ಕನ್ನಡತಿ ಶ್ರೀಲೀಲಾ ಮತ್ತು ಸೌತ್ ಸಿನಿಮಾ ರಂಗದ ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಸ್ಕಂದ'. ಬೋಯಾಪಾಟಿ ಶ್ರೀನು ಆ್ಯಕ್ಷನ್ ಕಟ್ ಹೇಳಿರುವ ಹೈ ವೋಲ್ಟೇಜ್ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಸೆಪ್ಟೆಂಬರ್ 15 ರಂದು ತೆರೆಕಾಣಲು ಸಜ್ಜಾಗಿರುವ ಸ್ಕಂದ ಸಿನಿಮಾದ ಟ್ರೇಲರ್ ನಿನ್ನೆ ಅದ್ಧೂರಿ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದೆ.
- " class="align-text-top noRightClick twitterSection" data="">
ಸ್ಕಂದ ಪ್ರೀ ರಿಲೀಸ್ ಈವೆಂಟ್: ಪ್ಯಾನ್ ಇಂಡಿಯಾ ಸಿನಿಮಾ ಕುರಿತು ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. ಆಗಸ್ಟ್ 26ರಂದು ಹೈದರಾಬಾದ್ನಲ್ಲಿ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಡೆದಿದೆ. ಬಹಳ ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಜನಪ್ರಿಯ ನಟ ಬಾಲಕೃಷ್ಣ ಆಗಮಿಸಿದ್ದರು.
ಸೆಪ್ಟೆಂಬರ್ 15 ರಂದು ಚಿತ್ರಮಂದಿರಗಳಲ್ಲಿ ಸ್ಕಂದ ತೆರೆಗೆ: ಟಾಲಿವುಡ್ ಸ್ಟಾರ್ ಹಿರೋ ರಾಮ್ ಪೋತಿನೇನಿ ಮತ್ತು ಬೋಯಾಪಾಟಿ ಶ್ರೀನು ಕಾಂಬೋದ ಸಿನಿಮಾದಲ್ಲಿ ಬಹುಭಾಷಾ ಸೆನ್ಸೇಶನಲ್ ತಾರೆ ಶ್ರೀಲೀಲಾ ಬಣ್ಣ ಹಚ್ಚಿದ್ದಾರೆ. ಬಹುಭಾಷಾ ಸಿನಿಮಾ ಸೆಪ್ಟೆಂಬರ್ 15 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಕೆಲವೇ ದಿನಗಳು ಬಾಕಿ ಉಳಿದಿದ್ದು, ಚಿತ್ರತಂಡ ಭರ್ಜರಿ ಪ್ರಚಾರ ಪ್ರಾರಂಭಿಸಿದೆ. ಪ್ರೀ ರಿಲೀಸ್ ಈವೆಂಟ್ನಲ್ಲಿ ಟ್ರೇಲರ್ ಅನಾವರಣಗೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆನ್ಲೈನ್ನಲ್ಲಿಯೂ ಸ್ಕಂದ ಸಿನಿಮಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ.
ಸರಣಿ ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿ: ನಟಿ ಶ್ರೀಲೀಲಾ ವಯಸ್ಸು ಕೇವಲ 22. ಕಿರಿವಯಸ್ಸಿನಲ್ಲೇ ಸಖತ್ ಸ್ಟಾರ್ ಡಮ್ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಏಕೈಕ ನಟಿ ಇವರು. ಯಶಸ್ವಿ ವೃತ್ತಿಜೀವನ ಮುನ್ನಡೆಸುತ್ತಿರುವ ಈ ಸೆನ್ಸೇಶನಲ್ ಸ್ಟಾರ್ ಕೈಯಲ್ಲಿ ಸುಮಾರು 10 ಚಿತ್ರಗಳಿವೆ. ಸ್ಕಂದ ಸಿನಿಮಾದಿಂದ ಪ್ರಾರಂಭಗೊಂಡು ಬಂದರ ಹಿಂದೆ ಒಂದರಂತೆ 5 ಸಿನಿಮಾಗಳು ತೆರೆಕಾಣಲಿವೆ.
ಇದನ್ನೂ ಓದಿ: ONAM 2023: ಅವಳಿ ಮುದ್ದು ಮಕ್ಕಳೊಂದಿಗೆ ವಿಘ್ನೇಶ್ ಶಿವನ್-ನಯನತಾರ ದಂಪತಿಯ ಓಣಂ ಸಂಭ್ರಮ!
ಬಹುನಿರೀಕ್ಷಿತ 'ಸ್ಕಂದ' ಸಿನಿಮಾ ಮುಂದಿನ ಸೆಪ್ಟೆಂಬರ್ 15ಕ್ಕೆ, ವೈಷ್ಣವ್ ತೇಜ್ ಜೊತೆಗಿನ ಆದಿಕೇಶವ ಸಿನಿಮಾ ಆಗಸ್ಟ್ 18ಕ್ಕೆ, ಬಾಲಕೃಷ್ಣ ಅವರೊಂದಿಗಿನ ಭಗವಂತ್ ಕೇಸರಿ ಅಕ್ಟೋಬರ್ 19ಕ್ಕೆ, ನಿತಿನ್ ಜೊತೆಗಿನ ಎಕ್ಸ್ಟ್ರಾ ಡಿಸೆಂಬರ್ 23ಕ್ಕೆ, ಮಹೇಶ್ ಬಾಬು ಜೊತೆಗಿನ ಗುಂಟೂರು ಕಾರಂ 2023ರ ಜನರವರಿ 13ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಹೀಗೆ ಒಂದರ ಹಿಂದೆ ಒಂದರಂತೆ ಸಿನಿಮಾ ಬಿಡುಗಡೆ ಆಗುತ್ತಿದ್ದು, ಬಹುಶಃ ಇದೇ ಮೊದಲು. ಅದರಲ್ಲೂ ಈ ಕಿರಿವಯಸ್ಸಿನಲ್ಲೇ ದೊಡ್ಡ ಮಟ್ಟದ ಜನಪ್ರಿಯತೆ ಸಂಪಾದಿಸಿದ್ದಾರೆ ನಟಿ ಶ್ರೀಲೀಲಾ.
ಇದನ್ನೂ ಓದಿ: ಅದ್ಧೂರಿಯಾಗಿ ವರಮಹಾಲಕ್ಷ್ಮಿ ಹಬ್ಬಾಚರಿಸಿದ ಯಶ್ ರಾಧಿಕಾ ದಂಪತಿ: Photos!