಟ್ಯಾಗ್ ಮಾಡುವ ಮೂಲಕ ಎಎಪಿ ಸಂಸದ ಟ್ವೀಟ್ ಮಾಡಿದ್ದಾರೆ. 'ನಾನು ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಅವರಿಗೆ ನನ್ನ ಅಭಿನಂದನೆ ತಿಳಿಸುತ್ತೇನೆ. ಅವರ ಒಟ್ಟುಗೂಡುವಿಕೆ ಪ್ರೀತಿ, ಸಂತೋಷ ಮತ್ತು ಒಡನಾಟದಿಂದ ತುಂಬಿರಲಿ, ಜೋಡಿ ಆಶೀರ್ವದಿಸಲ್ಪಡಲಿ' ಎಂದು ಟ್ವೀಟ್ ಮಾಡಿದ್ದಾರೆ.

ಜೋಡಿಯ ಕುಟುಂಬಗಳು ಸಂಪರ್ಕದಲ್ಲಿದ್ದಾರೆ. ಶೀಘ್ರದಲ್ಲೇ ರೋಕಾ ಸಮಾರಂಭವನ್ನು ನಡೆಸಬಹುದು ಎಂದು ಹೇಳಲಾಗಿದೆ. ಈ ಎಲ್ಲಾ ವದಂತಿಗಳ ಮಧ್ಯೆ, ಸಂಜೀವ್ ಅರೋರಾ ತಮ್ಮ ಟ್ವೀಟ್ ಮೂಲಕ ನಿಶ್ಚಿತಾರ್ಥದ ವದಂತಿಗಳಿಗೆ ಪುಷ್ಠಿ ನೀಡಿದ್ದಾರೆ. ಆದ್ರೆ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ತಮ್ಮ ಸಂಬಂಧದ ಬಗ್ಗೆ ಇನ್ನೂ ಮೌನ ವಹಿಸಿದ್ದಾರೆ.

ಎಎಪಿ ಸಂಸದ ಸಂಜೀವ್ ಅರೋರಾ ಟ್ವೀಟ್ ಮಾಡುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಸಂಬಂಧವನ್ನು ದೃಢೀಕರಿಸುವಂತೆ ಕೇಳುತ್ತಿದ್ದಾರೆ. ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು 'ಹೈ, ಈ ವಿಷಯ ಎಂದು ಅನೌನ್ಸ್ ಆಯಿತು?' ಎಂದು ಕೇಳಿದ್ದಾರೆ. ಮತ್ತೊಬ್ಬರು 'ಯಾವ ಶುಭ ಸುದ್ದಿಗೆ ಅಭಿನಂದನೆಗಳು?' ಎಂದು ಪ್ರಶ್ನಿಸಿದ್ದಾರೆ. ಗೊಂದಲಕ್ಕೊಳಗಾದ ಇನ್ನೋರ್ವ ಸಾಮಾಜಿಕ ಬಳಕೆದಾರರು 'ಅವರು ಯಾವಾಗ ಘೋಷಿಸಿದರು?' ಎಂದು ಕೇಳಿದ್ದಾರೆ.

ಇದನ್ನೂ ಓದಿ: ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಾ ನಟಿ ಪರಿಣಿತಿ ಚೋಪ್ರಾ - ಸಂಸದ ರಾಘವ್ ಚಡ್ಡಾ?

ಮುಂಬೈನಲ್ಲಿ ಎರಡು ಬಾರಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೋಟೆಲ್​ಗಳ ಹೊರಗೆ ಇಬ್ಬರೂ ಜೋಡಿಯಾಗಿ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಕೂಡಲೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿ, ಹೊಸ ಸೆಲೆಬ್ರಿಟಿ ಜೋಡಿಯ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ. ರಾಘವ್​ ಚಡ್ಡಾ ಅವರಲ್ಲಿ ಈ ಬಗ್ಗೆ ಪ್ರಶ್ನಿಸಿದ್ದ ವೇಳೆ ರಾಜನೀತಿ ಬಗ್ಗೆ ಕೇಳಿ, ಪರಿಣಿತಿ ಬಗ್ಗೆ ಅಲ್ಲ ಎಂದು ತಿಳಿಸಿದ್ದರು. ಮದುವೆ ಬಗ್ಗೆ ಏನಾದರು ನಿರ್ಧಾರ ಆದ್ರೆ ನಿಮಗೆ ತಿಳಿಸಿಯೇ ಮದುವೆ ಆಗುತ್ತೇನೆ ಎಂದು ಸಹ ತಿಳಿಸಿದ್ದರು.

ಇದನ್ನೂ ಓದಿ: ರಾಘವ್​ ಚಡ್ಡಾ ಮದುವೆ​ ವದಂತಿ ಮಧ್ಯೆ ಖ್ಯಾತ ಡಿಸೈನರ್ ಭೇಟಿಯಾದ ಪರಿಣಿತಿ ಚೋಪ್ರಾ

ಇನ್ನು ನಟಿ ಪರಿಣಿತಿ ಚೋಪ್ರಾ ಮುಂಬೈನಲ್ಲಿರುವ ಬಾಲಿವುಡ್​ನ ಖ್ಯಾತ ಡಿಸೈನರ್​ ಮನೀಶ್​ ಮಲ್ಹೋತ್ರಾ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಮನೀಶ್ ಅವರ​ ಮನೆಯ ಒಳಗೆ ಪ್ರವೇಶಿಸುವ ಮೊದಲು ಪಾಪರಾಜಿಗಳ ಕ್ಯಾಮರಾಗೆ ನಗುಮುಖದಿಂದಲೇ ಪೋಸ್​ ಕೊಟ್ಟಿದ್ದರು. ಇದು ಕೂಡ ಊಹಾಪೋಹ ಹೆಚ್ಚಾಗಲು ದಾರಿ ಮಾಡಿಕೊಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.