ETV Bharat / entertainment

'ಮೇ ಅಟಲ್ ಹೂ' ತೆರೆಗೆ: ಪ್ರೇಕ್ಷಕರ ವಿಮರ್ಶೆ ಹೀಗಿದೆ - ಪಂಕಜ್​​ ತ್ರಿಪಾಠಿ

ಪಂಕಜ್​ ತ್ರಿಪಾಠಿ ಅಭಿನಯದ 'ಮೇ ಅಟಲ್ ಹೂ' ಸಿನಿಮಾ ಇಂದು ತೆರೆಗಪ್ಪಳಿಸಿದೆ.

Pankaj Tripathi starrer Main Atal Hoon
ಪಂಕಜ್​​ ತ್ರಿಪಾಠಿ ಅಭಿನಯದ ಮೇ ಅಟಲ್ ಹೂ
author img

By ETV Bharat Karnataka Team

Published : Jan 19, 2024, 4:22 PM IST

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನಾಧಾರಿತ ಚಿತ್ರ ಇಂದು ತೆರೆಗಪ್ಪಳಿಸಿದೆ. ರವಿ ಜಾಧವ್ ಆ್ಯಕ್ಷನ್​ ಕಟ್​ ಹೇಳಿರುವ 2024ರ ಬಹುನಿರೀಕ್ಷಿತ ಸಿನಿಮಾ 'ಮೇ ಅಟಲ್ ಹೂ' ಇಂದು ಚಿತ್ರಮಂದಿರ ಪ್ರವೇಶಿಸಿದೆ. ಅಟಲ್ ಬಿಹಾರಿ ವಾಜಪೇಯಿ ಪಾತ್ರಕ್ಕೆ ಪ್ರತಿಭಾನ್ವಿತ ನಟ ಪಂಕಜ್​ ತ್ರಿಪಾಠಿ ಜೀವ ತುಂಬಿದ್ದು, ಇಂಟರ್​ನೆಟ್​ನಲ್ಲಿ ವಿಮರ್ಶೆ ವ್ಯಕ್ತವಾಗಿದೆ. ಆರಂಭಿಕವಾಗಿ, ಚಿತ್ರಕ್ಕೆ ಮತ್ತು ತ್ರಿಪಾಠಿ ಅವರ ಅಭಿನಯಕ್ಕೆ ಬಹುತೇಕ ಮೆಚ್ಚುಗೆ ವ್ಯಕ್ತವಾಗಿದೆ.

ಎಕ್ಸ್ ವಿಮರ್ಶೆ: ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​ ಎಕ್ಸ್​​​ನಲ್ಲಿ ನೆಟಿಜನ್‌ಗಳು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಲೆಜೆಂಡರಿ ಲೀಡರ್​ ಅನ್ನು ತೆರೆ ಮೇಲೆ ಅತ್ಯುತ್ತಮವಾಗಿ ಪ್ರದರ್ಶಿಸಿದ್ದಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ತ್ರಿಪಾಠಿ ಮತ್ತು ತಂಡವನ್ನು ಶ್ಲಾಘಿಸಿದ್ದಾರೆ. ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, "ಪಂಕಜ್ ತ್ರಿಪಾಠಿ ನಟನೆ ಅದ್ಭುತ" ಎಂದು ತಿಳಿಸಿದ್ದಾರೆ.

ಮತ್ತೊಬ್ಬರು ಪ್ರತಿಕ್ರಿಯಿಸಿ "ಮೇ ಅಟಲ್ ಹೂ, ಎಲ್ಲರೂ ನೋಡಲೇಬೇಕಾದ ಸಿನಿಮಾ" ಎಂದು ತಿಳಿಸಿದ್ದಾರೆ. ಚಿತ್ರದ ಕುರಿತು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರೊಬ್ಬರು, "ಮೇ ಅಟಲ್ ಹೂ ವಿಮರ್ಶೆ - ಚಿತ್ರ ಎಲ್ಲರ ಹೃದಯ ಗೆದ್ದಿದೆ. ಅಟಲ್ ಬಿಹಾರಿ ವಾಜಪೇಯಿ ಅವರನ್ನು ತೆರೆ ಮೇಲೆ ಚಿತ್ರಿಸುವುದು ಸುಲಭವಲ್ಲ" ಎಂದು ಬರೆದುಕೊಂಡಿದ್ದಾರೆ.

  • क्या चित्रण , क्या कलाकारी और क्या अन्दाज़ । सिर्फ़ वाह , वाह और वाह। #MainAtalHoon pic.twitter.com/35TODhNFBU

    — Divyanshu Priyam (@DivyanshuPriyam) January 19, 2024 " class="align-text-top noRightClick twitterSection" data=" ">

ಪಂಕಜ್ ತ್ರಿಪಾಠಿ ತಮ್ಮ ಅಮೋಘ ಅಭಿನಯದಿಂದ ಮತ್ತೊಮ್ಮೆ ಸಿನಿಪ್ರಿಯರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. ನಟನ ನಟನೆಗೆ ಪ್ರಶಂಸೆಯ ಮಳೆ ಸುರಿದಿದೆ. ಎಕ್ಸ್​ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, 'ನಾನು ಪಂಕಜ್ ತ್ರಿಪಾಠಿ ನಟನೆ ಬಗ್ಗೆ ವಿಸ್ಮಯಗೊಂಡಿದ್ದೇನೆ. ಅವರು ಎಲ್ಲಾ ಕಲಾವಿದರಿಗೆ ಹೊಸ ಮಾನದಂಡವನ್ನು ನೀಡಿದ್ದಾರೆ' ಎಂದು ತಿಳಿಸಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, ''ಮೇ ಅಟಲ್ ಹೂ - ಪಂಕಜ್ ತ್ರಿಪಾಠಿ ಅವರ ವೃತ್ತಿಜೀವನದ ಈವರೆಗಿನ ಅತ್ಯುತ್ತಮ ಚಿತ್ರ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಮಮಂದಿರ ಸ್ವಚ್ಛಗೊಳಿಸಿದ ನಟ ಜಾಕಿ ಶ್ರಾಫ್​ ವಿಡಿಯೋ ನೋಡಿ

ರವಿ ಜಾಧವ್ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ವಾಜಪೇಯಿ ಅವರ ಜೀವನ ಮತ್ತು ರಾಜಕೀಯವನ್ನು ಆಧರಿಸಿದೆ. ಪಾಕಿಸ್ತಾನದೊಂದಿಗಿನ ಕಾರ್ಗಿಲ್ ಯುದ್ಧ ಮತ್ತು ಪೋಖ್ರಾನ್ ಪರಮಾಣು ಪರೀಕ್ಷೆಗಳು ಸೇರಿದಂತೆ ಕೆಲ ಸಂದಿಗ್ಧ ಸಮಯದಲ್ಲಿ ಭಾರತವನ್ನು ಮುನ್ನಡೆಸುವಲ್ಲಿ, ರೂಪಿಸುವಲ್ಲಿ ವಾಜಪೇಯಿ ಅವರ ಪಾತ್ರವನ್ನು ಈ 137 ನಿಮಿಷಗಳ ಚಲನಚಿತ್ರ ಚಿತ್ರಿಸಿದೆ. ವೈಯಕ್ತಿಕ ಹೋರಾಟಗಳು ಮತ್ತು ಕುಟುಂಬದ ವಿಚಾರಗಳನ್ನೂ ಬಹಿರಂಗಪಡಿಸಿವೆ. ಜೊತೆಗೆ, ಸಾಹಿತ್ಯದ ಮೇಲಿನ ಅವರ ಒಲವನ್ನು ಈ ಚಿತ್ರ ಎತ್ತಿ ಹಿಡಿದಿದೆ.

  • The cinematography in #MainAtalHoonReview is exceptional, capturing the essence of Atal ji's life with precision. A visual treat that adds another layer to this cinematic marvel.

    — Kinjal Negi (@FanclubAlia__) January 19, 2024 " class="align-text-top noRightClick twitterSection" data=" ">

ಇದನ್ನೂ ಓದಿ: ರಾಮನ ಕುರಿತು ಸಂಭಾಷಣೆ ವಿವಾದ: ಕ್ಷಮೆಯಾಚಿಸಿದ ನಯನತಾರಾ

ಅಪರೂಪದ ರಾಜಕೀಯ ಮುತ್ಸದ್ಧಿ ಎಂದೇ ಖ್ಯಾತರಾದ ದಿ. ಅಟಲ್ ಬಿಹಾರಿ ವಾಜಪೇಯಿ ಅವರು ಕವಿ, ರಾಜಕಾರಣಿ ಮತ್ತು ಮಾನವತಾವಾದಿಯಾಗಿ ಗುರುತಿಸಿಕೊಂಡಿದ್ದರು. ಬಿಜೆಪಿಯ ಪ್ರಭಾವಿ ನಾಯಕರಲ್ಲಿ ಪಾಜಪೇಯಿ ಓರ್ವರಾಗಿದ್ದರು. 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿತ್ತು. ದೇಶದ ಹತ್ತನೇ ಪ್ರಧಾನಿಯಾಗಿ ಅಟಲ್ ಬಿಹಾರಿ ವಾಜಪೇಯಿ ಪ್ರಮಾಣ ವಚನ ಸ್ವೀಕರಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.