ETV Bharat / entertainment

ರಾಣ ಚಿತ್ರೀಕರಣ: ನೋಡಿ ಪಡ್ಡೆಹುಲಿ ಶ್ರೇಯಸ್​ನ ಬೊಂಬಾಟ್ ಆ್ಯಕ್ಷನ್ ವಿಡಿಯೋ - Raana movie updates

ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಾಯಕನಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ರಾಣ ಚಿತ್ರದ ಆ್ಯಕ್ಷನ್ ಮೇಕಿಂಗ್ ವಿಡಿಯೋ ಅನಾವರಣಗೊಂಡಿದೆ.

Paddehuli Shreyas action videos from Raana movie
ಪಡ್ಡೆಹುಲಿ ಶ್ರೇಯಸ್​ನ ಬೊಂಬಾಟ್ ಆ್ಯಕ್ಷನ್
author img

By

Published : Nov 3, 2022, 4:48 PM IST

ಸ್ಯಾಂಡಲ್‌ವುಡ್‌ನ ಹಿರಿಯ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಾಯಕನಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ರಾಣ. ಹಾಡು, ಆ್ಯಕ್ಷನ್ ಟ್ರೈಲರ್​ನಿಂದಲೇ ಗಾಂಧಿ ನಗರದಲ್ಲಿ ಟಾಕ್ ಆಗುತ್ತಿರುವ ರಾಣ ಸಿನಿಮಾ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದೆ. ಪಡ್ಡೆಹುಲಿ ಶ್ರೇಯಸ್ ಸಾಕಷ್ಟು ತಯಾರಿ ಮಾಡಿಕೊಂಡು ಅಭಿನಯಿಸಿರೋ ಚಿತ್ರವಿದು.

ಈ ಕಾರಣಕ್ಕೆ ರಾಣ ಚಿತ್ರ ಶ್ರೇಯಸ್ ಸಿನಿಮಾ ಕೆರಿಯರ್​​ಗೆ ಹೊಸ ತಿರುವು ಕೊಡುವ ಚಿತ್ರ ಆಗಲಿದೆ ಅನ್ನೋದು ಟ್ರೈಲರ್ ನೋಡಿದವರ ಮಾತು. ಇದೀಗ ರಾಣ ಚಿತ್ರತಂಡ ಆ್ಯಕ್ಷನ್ ಮೇಕಿಂಗ್ ವಿಡಿಯೋವೊಂದನ್ನು ರಿವೀಲ್ ಮಾಡಿ ಪ್ರೇಕ್ಷಕರ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ಪಡ್ಡೆಹುಲಿ ಶ್ರೇಯಸ್​ನ ಬೊಂಬಾಟ್ ಆ್ಯಕ್ಷನ್

ಸದ್ಯ ಅನಾವರಣ ಆಗಿರೋ ಆ್ಯಕ್ಷನ್ ಮೇಕಿಂಗ್ ವಿಡಿಯೋ ನೋಡಿದರೆ ಸಾಕಷ್ಟು ಬಾರಿ ಆ್ಯಕ್ಷನ್ ಸನ್ನಿವೇಶಗಳಿಗೆ ಶ್ರೇಯಸ್ ಪ್ರಾಕ್ಟೀಸ್ ಮಾಡಿ ಫೈಟ್ ಮಾಡಿರೋದು ಗೊತ್ತಾಗುತ್ತದೆ. ನಿರ್ದೇಶಕ ನಂದ ಕಿಶೋರ್ ಹಾಗೂ ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್ ಕೂಡ ಈ ಭರ್ಜರಿ ಆ್ಯಕ್ಷನ್ ಸೀನ್​ಗಳಿಗಾಗಿ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ.

ಸಾಹಸ ನಿರ್ದೇಶಕರಾದ ರವಿವರ್ಮ ಹಾಗೂ ಚೇತನ್ ಈ ಆ್ಯಕ್ಷನ್ ಸನ್ನಿವೇಶಗಳನ್ನು ಕಂಪೋಸ್ ಮಾಡಿದ್ದಾರೆ. ಸ್ಟಂಟ್ ಮಾಸ್ಟರ್ಸ್ ಹೇಳಿದಂತೆ ಶ್ರೇಯನ್ ಮಂಜು ಕೂಡ ಬಹಳ ಎಫರ್ಟ್ ಹಾಕಿ ಫೈಟ್ ಸೀನ್​​ಗಳನ್ನು ಉತ್ತಮವಾಗಿ ಮಾಡಿದ್ದಾರೆ.

ಮಾಸ್ ಟೈಟಲ್​​ನಿಂದಲೇ ಕ್ರೇಜ್ ಹುಟ್ಟಿಸಿರೋ ರಾಣ ಸಿನಿಮಾ ಕಂಪ್ಲೀಟ್ ಲವ್ ಸ್ಟೋರಿ ಜೊತೆಗೆ ಆ್ಯಕ್ಷನ್ ಸಿನಿಮಾ. ಈ ಚಿತ್ರದಲ್ಲಿ ಶ್ರೇಯಸ್ ಮಂಜು ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ರೀಷ್ಮಾ ನಾಣಯ್ಯ ಹಾಗು ರಜನಿ ಭಾರದ್ವಾಜ್ ಅವರು ಶ್ರೇಯಸ್​ ಅವರೊಂದಿಗೆ ರೊಮ್ಯಾಂಟಿಕ್​ ಸೀನ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೇಯಸ್, ರೀಷ್ಮಾ ನಾಣಯ್ಯ ಅಲ್ಲದೇ ಈ ಚಿತ್ರದಲ್ಲಿ ಕೋಟೆ ಪ್ರಭಾಕರ್, ಅಶೋಕ್, ರಘು ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.

ಇದನ್ನೂ ಓದಿ: 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರಕ್ಕೆ ನಟಿ ರಮ್ಯಾ ಸಾಥ್

ಪೊಗರು ಸಿನಿಮಾ ಬಳಿಕ ನಂದ ಕಿಶೋರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಚಂದನ್ ಶೆಟ್ಟಿ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕ್ಯಾಮಾರಮ್ಯಾನ್ ಶೇಖರ್ ಚಂದ್ರ ಈ ಚಿತ್ರಕ್ಕೆ ಬಹಳ ಅದ್ಭುತ ಕ್ಯಾಮರಾ ವರ್ಕ್ ಮಾಡಿದ್ದಾರೆ. ಕೆ.ಮಂಜು ಅವರ ಸಹಕಾರದಿಂದ ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ.

ಸದ್ಯ ಹಾಡುಗಳು ಹಾಗೂ ಟ್ರೈಲರ್​​ನಿಂದಲೇ ಸ್ಯಾಂಡಲ್​ವುಡ್​ನಲ್ಲಿ ಗೆಲ್ಲುವ ಸೂಚನೆ ನೀಡುತ್ತಿರೋ ಈ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಾಳೆ ನಡೆಯಲಿದೆ. ಇದೇ ನವೆಂಬರ್ 11ಕ್ಕೆ ರಾಣ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದ್ದು, ಶ್ರೇಯಸ್ ಮಂಜುಗೆ ಈ ಚಿತ್ರ ಒಳ್ಳೆ ಹೆಸರು ತಂದುಕೊಡುವ ಎಲ್ಲ ಲಕ್ಷಣಗಳು ಕಾಣ್ತಾ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.