ETV Bharat / entertainment

OMG 2 box office collection: ₹50 ಕೋಟಿ ದಾಟಿದ ಬಾಲಿವುಡ್​ ಕಿಲಾಡಿಯ​ 'ಓಎಂಜಿ 2' ಕಲೆಕ್ಷನ್​

OMG 2: 'ಓಎಂಜಿ 2' ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಒಟ್ಟು 54.61 ಕೋಟಿ ರೂ. ಕಲೆಕ್ಷನ್​ ಮಾಡಿದೆ.

OMG 2
'ಓಎಂಜಿ 2'
author img

By

Published : Aug 15, 2023, 12:37 PM IST

ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್ ನಟನೆಯ 'ಓಎಂಜಿ 2' ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸನ್ನಿ ಡಿಯೋಲ್​ ಅವರ 'ಗದರ್​ 2'ಗೆ ಪೈಪೋಟಿ ನೀಡುತ್ತಿದೆ. ಇವೆರಡು ಚಿತ್ರಗಳು ಥಿಯೇಟರ್​ಗಳಲ್ಲಿ ಸಿನಿ ಪ್ರೇಮಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಕಲೆಕ್ಷನ್​ ವಿಚಾರದಲ್ಲಿ 'ಗದರ್​ 2' ವೇಗದ ಓಟ ಮುಂದುವರೆಸಿದರೆ, 'ಓಎಂಜಿ 2' ತಕ್ಕ ಮಟ್ಟಿಗೆ ಗಳಿಕೆ ಕಂಡಿದೆ. 'ಓಎಂಜಿ 2' ಬಿಡುಗಡೆಯಾದ ನಾಲ್ಕು ದಿನಗಳಲ್ಲಿ 50 ಕೋಟಿ ರೂಪಾಯಿಗಳನ್ನು ದಾಟಿದೆ.

ಆಗಸ್ಟ್​ 14, ಸೋಮವಾರದಂದು ಅಕ್ಷಯ್​ ಕುಮಾರ್ ನಟನೆಯ 'ಓಎಂಜಿ 2' ಮಹತ್ವದ ಮೈಲಿಗಲ್ಲನ್ನು ತಲುಪಿದೆ. ಮೊದಲ ಭಾನುವಾರ ಅಕ್ಷಯ್ ಕುಮಾರ್, ಯಾಮಿ ಗೌತಮ್ ಮತ್ತು ಪಂಕಜ್ ತ್ರಿಪಾಠಿ ಅಭಿನಯದ ಚಿತ್ರ OMG 2 ಹೌಸ್‌ಫುಲ್ ಆಗಿತ್ತು. ಬಿಡುಗಡೆಯಾದ ಮೂರನೇ ದಿನ ಚಿತ್ರದ ಕಲೆಕ್ಷನ್​ನಲ್ಲಿ ಭಾರೀ ಬದಲಾವಣೆ ಕಂಡು ಬಂದಿತ್ತು. ಆರಂಭಿಕ ಅಂದಾಜಿನ ಪ್ರಕಾರ OMG 2 ಬಿಡುಗಡೆಯಾದ ಮೂರನೇ ದಿನ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 18 ಕೋಟಿ ರೂಪಾಯಿ ಗಳಿಸಿತ್ತು. ಚಿತ್ರದ ಒಟ್ಟು ಕಲೆಕ್ಷನ್ 43 ಕೋಟಿ ರೂಪಾಯಿಗೆ ಏರಿಕೆ ಆಗಿತ್ತು.

4ನೇ ದಿನದ ಕಲೆಕ್ಷನ್​ ಎಷ್ಟು?: ಇದೀಗ ನಾಲ್ಕನೇ ದಿನದ ಕಲೆಕ್ಷನ್​ನೊಂದಿಗೆ ಚಿತ್ರವು 50 ಕೋಟಿ ರೂಪಾಯಿಯನ್ನು ಮೀರಿದೆ. ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್​ ಪ್ರಕಾರ, ಚಿತ್ರವು ಬಿಡುಗಡೆಯಾದ ನಾಲ್ಕನೇ ದಿನ 11.50 ಕೋಟಿ ರೂ. ಗಳಿಸಿದೆ. ಈ ಮೂಲಕ ಸಿನಿಮಾವು ಈವರೆಗೆ ಒಟ್ಟು 54.61 ಕೋಟಿ ರೂ. ಕಲೆಕ್ಷನ್​ ಮಾಡಿದೆ.

ಇದನ್ನೂ ಓದಿ: ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸುತ್ತಿವೆ ಬ್ಲಾಕ್​ಬಸ್ಟರ್​ ಸೀಕ್ವೆಲ್​ಗಳು: OMG 2 vs Gadar 2 ಕಲೆಕ್ಷನ್ ಹೀಗಿದೆ​ ನೋಡಿ..

'ಓಎಂಜಿ 2' ಚಿತ್ರ ತನ್ನ ಆರಂಭಿಕ ದಿನದಲ್ಲಿ 10.26 ಕೋಟಿ ರೂಪಾಯಿ ಗಳಿಸಿತ್ತು. ಬಿಡುಗಡೆಯಾದ ಎರಡನೇ ದಿನವೇ ಚಿತ್ರ 15.30 ಕೋಟಿ ಗಳಿಸಿತ್ತು. ಭಾನುವಾರದಂದು 18 ರೂಪಾಯಿ ಕಲೆಕ್ಷನ್​ ಮಾಡಿತ್ತು. ಮೂರು ದಿನ ಗಳಿಸಿದ ನಂತರ ಚಿತ್ರದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ 43 ಕೋಟಿ ರೂಪಾಯಿ. ಸದ್ಯ ಚಿತ್ರ 54.61 ಕೋಟಿ ರೂಪಾಯಿ ಗಳಿಕೆ ಮಾಡಿದಂತಾಗಿದೆ.

ಓಎಂಜಿ 2 ಹಿಂದಿ ಚಿತ್ರರಂಗದ ಸೂಪರ್​ ಹಿಟ್​ ಚಿತ್ರದ ಸೀಕ್ವೆಲ್. ಅಕ್ಷಯ್​ ಕುಮಾರ್‌ರೊಂದಿಗೆ​ ಪ್ರಮುಖ ಪಾತ್ರದಲ್ಲಿ ಪಂಕಜ್​ ತ್ರಿಪಾಠಿ ಮತ್ತು ಯಾಮಿ ಗೌತಮ್​ ನಟಿಸಿದ್ದಾರೆ. ಈ ಚಿತ್ರವು ದೊಡ್ಡ ಪರದೆಯ ಮೇಲೆ ಬಿಡುಗಡೆಯಾಗುವ ಮೊದಲು ಹಲವಾರು ಸಮಸ್ಯೆಗಳನ್ನು ಎದುರಿಸಿತು. ಎಲ್ಲಾ ಕಷ್ಟಗಳನ್ನು ಎದುರಿಸಿದ ಈ ಚಿತ್ರ ಹಿಟ್ ಆಗುವತ್ತ ಸಾಗುತ್ತಿದೆ. ಅದೇ ಸಮಯದಲ್ಲಿ, ಅಕ್ಷಯ್ ಕುಮಾರ್ ಅವರು ಸತತ 5 ಫ್ಲಾಪ್ ಚಿತ್ರಗಳ ನಂತರ ಪುನರಾಗಮನ ಮಾಡುತ್ತಿರುವುದು ಗಮನಾರ್ಹ.

ಇದನ್ನೂ ಓದಿ: ತೆರೆಕಂಡ ಎರಡೇ ದಿನದಲ್ಲಿ 83 ಕೋಟಿ ರೂ. ಸಂಪಾದಿಸಿದ ಗದರ್ 2: ಓಎಂಜಿ 2 ಕಲೆಕ್ಷನ್​?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.