ETV Bharat / entertainment

ಸಂಕ್ರಾಂತಿ ಹಬ್ಬದ ದಿನ ಸೆಟ್ಟೇರಲಿದೆ ಸನ್ನಿದಾನ ಪಿ ಒ.. ವಿಶೇಷ ಪಾತ್ರದಲ್ಲಿ ತಮಿಳಿನ ಹಾಸ್ಯ ನಟ ಯೋಗಿ ಬಾಬು, ಪ್ರಮೋದ್ ಶೆಟ್ಟಿ

author img

By

Published : Jan 12, 2023, 9:20 PM IST

ಶಬರಿ ಮಲೆಯ ಸನ್ನಿದಾನದಲ್ಲಿ ನಿರ್ಮಾಪಕ ಮಧುಸುಧನ್ ರಾವ್ ನಿರ್ಮಾಣದ ಸನ್ನಿದಾನ ಪಿ ಒ ಚಿತ್ರವೂ ಸಂಕ್ರಾಂತಿ ಹಬ್ಬದ ದಿನ ಸೆಟ್ಟೇರಲಿದೆ. ಕನ್ನಡ,ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

Tamil comedian Yogi Babu, producer Madhusudhan Rao
ತಮಿಳಿನ ಹಾಸ್ಯ ನಟ ಯೋಗಿ ಬಾಬು, ನಿರ್ಮಾಪಕ ಮಧುಸುಧನ್ ರಾವ್

ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗಿ ಬಿಡುಗಡೆ ಆಗುವ ಟ್ರೆಂಡ್ ಶುರುವಾಗಿದೆ. ಇದೀಗ ತೂತು ಮಡಿಕೆ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಜರ್ನಿ ಆರಂಭಿಸಿ,ಗುರುತಿಸಿಕೊಂಡಿರುವ ನಿರ್ಮಾಪಕ ಮಧುಸೂಧನ್ ರಾವ್ ಅವರು ಬಿಗ್ ಪ್ರಾಜೆಕ್ಟ್ ಈ ಸಲ ಕೈಗೆತ್ತಿಕೊಂಡಿದ್ದಾರೆ.

ಈ ಬಾರಿ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿರುವುದು ಅಭಿಮಾನಗಳಲ್ಲಿ ಕುತೂಹಲ ಹೆಚ್ಚಿಸಿದೆ. ನಿರ್ಮಾಪಕ ಮಧುಸೂಧನ್ ರಾವ್ ಅವರು ಈ ಚಿತ್ರಕ್ಕೆ ಸನ್ನಿದಾನ ಪಿ ಒ ಎಂದು ಶೀರ್ಷಿಕೆ ಇಡಲಾಗಿದ್ದು, ಸಂಕ್ರಾಂತಿ ಹಬ್ಬದ ದಿನ ಸಿನಿಮಾ ಶಬರಿ ಮಲೆಯ ಸನ್ನಿದಾನದಲ್ಲಿ ಸೆಟ್ಟೇರಲಿದೆ. ಸನ್ನಿದಾನ ಪಿ ಒ ಚಿತ್ರ ಡಿವೈನ್ ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡಿದ್ದು, ಮಲಯಾಳಂ ನಿರ್ದೇಶಕ ರಾಜೀವ್ ವೈದ್ಯ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ತಮಿಳಿನ ಪ್ರಖ್ಯಾತ ಹಾಸ್ಯ ನಟ ಯೋಗಿ ಬಾಬು ಹಾಗೂ ಸ್ಯಾಂಡಲ್ ವುಡ್ ಪ್ರತಿಭಾವಂತ ಕಲಾವಿದ ಪ್ರಮೋದ್ ಶೆಟ್ಟಿ ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಸೌತ್ ಸಿನಿ ದುನಿಯಾದ ಸ್ಟಾರ್ ನಟ ಹಾಗೂ ನಟಿ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದು, ಸದ್ಯದಲ್ಲೇ ಚಿತ್ರದ ತಾರಾ ಬಳಗ, ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ಹಂಚಿಕೊಳ್ಳೋದಾಗಿ ನಿರ್ಮಾಪಕ ಮಧುಸೂಧನ್ ಮಾಹಿತಿ ತಿಳಿಸಿದ್ದಾರೆ. ಈ ಚಿತ್ರವೂ ಹೊಸ ಅಭಿರುಚಿಯಲ್ಲಿ ಮೂಡಿ ಬರಲಿದ್ದು, ಪ್ರೇಕ್ಷಕರಿಗೆ ಮನರಂಜನೆ ನೀಡುವ ಜತೆಗೆ ವಿಭಿನ್ನ ಸ್ಟೋರಿಯೂ ಮನಗೆಲ್ಲಲಿದೆ.

ಈ ಸಿನಿಮಾದ ಆಹ್ವಾನ ಪತ್ರಿಕೆ ಬಹಳ ವಿಭಿನ್ನದಿಂದ ಕೂಡಿದೆ. ಪೋಸ್ಟ್ ಕಾರ್ಡ್ ರೀತಿಯಲ್ಲಿ ಆಹ್ವಾನ ಕಾರ್ಡ್ ಮಾಡಲಾಗಿದೆ. ಈ ಚಿತ್ರದಲ್ಲಿ ತಮಿಳಿನ ಹಾಸ್ಯ ನಟ ಯೋಗಿ ಬಾಬು ಹಾಗೂ ಪ್ರಮೋದ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ,ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಸರ್ವತ ಸಿನಿ ಗ್ಯಾರೇಜ್, ಶಿಮೊಗ್ಗ ಕ್ರಿಯೇಷನ್ಸ್ ಬ್ಯಾನರ್ ಜೊತೆಗೂಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಮಧುಸೂಧನ್ ರಾವ್ ಹಾಗೂ ಶಬೀರ್ ಪಠಾನ್ ಈ ಬಿಗ್ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ವಿನೋಧ್ ಭಾರತಿ ಛಾಯಾಗ್ರಹಣ ಚಿತ್ರಕ್ಕಿದೆ. ಜನವರಿ 14 ಎಂದರೆ ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾ ಸೆಟ್ಟೇರಲಿದೆ.

ಉತ್ತಮ ರೆಸ್ಪಾನ್ಸ್: ತೂತು ಮಡಿಕೆ’ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಆ ಸ್ಪೂರ್ತಿಯಿಂದಲೇ ಮತ್ತೊಂದು ಸಿನಿಮಾ ನಿರ್ಮಿಸಲೂ ಮುಂದಾಗಿದ್ದೇನೆ. ಸನ್ನಿದಾನ ಪಿ ಒ ಎಂದು ಶೀರ್ಷಿಕೆ ಇಡಲಾಗಿದ್ದು ಸಂಕ್ರಾಂತಿ ಹಬ್ಬದ ದಿನ ಸಿನಿಮಾ ಶಬರಿ ಮಲೆಯ ಸನ್ನಿದಾನದಲ್ಲಿ ಸಿನಿಮಾ ಚಿತ್ರೀಕರಣ ಆರಂಭಿಸಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಬರೀ ಹೊಸಬರಿಂದ ಮೂಡಿ ಬರುತ್ತಿಲ್ಲ. ತಂಡ ಹೊಸಬರದ್ದೇ ಆಗಿದ್ದರೂ ಹಿರಿಯ ಹಾಗೂ ಸ್ಟಾರ್‌ ನಟರು ಸಾಥ್‌ ನೀಡಿದ್ದಾರೆ‌ ಎಂದು ಮಧುಸೂಧನ್ ರಾವ್ ಮಾಹಿತಿ ಹಂಚಿಕೊಂಡಿದ್ದಾರೆ.

'ತೂತು ಮಡಿಕೆ' ಸಿನಿಮಾ ಟೈಟಲ್‌ ಮೂಲಕ ಕನ್ನಡಿಗರ ಗಮನ ಸೆಳೆದಿತ್ತು. ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಟೈಟಲ್‌ ಅಡಿ, ಟ್ರೆಂಡಿಂಗ್‌ ಕಥೆಗಳನ್ನ ಹಿಡಿದು ಬರುವ ಹೊಸಬರ ತಂಡಗಳು ಸಾಕಷ್ಟು ಯಶಸ್ಸು ಗಳಿಸುತ್ತಿವೆ. ಸದ್ಯ 'ಸನ್ನಿದಾನ ಪಿ ಒ' ಕೂಡ ಅದೇ ರೀತಿ ಪ್ರೇಕ್ಷಕರ ಗಮನ ಸೆಳೆಯಲಿದೆ ಎಂದು ತಿಳಿಸಿದ್ದಾರೆ.

ಇದನ್ನೂಓದಿ: ಸಿಎಂ ಬೊಮ್ಮಾಯಿ ನಿವಾಸಕ್ಕೆ ಶಿವರಾಜ್ ಕುಮಾರ್ ದಂಪತಿ ಭೇಟಿ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.