ETV Bharat / entertainment

'ಆಮ್ ಆದ್ಮಿ' ರಾಘವ್​ ಜೊತೆ ಮದುವೆ ಪ್ರಶ್ನೆಗೆ ನಾಚಿ ನೀರಾದ ಪರಿಣಿತಿ ಚೋಪ್ರಾ - ರಾಘವ್​ ಚಡ್ಡಾ ಮದುವೆ

ಪರಿಣಿತಿ ಚೋಪ್ರಾ ಮುಂಬೈ ಏರ್​ಪೋರ್ಟ್ ಬಳಿ ಕಾಣಿಸಿಕೊಂಡಿದ್ದು, ಪಾಪರಾಜಿಗಳು ಅವರ ಮದುವೆ ಬಗ್ಗೆ ಪ್ರಶ್ನಿಸಿದರು.

Parineeti Chopra Raghav Chadha wedding
ಪರಿಣಿತಿ ಚೋಪ್ರಾ ರಾಘವ್​ ಚಡ್ಡಾ ಮದುವೆ
author img

By

Published : Mar 29, 2023, 12:41 PM IST

ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ಮದುವೆಯ ನಂತರ, ಪರಿಣಿತಿ ಚೋಪ್ರಾ ಮತ್ತು ರಾಘವ್​ ಚಡ್ಡಾ ಮದುವೆ ವಿಚಾರ ಟ್ರೆಂಡ್‌ ಆಗುತ್ತಿದೆ. ಶೀಘ್ರದಲ್ಲೇ ಹಿಂದಿ ಚಿತ್ರರಂಗ ಮತ್ತು ರಾಜಕೀಯ ಗಣ್ಯರ ಒಕ್ಕೂಟಕ್ಕೆ ಸಮಾರಂಭವೊಂದು ಸಾಕ್ಷಿಯಾಗಲಿದೆ ಎನ್ನುವ ಮಾತು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ.

ಮುಂಬೈನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ನಂತರ ಬಾಲಿವುಡ್​​ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ (ಆಮ್​ ಆದ್ಮಿ ಪಾರ್ಟಿ) ಅವರ ವಿವಾಹ ಕುರಿತು ಅಂತೆ ಕಂತೆಗಳು ಹುಟ್ಟಿಕೊಂಡಿವೆ. ಆಮ್ ಆದ್ಮಿ ಪಕ್ಷದ ನಾಯಕರೋರ್ವರು ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ಈ ಜೋಡಿಗೆ ಶುಭ ಹಾರೈಸಿದ ನಂತರ ಪರಿಣಿತಿ ಮತ್ತು ರಾಘವ್ ಅವರ ವಿವಾಹದ ಸುತ್ತಲಿನ ಊಹಾಪೋಹಗಳು ತೀವ್ರಗೊಂಡಿವೆ. ಆದ್ರೆ ವದಂತಿಯ ಪ್ರೇಮ ಕ್ಷಿಗಳು ಇನ್ನೂ ಈ ಸುದ್ದಿಯನ್ನು ದೃಢೀಕರಿಸಿಲ್ಲ. ಸದ್ಯ ಈ ವಿಷಯದ ಬಗ್ಗೆ ಮೌನ ವಹಿಸಿದ್ದಾರೆ. ಇವೆಲ್ಲದರ ನಡುವೆ ರಾಘವ್ ಜೊತೆ ಮದುವೆಯ ಬಗ್ಗೆ ಪರಿಣಿತಿ ಅವರಿಂದ ಪ್ರತಿಕ್ರಿಯೆ ಪಡೆಯಲು ಪಾಪರಾಜಿಗಳು ಪ್ರಯತ್ನಿಸಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್​ ಆಗುತ್ತಿದೆ.

ಮಂಗಳವಾರ ರಾತ್ರಿ ಪರಿಣಿತಿ ಅವರು ಕತಾರ್‌ನ ದೋಹಾದಿಂದ ಮರಳಿದರು. ಚಿತ್ರವೊಂದರ ಶೂಟಿಂಗ್​ ಮುಗಿಸಿ ಆಗಮಿಸಿದ ನಂತರ, ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಹಿಂದಿ ಚಿತ್ರನಟಿ ಬ್ಲ್ಯಾಕ್​​ ಡ್ರೆಸ್​ನಲ್ಲಿ ಲೇಡಿ ಬಾಸ್​ನಂತೆ ಕಾಣಿಸಿಕೊಂಡಿದ್ದಾರೆ. ಅವರ ಮದುವೆಯ ಬಗ್ಗೆ ಪ್ರತಿಕ್ರಿಯೆ ಪಡೆಯಲು ಉತ್ಸುಕರಾದ ಪಾಪರಾಜಿಗಳು ಮತ್ತು ಅಭಿಮಾನಿಗಳು ನಟಿಯನ್ನು ಸುತ್ತುವರೆದರು. ಈ ಸಂದರ್ಭ ಪರಿಣಿತಿ ಚೋಪ್ರಾ ನಾಚಿ ನೀರಾದರು. ಬಳಿಕ ನಗುತ್ತಾ ಅವರಿಗೆ ಧನ್ಯವಾದ ಅರ್ಪಿಸಿದರು. ಆದ್ರೆ ಮದುವೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ನಾಚಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ರೌಂಡ್ ಹಾಕುತ್ತಿದ್ದು, ಮದುವೆ ಬಗ್ಗೆ ಬಹಳ ಉತ್ಸುಕರಾಗಿದ್ದಾರೆ ಅಭಿಮಾನಿಗಳು. ನಟಿಯ ಮದುವೆ ವಿಚಾರ ನಿಜವಿರಬಹುದು ಎಂದು ಊಹಿಸುತ್ತಿದ್ದಾರೆ.

ಇದನ್ನೂ ಓದಿ: ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಾ ನಟಿ ಪರಿಣಿತಿ ಚೋಪ್ರಾ - ಸಂಸದ ರಾಘವ್ ಚಡ್ಡಾ?

ಪರಿಣಿತಿ, ರಾಘವ್ ಮುಂಬೈನ ರೆಸ್ಟೋರೆಂಟ್‌ನಿಂದ ಹೊರಬರುವಾಗ ಒಟ್ಟಿಗೆ ಕಾಣಿಸಿಕೊಂಡ ನಂತರ ಡೇಟಿಂಗ್ ವದಂತಿಗಳು ಹರಡಲು ಆರಂಭಿಸಿತು. ನಿನ್ನೆ ಆಮ್ ಆದ್ಮಿ ಪಕ್ಷದ ನಾಯಕ ಸಂಜೀವ್ ಅರೋರಾ ಅವರು ತಮ್ಮ ಟ್ವಿಟ್ಟರ್​ನಲ್ಲಿ ಈ ಜೋಡಿಗೆ ಶುಭ ಕೋರಿದ ಬಳಿಕ ಪರಿಣಿತಿ ಮತ್ತು ರಾಘವ್ ಅವರ ವಿವಾಹದ ವದಂತಿಗಳು ಮತ್ತೆ ಹರಡಿಕೊಂಡಿವೆ.

ಇದನ್ನೂ ಓದಿ: ಪರಿಣಿತಿ ಚೋಪ್ರಾ-ರಾಘವ್​ ಚಡ್ಡಾ ಮದುವೆ ವಿಚಾರ: ಶುಭ ಕೋರಿದ ಸಂಸದ

ವರದಿಗಳ ಪ್ರಕಾರ, ಪರಿಣಿತಿಯು ರಾಘವ್ ಅವರನ್ನು ಯುಕೆಯಲ್ಲಿ ತಮ್ಮ ವಿದ್ಯಾಭ್ಯಾಸದ ದಿನಗಳಿಂದಲೂ ತಿಳಿದಿದ್ದಾರೆ. ಇಬ್ಬರೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ಓದುತ್ತಿದ್ದರು ಎನ್ನಲಾಗಿದೆ. ಸ್ನೇಹ ಪ್ರೀತಿಗೆ ತಿರುಗಿದ್ದು, ಮದುವೆ ಹಂತಕ್ಕೆ ತಲುಪಿದ್ದಾರೆಂದು ಜೋಡಿಯ ಆಪ್ತ ಮೂಲಗಳು ತಿಳಿಸಿವೆ. ಇಬ್ಬರ ಕುಟುಂಬಸ್ಥರು ಸಂಪರ್ಕದಲ್ಲಿದ್ದು ಶೀಘ್ರವೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಅಲ್ಲದೇ, ಇತ್ತೀಚೆಗೆ ನಟಿ ಬಾಲಿವುಡ್​ನ ಖ್ಯಾತ ಡಿಸೈನರ್​ ಮನೀಶ್ ಮಲ್ಹೋತ್ರಾ ಅವರನ್ನು ಸಹ ಭೇಟಿ ಆಗಿದ್ದಾರೆ. ಹಾಗಾಗಿ ಮದುವೆ ವದಂತಿ ಮುಂದುವರಿದಿದ್ದು, ಅಧಿಕೃತ ಘೋಷಣೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.