ETV Bharat / entertainment

ಪದವಿ ಪೂರ್ವ 'ವಿದ್ಯಾರ್ಥಿಗಳಿಗೆ' ಅಭಿಷೇಕ್ ಅಂಬರೀಶ್ ಸಾಥ್‌ - padavi poorva cast

ಹೊಸ ಪ್ರತಿಭೆಗಳ ಪದವಿ ಪೂರ್ವ ಟ್ರೈಲರ್​ ಅನ್ನು ನಟ ಅಭಿಷೇಕ್ ಅಂಬರೀಶ್ ಬಿಡುಗಡೆ ಮಾಡಿ ತಂಡಕ್ಕೆ ಆಲ್​ ದಿ ಬೆಸ್ಟ್ ಹೇಳಿದರು.

padavi poorva trailer
ಪದವಿ ಪೂರ್ವ ಟ್ರೈಲರ್ ರಿಲೀಸ್
author img

By

Published : Dec 25, 2022, 12:28 PM IST

ಕನ್ನಡ ಚಿತ್ರರಂಗಕ್ಕೀಗ ಉತ್ತಮ ಕಾಲ. ಹೊಚ್ಚ ಹೊಸ ಕಥಾ ಹಂದರವಿರುವ ಸಿನಿಮಾಗಳು ಬರುತ್ತಿವೆ. ಜೊತೆಗೆ ಹೊಸಬರಿಗೆ ಅವಕಾಶ ಕೂಡ ಸಿಗುತ್ತಿದೆ. ಇದರ ನಡುವೆ, ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಹುಟ್ಟಿಸಿರುವ ಹೊಸ ಪ್ರತಿಭೆಗಳ ಚಿತ್ರ 'ಪದವಿ ಪೂರ್ವ'. ಹಾಡುಗಳಿಂದ ಚಂದನವನದಲ್ಲಿ ಸದ್ದು ಮಾಡುತ್ತಿರೋ ಈ ಚಿತ್ರದ ಟ್ರೈಲರ್ ಅನ್ನು ಅಭಿಷೇಕ್ ಅಂಬರೀಶ್ ಇತ್ತೀಚೆಗೆ ಬಿಡುಗಡೆ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪದವಿ ಪೂರ್ವ ಟ್ರೈಲರ್​​ ಉತ್ತಮವಾಗಿದೆ: ಪದವಿ ಪೂರ್ವ ಟ್ರೈಲರ್ ಅನಾವರಣ ಮಾಡಿ ಮಾತನಾಡಿದ ನಟ ಅಭಿಷೇಕ್ ಅಂಬರೀಶ್, ಈ ಚಿತ್ರದ ನಾಯಕ ಪೃಥ್ವಿ ಶಾಮನೂರು ಅವರ ಉತ್ಸಾಹ ನೋಡಿದರೆ ಖುಷಿಯಾಗುತ್ತಿದೆ. ಪದವಿ ಪೂರ್ವ ಟ್ರೈಲರ್​​ ಚೆನ್ನಾಗಿದೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ ಹಾಗೂ ರೆಕಾರ್ಡಿಂಗ್ ಅದ್ಭುತ. ಎಲ್ಲಾ ಕಲಾವಿದರ ಅಭಿನಯ ಅಮೋಘವಾಗಿ ಮೂಡಿ ಬಂದಿದೆ. ಹರಿಪ್ರಸಾದ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಯೋಗರಾಜ್ ಭಟ್ ಹಾಗೂ ರವಿ ಶಾಮನೂರು ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಅಂತಾ ಚಿತ್ರತಂಡಕ್ಕೆ ಹಾರೈಸಿದರು.

padavi poorva movie
ಪದವಿ ಪೂರ್ವ ತಂಡ

ಅಭಿಷೇಕ್​ರಿಂದ ಟ್ರೈಲರ್​ ಬಿಡುಗಡೆಗೊಳಿಸುವ ಆಸೆ: ಸಿನಿಮಾ ನಿರ್ಮಾಪಕ ಯೋಗರಾಜ್ ಭಟ್ ಮಾತನಾಡಿ, ಟ್ರೈಲರ್​​ ಅನ್ನು ಅಭಿಷೇಕ್ ಅಂಬರೀಶ್ ಅವರಿಂದ ಬಿಡುಗಡೆ ಮಾಡಿಸಬೇಕೆಂಬುದು ನಾನೂ ಸೇರಿದಂತೆ ನಮ್ಮ ಚಿತ್ರ ತಂಡದ ಆಸೆ ಆಗಿತ್ತು. ಟ್ರೈಲರ್​​ ಬಿಡುಗಡೆ ಮಾಡಿಕೊಟ್ಟ ಅಭಿಷೇಕ್ ಅವರಿಗೆ ಧನ್ಯವಾದ. ಹೊಸ ತಂಡ ಹೊಸ ತರಹದ ಪ್ರಮೋಷನ್ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಪದವಿ ಪೂರ್ವ ಪ್ರಚಾರ: ಯುವ ನಟ ಪೃಥ್ವಿ ಶಾಮನೂರು ಮಾತನಾಡಿ, ಅಭಿಷೇಕ್ ಅಂಬರೀಶ್ ಟ್ರೈಲರ್​ ಬಿಡುಗಡೆ ಮಾಡಿಕೊಟ್ಟಿದ್ದು ನಾನು ಸೇರಿದಂತೆ ಇಡೀ ಚಿತ್ರರಂಗಕ್ಕೆ ತುಂಬಾ ಸಂತೋಷವಾಗಿದೆ. ಪ್ರಮೋಷನ್​​ಗಾಗಿ ರಾಜ್ಯದ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದೇವೆ. ಹೋದ ಕಡೆಯೆಲ್ಲಾ ನಮ್ಮನ್ನು ಗುರುತಿಸಿ, ಚಿತ್ರದ ಹಾಡುಗಳು ಹಾಗೂ ಟೀಸರ್ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಚಿತ್ರ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಎಲ್ಲರ ಬೆಂಬಲ ಇರಲಿ ಎಂದು ತಿಳಿಸಿದರು.

ಇದನ್ನೂ ಓದಿ: 2022ರಲ್ಲಿ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಟ್ಟ ಸ್ಟಾರ್ ಕಿಡ್ಸ್​​..

ಚಿತ್ರತಂಡದಲ್ಲಿ ಇರುವವರು..: ಪೃಥ್ವಿ ಶಾಮನೂರು ಜೋಡಿಯಾಗಿ ಅಂಜಲಿ ಅನೀಶ್ ಅಭಿನಯಿಸಿದ್ದಾರೆ. ಇದರ ಜೊತೆಗೆ ಯಶಾ ಶಿವಕುಮಾರ್ ಕೂಡ ಗೆಳತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಸಂತೋಷ ರೈ ಪಾತಾಜೆ ಕ್ಯಾಮಾರಾ ವರ್ಕ್ ಮಾಡಿದ್ದು, ಧನಂಜಯ್ ಈ ಸಿನಿಮಾದಲ್ಲಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಯೋಗರಾಜ್ ಭಟ್ ಜೊತೆ ಹಲವಾರು ವರ್ಷಗಳಿಂದ ಕೆಲಸ ಮಾಡಿರುವ ಹರಿ ಪ್ರಸಾದ್ ಜಯಣ್ಣ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಯೋಗರಾಜ್ ಭಟ್ ಹಾಗೂ ನಿರ್ಮಾಪಕ ರವಿ ಶಾಮನೂರು ಸಹಯೋಗದಲ್ಲಿ ಪದವಿ ಪೂರ್ವ ಸಿನಿಮಾ ನಿರ್ಮಾಣ ಆಗಿದೆ. ಸದ್ಯ ಅನಾವರಣಗೊಂಡಿರುವ ಪದವಿ ಪೂರ್ವ ಟ್ರೈಲರ್ ಇಂಪ್ರೆಸ್​​ ಆಗಿದ್ದು ಇವತ್ತಿನ ಯುವ ಜನಾಂಗದವರಿಗೆ ಇಷ್ಟು ಆಗುವ ಎಲ್ಲಾ ಲಕ್ಷಣಗಳು ಕಾಣ್ತಾ ಇದೆ. ಡಿಸೆಂಬರ್ 30 ರಂದು ಈ ಚಿತ್ರ ಪ್ರೇಕ್ಷಕರ ಮುಂದೆ ಬರಲಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ: 2022 ಸಾಲಿನಲ್ಲಿ ದಾಂಪತ್ಯ ಜೀವನ ಆರಂಭಿಸಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.