ETV Bharat / entertainment

ರಣವೀರ್ ಸಿಂಗ್ ಬೆತ್ತಲೆ ಫೋಟೋ ಪ್ರಕರಣ: ಮುಂಬೈ ಪೊಲೀಸರಿಂದ ನಟನಿಗೆ ಸಮನ್ಸ್ - ಈಟಿವಿ ಭಾರತ ಕರ್ನಾಟಕ

ಬಾಲಿವುಡ್ ನಟ ರಣವೀರ್ ಸಿಂಗ್ ಬೆತ್ತಲೆ ಫೋಟೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

Ranveer Nude photoshoot
Ranveer Nude photoshoot
author img

By

Published : Aug 12, 2022, 7:33 PM IST

ಮುಂಬೈ(ಮಹಾರಾಷ್ಟ್ರ): ಮ್ಯಾಗಜೀನ್​​ಗೋಸ್ಕರ ಬೆತ್ತಲೆ ಫೋಟೋಶೂಟ್ ಮಾಡಿಸಿಕೊಂಡು ಇಕ್ಕಟ್ಟಿಗೆ ಸಿಲುಕಿರುವ ಬಾಲಿವುಡ್ ನಟ ರಣವೀರ್​ ಸಿಂಗ್​​​ಗೆ ಇದೀಗ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಆಗಸ್ಟ್​​ 22ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಮುಂಬೈ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 292, 293 ಹಾಗೂ 509ರ ಅಡಿಯಲ್ಲಿ ‘ಗಲ್ಲಿ ಬಾಯ್​’ ನಟನ ವಿರುದ್ಧ ಕೇಸ್​ ದಾಖಲಾಗಿತ್ತು. ಜನರ ಭಾವನೆಗಳಿಗೆ ನೋವುಂಟು ಮಾಡಿರುವ ಕಾರಣ ಆಗಸ್ಟ್​ 22ರಂದು ವಿಚಾರಣೆಗೆ ಹಾಜರಾಗುವಂತೆ ಚೆಂಬೂರ್​ ಪೊಲೀಸರು ಸೂಚಿಸಿದ್ದಾರೆ.

ಹೆಚ್ಚು ಹಣ ಗಳಿಸುವ ಉದ್ದೇಶದಿಂದ ರಣವೀರ್ ಸಿಂಗ್​ ಮ್ಯಾಗಜಿನ್​​ಗೋಸ್ಕರ ಬೆತ್ತಲೆ ಪೋಸ್ ನೀಡಿದ್ದು, ಆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಮೂಲಕ ಮಕ್ಕಳು, ಮಹಿಳೆಯರು ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಿದ್ದಾರೆಂದು ದೂರು ನೀಡಲಾಗಿತ್ತು.

ಇದನ್ನೂ ಓದಿ: Ranveer Nude photoshoot: ನಗ್ನ ಫೋಟೋಶೂಟ್​ ಆಪತ್ತು.. ರಣವೀರ್​ ವಿರುದ್ಧ FIR

ದೂರುದಾರರ ಪರ ವಕೀಲ ಅಖಿಲೇಶ್ ಚೌಬೇ ಮಾತನಾಡಿ, "ಬಹುತೇಕ ಚಿಕ್ಕಮಕ್ಕಳು ನಟನ ಅಭಿಮಾನಿಗಳಾಗಿದ್ದಾರೆ. ವರು ಮೊಬೈಲ್ ಕೂಡ ಬಳಸುತ್ತಾರೆ. ರಣವೀರ್ ಅವರ ಇಂಥ ಚಿತ್ರಗಳನ್ನು ನೋಡಿದರೆ ಆ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವಾಗಬಹುದು. ಇದು ಖಂಡಿತವಾಗಿಯೂ ತಪ್ಪು ಸಂದೇಶ ರವಾನಿಸಬಹುದು. ಅದಕ್ಕಾಗಿಯೇ ನಾವು ದೂರು ಸಲ್ಲಿಸಿದ್ದೇವೆ. ನಟನ ಬಂಧನವೂ ಆಗಲಿ" ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.