ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಹಸೆಮಣೆ ಏರುವ ನವೋತ್ಸಾಹದಲ್ಲಿದ್ದಾರೆ. ಪಂಜಾಬಿ ಪದ್ಧತಿಯಂತೆ ವಿವಾಹಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಆಕರ್ಷಕ ವೇದಿಕೆ ಬಹುತೇಕ ಸಿದ್ಧಗೊಂಡಿದೆ. ವಧು-ವರರ ನಿವಾಸಗಳು ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿವೆ.
'ರಾಗ್‌ನೀತಿ' ಮದುವೆ ಸ್ಥಳ, ದಿನಾಂಕ: ಸೆಪ್ಟೆಂಬರ್ 23 ರಂದು ವಿವಾಹ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. 24 ರಂದು ವಧು-ವರ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಲಿದ್ದಾರೆ. ಅದ್ಧೂರಿ ವಿವಾಹ ಕಾರ್ಯಕ್ರಮಗಳು ರಾಜಸ್ಥಾನದ ಉದಯಪುರದಲ್ಲಿ ನಡೆಯಲಿವೆ. ಹೋಟೆಲ್ ಲೀಲಾ ಪ್ಯಾಲೆಸ್‌ನಲ್ಲಿ ಹೆಚ್ಚಿನ ಕಾರ್ಯಕ್ರಮಗಳು ನಡೆಯಲಿವೆ. ತಾಜ್ ಲೇಕ್ ಪ್ಯಾಲೆಸ್ನಲ್ಲಿಯೂ ಕಾರ್ಯಕ್ರಮಗಳು ಜರುಗಲಿವೆ. ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಉದಯಪುರ ಬಾಲಿವುಡ್ನ ಅದ್ಧೂರಿ ಮದುವೆಗೆ ಸಾಕ್ಷಿಯಾಗಲಿದ್ದು, ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದವರು ಆಗಮಿಸಲಿದ್ದಾರೆ.
'ರಾಗ್‌ನೀತಿ' ವೆಡ್ಡಿಂಗ್ ಥೀಮ್: ಸಂಗಿತ ಸಮಾರಂಭದಿಂದ ಹಿಡಿದು ಆರತಕ್ಷತೆಯವರೆಗೂ ವಿವಿಧ ಶಾಸ್ತ್ರ, ಈವೆಂಟ್ಗಳು ಅದ್ಧೂರಿಯಾಗಿಯೇ ಇರಲಿವೆ. ಸಂಗೀತ್ ಇರಲಿದೆ. ಮ್ಯೂಸಿಕ್, ಡ್ಯಾನ್ಸ್ ಎಲ್ಲವೂ 90ರ ದಶಕಕ್ಕೆ ಕೊಂಡೊಯ್ಯಲಿದೆ ಎಂದು ನಿರೀಕ್ಷಿಸಲಾಗಿದೆ. ಎವರ್ ಫೇವರೆಟ್ ಸಾಂಗ್ಸ್ ಅನ್ನು ಪ್ಲೇ ಮಾಡಲಾಗುವುದು ಎಂಬ ಮಾಹಿತಿ ಇದೆ. 90ರ ದಶಕದ ಹಾಡುಗಳು ಸದ್ದು ಮಾಡಲಿದೆ.
ಸೆ.23ರ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಶುರು: ಮದುವೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಸೆಪ್ಟೆಂಬರ್ 23 ರಂದು ಪರಿಣಿತಿ ಚೋಪ್ರಾ ಅವರ ಚೂರ ಸಮಾರಂಭದೊಂದಿಗೆ (Choora ceremony) ಆರಂಭಗೊಳ್ಳುತ್ತದೆ. 12 ರಿಂದ 4 ಗಂಟೆವರೆಗೆ ಊಟದ ವ್ಯವಸ್ಥೆ ಇರಲಿದೆ. ಸೂರ್ಯಾಸ್ತ ಆಗುತ್ತಿದ್ದಂತೆ ವಧು ವರನ ಕುಟುಂಬಸ್ಥರು ಮುಂದಿನ ಕಾರ್ಯಕ್ರಮಗಳಿಗೆ ಬಂದು ಒಟ್ಟು ಸೇರುತ್ತಾರೆ. '90ರ ದಶಕದಂತೆ ಪಾರ್ಟಿ ಮಾಡೋಣ' ಎಂಬ ಥೀಮ್ನೊಂದಿಗೆ ಕಾರ್ಯಕ್ರಮಗಳು ಜರುಗಲಿವೆ. ಅಂತಿಮವಾಗಿ ಸೆಪ್ಟೆಂಬರ್ 24ರಂದು ವಿವಾಹದ ಪ್ರಮುಖ ಶಾಸ್ತ್ರ ನೆರವೇರಲಿದೆ.
ಮೆನು, ಈವೆಂಟ್ನ ಹೈಲೈಟ್ಸ್: ಅತಿಥಿಗಳಿಗೆ ಪಂಜಾಬಿ ಊಟದ ವ್ಯವಸ್ಥೆ ಮಾಡಲಾಗುವುದು. ಬಗೆಬಗೆಯ ಪಂಜಾಬಿ ಖಾದ್ಯ ಇರಲಿದೆ. ವಧು-ವರ ಇಬ್ಬರೂ ಕೂಡ ಪಂಜಾಬಿ ಹಿನ್ನೆಲೆಯಿಂದ ಬಂದಿರುವ ಕಾರಣ, ಸಂಪೂರ್ಣ ಮದುವೆ ಕಾರ್ಯಕ್ರಮಗಳು ಪಂಜಾಬಿ ಸಂಸ್ಕೃತಿಯ ಪ್ರಕಾರವೇ ನಡೆಯಲಿದೆ. ರಾಜಸ್ಥಾನಿ ಭಕ್ಷ್ಯಗಳು ಇರಲಿವೆ. ರಾಘವ್ ಕುದರೆಯನ್ನೇರಿ ಬರುವ ಬದಲು ದೋಣಿಯಲ್ಲಿ ವೇದಿಕೆ ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಪರಿಣಿತಿ-ರಾಘವ್ ಮದುವೆ: ವರನ ಮನೆಗೆ ವಿಶೇಷ ಶೃಂಗಾರ- ವಿಡಿಯೋ ನೋಡಿ!
ಪ್ರಿಯಾಂಕಾ ಚೋಪ್ರಾ ಫ್ಯಾಮಿಲಿ: ವಧುವಿನ ಸೋದರಸಂಬಂಧಿ, ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಸೆ.23ರಂದು ಕಾರ್ಯಕ್ರಮಕ್ಕೆ ಆಗಮಿಸುವರು. ಪತಿ ನಿಕ್ ಜೋನಾಸ್ ಕೂಡ ಆಗಮಿಸುವ ನಿರೀಕ್ಷೆ ಇದೆ. ಪ್ರಿಯಾಂಕಾ ಮತ್ತು ತಾಯಿ ಮಧು ಚೋಪ್ರಾ ವಧುವಿನ ಕಡೆಯಿಂದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಇದನ್ನೂ ಓದಿ: ಶಾರುಖ್ ಸ್ಟಾರ್ಡಮ್ ಪವರ್: ಚಿತ್ರರಂಗದವರ ಹುಬ್ಬೇರಿಸಿದ 'ಜವಾನ್' ಕಲೆಕ್ಷನ್!
ಆರತಕ್ಷತೆ: ರಾಜಸ್ಥಾನದಲ್ಲಿ ಮದುವೆ ನಡೆದ ಬಳಿಕ, ಸೆಪ್ಟೆಂಬರ್ 30 ರಂದು ಚಂಡೀಗಢದಲ್ಲಿ ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ.