ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಪೌರಾಣಿಕ ಚಿತ್ರ 'ಆದಿಪುರುಷ್' ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗಷ್ಟೇ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇದೀಗ ನಿರ್ಮಾಪಕರು ಈ ಚಿತ್ರದ ಬಗ್ಗೆ ಲೇಟೆಸ್ಟ್ ಅಪ್‌ಡೇಟ್ ನೀಡಿದ್ದಾರೆ. ಆದಿಪುರುಷ್ ಟ್ರೇಲರ್ ಇದೇ 9 ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಟ್ರೇಲರ್ ಮುಹೂರ್ತದ ಜೊತೆಗೆ ಹೊಸ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಜೈ ಶ್ರೀ ರಾಮ್ ಬರಹದೊಂದಿಗೆ ಪೋಸ್ಟರ್ ಹಂಚಿಕೊಂಡಿದ್ದು, ರಾಮನಾಗಿ ಪ್ರಭಾಸ್ ಆಕಾಶದತ್ತ ಬಿಲ್ಲು ಎತ್ತುತ್ತಿರುವ ದೃಶ್ಯ ಕಾಣಬಹುದು. ಹೊಸದಾಗಿ ಬಿಡುಗಡೆಯಾಗಿರುವ ಆದಿಪುರುಷ್ ಪೋಸ್ಟರ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಟ್ರೆಂಡ್ ಆಗಿವೆ. ಇದಕ್ಕೂ ಮೊದಲು ಬಿಡುಗಡೆಯಾಗಿದ್ದ ಪ್ರಭಾಸ್ ಅವರ ಪೋಸ್ಟರ್ಗೂ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
-
Jai Shri Ram
— Om Raut (@omraut) May 6, 2023 " class="align-text-top noRightClick twitterSection" data="
जय श्री राम
జై శ్రీరాం
ஜெய் ஸ்ரீ ராம்
ಜೈಶ್ರೀರಾಂ
ജയ് ശ്രീറാം
Trailer releasing on 9th May 2023#Adipurush #Prabhas #SaifAliKhan @kritisanon @mesunnysingh #BhushanKumar #KrishanKumar @vfxwaala @rajeshnair06 @DevdattaGNage @AjayAtulOnline @manojmuntashir pic.twitter.com/WxkpGGrg6P
">Jai Shri Ram
— Om Raut (@omraut) May 6, 2023
जय श्री राम
జై శ్రీరాం
ஜெய் ஸ்ரீ ராம்
ಜೈಶ್ರೀರಾಂ
ജയ് ശ്രീറാം
Trailer releasing on 9th May 2023#Adipurush #Prabhas #SaifAliKhan @kritisanon @mesunnysingh #BhushanKumar #KrishanKumar @vfxwaala @rajeshnair06 @DevdattaGNage @AjayAtulOnline @manojmuntashir pic.twitter.com/WxkpGGrg6PJai Shri Ram
— Om Raut (@omraut) May 6, 2023
जय श्री राम
జై శ్రీరాం
ஜெய் ஸ்ரீ ராம்
ಜೈಶ್ರೀರಾಂ
ജയ് ശ്രീറാം
Trailer releasing on 9th May 2023#Adipurush #Prabhas #SaifAliKhan @kritisanon @mesunnysingh #BhushanKumar #KrishanKumar @vfxwaala @rajeshnair06 @DevdattaGNage @AjayAtulOnline @manojmuntashir pic.twitter.com/WxkpGGrg6P
70 ದೇಶಗಳಲ್ಲಿ ಟ್ರೇಲರ್ ಬಿಡುಗಡೆ: ಆದಿಪುರುಷ್ ಚಿತ್ರವು ಭಾರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಸಿನಿಮಾದ ಟ್ರೇಲರ್ ಅನ್ನು ಅದ್ದೂರಿಯಾಗಿ ರಿಲೀಸ್ ಮಾಡಲು ಚಿತ್ರತಂಡ ಯೋಜಿಸಿದೆ. ಹೌದು. ಭಾರತ ಮಾತ್ರವಲ್ಲದೇ ವಿಶ್ವದ 70 ದೇಶಗಳಲ್ಲಿ ಟ್ರೇಲರ್ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಮೂಲಕ ಆದಿಪುರುಷ್ ಟ್ರೇಲರ್ ಕಾರ್ಯಕ್ರಮವು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಲಿದೆ. ಅಲ್ಲದೇ ಟ್ರೇಲರ್ ಅನ್ನು 2ಡಿ ಮತ್ತು 3ಡಿಯಲ್ಲಿ ಥಿಯೇಟರ್ನಲ್ಲಿ ಬಿಡುಗಡೆ ಮಾಡುವ ಯೋಜನೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಪೌರಾಣಿಕ ಸಿನಿಮಾಗಳು: ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..
ಇನ್ನೊಂದೆಡೆ, ಆದಿಪುರುಷ್ ಬಿಡುಗಡೆಗೆ ದಿನ ಸಮೀಪಿಸುತ್ತಿದೆ. ಆದರೂ ಸದ್ಯ ನಿರ್ಮಾಪಕರು ವಿಶುವಲ್ ಎಫೆಕ್ಟ್ಗಳ ಕೆಲಸದಲ್ಲಿ ತೊಡಗಿದ್ದಾರೆ. ಹೀಗಾಗಿ ಅಂತಿಮ ಔಟ್ಪುಟ್ ಮತ್ತಷ್ಟು ಉತ್ತಮವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ನಿರ್ಮಾಪಕರು ಇನ್ನೂ ಸಿನಿಮಾ ವಿಚಾರವಾಗಿ ಕೆಲಸ ಮಾಡುತ್ತಿರುವುದರಿಂದ, ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಡುತ್ತದೆ ಎಂಬ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ನಿರ್ಮಾಪಕರು ಚಿತ್ರದ ಬಿಡುಗಡೆಯ ವೇಳೆಗೆ ಅಂತಿಮ ಆವೃತ್ತಿ ಸಿದ್ಧವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಿರ್ದೇಶಕ ಓವಂ ರಾವತ್ ರಾಮಾಯಣ ಆಧಾರಿತ ಆದಿಪುರುಷ್ ಸಿನಿಮಾ ಮಾಡುತ್ತಿದ್ದಾರೆ. ಟಿ-ಸೀರಿಸ್ ಬ್ಯಾನರ್ ಅಡಿ ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಾಮನಾಗಿ ಪ್ರಭಾಸ್ ಮತ್ತು ಸೀತೆಯಾಗಿ ಕೃತಿ ಸನನ್ ನಟಿಸುತ್ತಿದ್ದಾರೆ. ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರ ನಿರ್ವಹಿಸಿದರೆ, ದೇವದತ್ತ ನಾಗೆ ಹನುಮಂತನ ಪಾತ್ರವನ್ನು ಮಾಡಿದ್ದಾರೆ. ರಾವಣನ ಪಾತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದ್ದು, ಜೂನ್ 16 ರಂದು ವಿಶ್ವಾದ್ಯಂತ ಬಿಡುಗಡೆಯಾಗಲು ಸಿದ್ಧಗೊಳ್ಳುತ್ತಿದೆ. ಈ ಕ್ರಮದಲ್ಲಿ ಚಿತ್ರತಂಡ ಸಿನಿಮಾ ಪ್ರಮೋಷನ್ ಆರಂಭಿಸಿದೆ. ಹೀಗಾಗಿಯೇ ಚಿತ್ರತಂಡ ಒಂದೊಂದಾಗಿ ಹೊಸ ಪೋಸ್ಟರ್ ಮತ್ತು ನ್ಯೂ ಅಪ್‌ಡೇಟ್ ಅನ್ನು ಪ್ರೇಕ್ಷಕರ ಮುಂದೆ ತರುತ್ತಿದೆ.
ಇದನ್ನೂ ಓದಿ: ಟ್ರಿಬೆಕಾ ಫಿಲ್ಮ್ ಫೆಸ್ಟಿವಲ್ನಲ್ಲಿ ವರ್ಲ್ಡ್ ಪ್ರಿಮಿಯರ್ ಕಾಣಲಿರುವ 'ಆದಿಪುರುಷ್' ಚಿತ್ರ