ದೇಶದ ರಾಜಕೀಯದಲ್ಲಿ ಭಾರೀ ಸಂಚಲನ ಉಂಟಾಗಿದೆ. ಮೋದಿ ಉಪನಾಮದ ಬಗ್ಗೆ ವಿವಾದಾತ್ಮಕ ಹೇಳಿಕೆ ಹಿನ್ನೆಲೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸೂರತ್ ಜಿಲ್ಲಾ ನ್ಯಾಯಾಲಯ ದೋಷಿ ಎಂದು 2 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಕೊಟ್ಟಿದೆ. ಬಳಿಕ ಅವರಿಗೆ 30 ದಿನಗಳ ಜಾಮೀನು ಮಂಜೂರು ಮಾಡಲಾಗಿದೆ. ಶಿಕ್ಷೆ ಪ್ರಕಟವಾದ ಮರುದಿನವೇ ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಈ ಸುದ್ದಿ ದೇಶದಲ್ಲಿ ಸಂಚಲನ ಮೂಡಿಸಿದೆ. ಮತ್ತೊಂದೆಡೆ ಆಮ್ ಆದ್ಮಿ ಪಕ್ಷದ ಯುವ ನಾಯಕ ಮತ್ತು ಪಂಜಾಬ್‌ನಿಂದ ಆಯ್ಕೆ ಆಗಿರುವ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರೊಂದಿಗೆ ಡೇಟಿಂಗ್ ವಿಚಾರವಾಗಿ ಚರ್ಚೆಯಲ್ಲಿದ್ದಾರೆ. ಈ ಎರಡೂ ಸುದ್ದಿಗಳು ರಾಜಕೀಯದಲ್ಲಿ ಸಂಚಲನ ಉಂಟು ಮಾಡಿದೆ.
ಬಿಜೆಪಿ ಬೆಂಬಲಿಗ ಸಮೀತ್ ಠಕ್ಕರ್ ಅವರು ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಬಗ್ಗೆ ಟ್ವೀಟ್ ಮಾಡಿದ್ದಾರೆ. 'ಪಂಜಾಬಿ ಜೋಡಿಗೆ ರೋಕಾ (ಮದುವೆ ಮುನ್ನದ ಶಾಸ್ತ್ರ/ನಿಶ್ಚಿತಾರ್ಥ) ಶುಭಾಶಯಗಳು' ಎಂದು ಬರೆದಿದ್ದಾರೆ. ಮುಂಬೈನ ರೆಸ್ಟೋರೆಂಟ್‌ನ ಹೊರಗೆ ರಾಘವ್ ಮತ್ತು ಪರಿಣಿತಿ ಕಾಣಿಸಿಕೊಂಡಿರುವ ವಿಡಿಯೋ ಶೇರ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರೂ ಕೂಡ ಟ್ವಿಟರ್‌ನಲ್ಲಿ ತಮ್ಮನ್ನು ಫಾಲೋ ಮಾಡುತ್ತಾರೆ ಎಂದು ಸಮಿತ್ ತಮ್ಮ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾರೆ. ಸಮಿತ್ ಬಿಜೆಪಿಯ ಕಟ್ಟಾ ಬೆಂಬಲಿಗ ಮತ್ತು ಅವರು ಟ್ವಿಟರ್‌ನಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವುದು ಇಲ್ಲಿ ಗಮನಿಸಬೇಕಾದ ವಿಚಾರ.
-
Congratulations to the new Punjabi couple @raghav_chadha and @ParineetiChopra on their ROKKA. Best wishes pic.twitter.com/iwpxvFGZq5
— Sameet Thakkar (@thakkar_sameet) March 23, 2023 " class="align-text-top noRightClick twitterSection" data="
">Congratulations to the new Punjabi couple @raghav_chadha and @ParineetiChopra on their ROKKA. Best wishes pic.twitter.com/iwpxvFGZq5
— Sameet Thakkar (@thakkar_sameet) March 23, 2023Congratulations to the new Punjabi couple @raghav_chadha and @ParineetiChopra on their ROKKA. Best wishes pic.twitter.com/iwpxvFGZq5
— Sameet Thakkar (@thakkar_sameet) March 23, 2023
ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಇತ್ತೀಚೆಗಷ್ಟೇ ಮುಂಬೈನ ರೆಸ್ಟೋರೆಂಟ್ ಹೊರಗೆ ಕಾಣಿಸಿಕೊಂಡು ಸಖತ್ ಸುದ್ದಿಯಾಗಿದ್ದಾರೆ. ಇದಕ್ಕೂ ಮೊದಲು ಸಹ ಹಲವು ಬಾರಿ ಹೋಟೆಲ್ಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅವರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: 'ಎಲ್ಲಾ ಗೇಲಿಗೂ ಹೊಡಿ ಗೋಲಿ, ನೀನು ನೀನಾಗಿರು': ಪೆಪ್ಸಿ ಜಾಹೀರಾತಿನಲ್ಲಿ ರಾಕಿಂಗ್ ಸ್ಟಾರ್ ಯಶ್
ಇಂದು, ಸಂಸತ್ತಿನ ಹೊರಗೆ ನಟಿ ಪರಿಣಿತಿ ಚೋಪ್ರಾ ಬಗ್ಗೆ ರಾಜಕಾರಣಿ ರಾಘವ್ ಚಡ್ಡಾ ಅವರನ್ನು ಪ್ರಶ್ನಿಸಿದಾಗ, ಅವರು ಸಂಕೋಚದಿಂದಲೇ ರಾಜನೀತಿ ಬಗ್ಗೆ ಪ್ರಶ್ನಿಸಿ, ಪರಿಣಿತಿ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ. ಮದುವೆಯ ಪ್ರಶ್ನೆಗೆ ಪ್ರತಿಕ್ರಿಯಿಸಿ ಈ ಬಗ್ಗೆ ಮಾಹಿತಿ ಕೊಟ್ಟೇ ಕೊಡುತ್ತೇನೆ, ಯಾವುದನ್ನೂ ಮುಚ್ಚಿಡುವುದಿಲ್ಲ ಎಂದು ಉತ್ತರಿಸಿದ್ದಾರೆ. ಹಾಗಾಗಿ ಈ ಜೋಡಿ ಪ್ರೀತಿಯಲ್ಲಿದ್ದಾರಾ?, ಮದುವೆ ಆಗಲಿದ್ದಾರಾ? ಎಂಬ ಗುಸು ಗುಸು ಶುರುವಾಗಿದೆ. ಈ ಜೋಡಿ ಮದುವೆಗೆ ಅನೇಕರು ಕಾತುರರಾಗಿದ್ದಾರೆ.
ಇದನ್ನೂ ಓದಿ: ಬಣ್ಣದ ಜಗತ್ತಿನಿಂದ ರಾಜಕೀಯದ ರಣರಂಗಕ್ಕೆ ಧುಮುಕಿದ ಸೆಲೆಬ್ರಿಟಿಗಳಿವರು: ನೆಲೆ ಕಂಡವರೆಷ್ಟು?
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಒಂದು ಸಮಯದಲ್ಲಿ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದರು. ಲೇಡೀಸ್ ವರ್ಸಸ್ ರಿಕಿ ಬಹ್ಲ್, ಇಶ್ಕ್ಜಾದೆ, ಶುದ್ಧ್ ದೇಸಿ ರೊಮ್ಯಾನ್ಸ್, ಹಸೀ ತೋ ಫಸೀ ಇವರ ಮಹಿಳಾ ಪ್ರಧಾನ ಚಿತ್ರಗಳು. ದಿ ಗರ್ಲ್ ಆನ್ ದಿ ಟ್ರೈನ್, ಸಂದೀಪ್ ಔರ್ ಪಿಂಕಿ ಫರಾರ್ ಮತ್ತು ಸೈನಾ ಚಿತ್ರಗಳಲ್ಲಿಯೂ ಅವರು ಅಂತಹದ್ದೇ ಪಾತ್ರಗಳನ್ನು ಮಾಡಿದ್ದಾರೆ. ಮುಂಬರುವ ಚಿತ್ರಗಳಲ್ಲೂ ನಾನು ಮಹಿಳಾ ಪ್ರಧಾನ ಪಾತ್ರಗಳನ್ನೇ ಮಾಡುವುದಾಗಿ ಈ ಹಿಂದೆ ಹೇಳಿಕೊಂಡಿದ್ದರು. ಆದ್ರೆ ಇತ್ತೀಚೆಗೆ ಅವರ ಯಾವುದೇ ಸಿನಿಮಾ ಘೋಷಣೆಯಾಗಿಲ್ಲ.