ETV Bharat / entertainment

ಒಂದಾನೊಂದು ಕಾಲದಲ್ಲಿ ಸ್ಟಾರ್​ ಆಗಿದ್ದೆ, ಆದರೆ...; ಬಾಬಿ ಡಿಯೋಲ್​ ಮನದಾಳದ ಮಾತು - 90ರ ದಶಕದಲ್ಲಿ ಯಶಸ್ವಿ ನಟನಾಗಿ ಗುರುತಿಸಿಕೊಂಡಿದ್ದ

ಸ್ಟಾರ್ ​ಡಮ್​ ಎಂಬುದು ದೀರ್ಘ ಕಾಲ ಇರುವಂತಹದ್ದಲ್ಲ. ನಾನು ಒಂದು ಕಾಲದ ಸ್ಟಾರ್​. ಆದರೆ ಇದೀಗ ಆ ಕಾಲ ಮುಗಿದಿದೆ ಎಂದು ನಟ ಬಾಬಿ ಡಿಯೋಲ್​ ತಿಳಿಸಿದ್ದಾರೆ.

Once upon a time I was a star, but...; Bobby Deols heartfelt speech

author img

By

Published : Apr 10, 2023, 3:38 PM IST

ಹೈದರಾಬಾದ್​: ಸಿನಿಮಾ ಕುಟುಂಬದ ಹಿನ್ನೆಲೆಯನ್ನು ಹೊಂದಿದ್ದರೂ ಬಾಬಿ ಡಿಯೋಲ್​ ಸಿನಿ ಜೀವನ ತಂದೆಯಷ್ಟು ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ. 90ರ ದಶಕದಲ್ಲಿ ಯಶಸ್ವಿ ನಟನಾಗಿ ಗುರುತಿಸಿಕೊಂಡಿದ್ದ ನಟ ಬಾಬಿ ಡಿಯೋಲ್​ ಅವರ ಒಂದು ತಪ್ಪು ಆಯ್ಕೆ ಅವರಿಂದ ಎಲ್ಲವನ್ನೂ ಕಸಿಯಿತು. ಬಾಬಿಯ ಗುಡ್​ ಲುಕ್​, ಕೌಟುಂಬಿಕ ಹಿನ್ನೆಲೆ ಮತ್ತು ಸಾಮರ್ಥ್ಯಗಳೆಲ್ಲವೂ ಅವರ ವೃತ್ತಿ ಜೀವನ ಕೈ ಹಿಡಿಯಲು ಸಹಾಯ ಮಾಡಲಿಲ್ಲ.

ಇದೀಗ ಮತ್ತೆ ತಮ್ಮ ವೃತ್ತಿ ಜೀವನದ ಯಶಸ್ಸಿಗೆ ಮುಂದಾಗಿರುವ ನಟ ಬಾಬಿ ಡಿಯೋಲ್​, ಬಹು ನಟರ ಜೊತೆ ಒಟಿಟಿ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಲು ಮುಂದಾಗಿದ್ದಾರೆ. ಇದೇ ವೇಳೆ ತಮ್ಮ ಸಿನಿ ಜೀವನದ ಏರಿಳಿತಗಳ ಬಗ್ಗೆ ಅವರು ಮಾತನಾಡಿದ್ದಾರೆ. 1970ರ ದಶಕದಲ್ಲಿ ಸಿನಿ ಪಯಣ ಆರಂಭಿಸಿದ ಅವರು ಒಂದು ಕಾಲದ ಸ್ಟಾರ್​ ನಟರಾಗಿದ್ದರು. ಆದರೆ, ತಮಗೆ ಅವಕಾಶಗಳ ಕೊರತೆ ಎದುರಾಗಿರುವ ಕುರಿತು ಕೂಡ ಮನ ಬಿಚ್ಚಿ ಮಾತನಾಡಿದ್ದಾರೆ.

ಇತ್ತೀಚಿಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾನು ಸೋತರೆ ನನ್ನ ಪೋಷಕರು ಜೊತೆ ನಿಲ್ಲುತ್ತಾರೆ ಎಂಬುದು ತಿಳಿದಿತ್ತು. ಆದರೆ, ಎಷ್ಟೇ ಸೌಕರ್ಯಗಳೂ ಇದ್ದರೂ, ಎಷ್ಟೇ ಪ್ರೀತಿಸುವರು ಜೊತೆಗೆ ಇದ್ದರೂ ಸೋಲು ನೋವುಂಟು ಮಾಡುತ್ತದೆ ಎಂದಿದ್ದಾರೆ. ಇದೇ ವೇಳೆ, ಯಾರು ಬಂದಿರದಂತೆ ಆ ಸೋಲಿನಿಂದ ಎದ್ದು ನಿಂತು ತನ್ನ ಕಾಲ ಮೇಲೆ ನಿಲ್ಲುವ ವಿಶ್ವಾಸವೂ ತಮಗೆ ಗೊತ್ತಿತ್ತು ಎಂದಿದ್ದಾರೆ 54 ವರ್ಷದ ನಟ.

ಸ್ಟಾರ್ ​ಡಮ್​ ಎಂಬುದು ದೀರ್ಘ ಕಾಲ ಇರುವಂತಹದ್ದಲ್ಲ. ನಾನು ಒಂದು ಕಾಲದ ಸ್ಟಾರ್​. ಅದು ಇದೀಗ ಆ ಕಾಲ ಮುಗಿದಿದೆ. ಅದು ಸಂಪೂರ್ಣವಾಗಿ ನಾಶವಾಗಿದೆ. ನಟನಾಗಿ ಯಾರು ಕೂಡ ನನ್ನನ್ನು ಗಂಭೀರವಾಗಿ ಪರಿಗಣಿಸಿಲ್ಲ. ನನಗೆ ಗೊತ್ತು ನನ್ನ ಸಾಮರ್ಥ್ಯ. ಆದರೆ, ನನಗೆ ಯಾರೂ ಅವಕಾಶ ನೀಡಲಿಲ್ಲ. ನನಗೆ ಸೂಕ್ತವಲ್ಲದ ಕೆಲಸಗಳನ್ನು ನಾನು ಆಯ್ಕೆ ಮಾಡಿದೆ. ಇದರಿಂದ ಎಲ್ಲವೂ ತಪ್ಪಾಯಿತು ಎಂದಿದ್ದಾರೆ.

ನನ್ನ ಸಿನಿಮಾಗಳು ಹಿಟ್​ ಆಗದೇ ಹೋದಾಗ ಯಾರು ಕೂಡ ನನ್ನನ್ನು ಹಾಕಿಕೊಂಡು ಕೆಲಸ ಮಾಡಲು ಮುಂದಾಗಲಿಲ್ಲ. ಆದರೆ, ಜೀವನದ ಬಗ್ಗೆ ಇದ್ದ ನನ್ನ ಸಕಾರಾತ್ಮಕತೆಯಿಂದಾಗಿ ನಾನು ಇಲ್ಲಿಯವರೆಗೆ ಬಂದಿದ್ದೇನೆ. ನಾನು ನನಗಾಗಿ ಕೆಲಸ ಮಾಡಿದೆ. ನನ್ನಲ್ಲಿನ ನಟನನ್ನು ಮತ್ತೆ ಹುಡುಕಿದೆ ಇದರಿಂದ ಕೆಲಸದ ಬಗ್ಗೆ ಆಕರ್ಷಿತನಾಗಿದ್ದು, ಅದಕ್ಕೆ ಒಗ್ಗಿಕೊಂಡೆ.

ಬಾಬಿ ಡಿಯೋಲ್​ ನಟ ಧರ್ಮೇಂದ್ರ ಅವರ ಎರಡನೇ ಮಗನಾಗಿದ್ದು, ಕಡೆಯದಾಗಿ ಲವ್​ ಹೊಸ್ಟ್ರೆಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೊಡಕ್ಷನ್​ನಲ್ಲಿ ಅನೇಕ ಕೆಲಸದ ಬಗ್ಗೆ ಬ್ಯುಸಿ ಇದ್ದಾರೆ. ನಟ ರಣಬೀರ್​ ಕಪೂರ್​ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್​ ಚಿತ್ರದಲ್ಲಿ ಇದೀಗ ಬಾಬಿ ಡಿಯೋಲ್​ ಮತ್ತೆ ಸಿನಿಮಾ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಇದರ ಜೊತೆಗೆ ತೆಲುಗಿನಲ್ಲಿ ಪವನ್​ ಕಲ್ಯಾಣ್​ ಅಭಿನಯದ ಹರಿ ಹರ ವೀರ ಮಲ್ಲಿ ಅಲ್ಲಿ ಕೂಡ ನಟಿಸಿದ್ದಾರೆ.

ಇದನ್ನೂ ಓದಿ: ಮಹೇಶ್​ ಬಾಬು ಕಿಲ್ಲಿಂಗ್​ ಲುಕ್​ಗೆ ಹೆಂಡತಿ ನಮ್ರತಾ ಕಮೆಂಟ್​; 'ಟಾಲಿವುಡ್​ನ ಗ್ರೀಕ್​ ದೇವತೆ' ಎಂದ ಅಭಿಮಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.