ದೆಹಲಿಯಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಒಂದು ತಿಂಗಳಿನಿಂದ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಬೆಂಬಲಿಸಿ ಕಮಲ ಹಾಸನ್ ಟ್ವೀಟ್ ಮಾಡಿದ್ದು, ಈಗ ಚಿತ್ರರಂಗದ ಮೀ ಟೂ ಪ್ರಕರಣ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ. ಕಮಲ ಹಾಸನ್ ಟ್ವೀಟ್ಗೆ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಮೀ ಟೂ ವಿಚಾರವನ್ನು ಪ್ರಸ್ತಾಪಿಸಿ ಪ್ರತಿಕ್ರಿಯಿಸಿದ್ದಾರೆ.
-
5 years of a singer in Tamilnadu being banned for naming a molester right in front of their eyes and not a pip about it since the poettu has their respect.
— Chinmayi Sripaada (@Chinmayi) May 25, 2023 " class="align-text-top noRightClick twitterSection" data="
How does one trust politicians who speak for women’s safety while they ignore harassment right under their noses?
Just.… https://t.co/RLrQiuPlgT
">5 years of a singer in Tamilnadu being banned for naming a molester right in front of their eyes and not a pip about it since the poettu has their respect.
— Chinmayi Sripaada (@Chinmayi) May 25, 2023
How does one trust politicians who speak for women’s safety while they ignore harassment right under their noses?
Just.… https://t.co/RLrQiuPlgT5 years of a singer in Tamilnadu being banned for naming a molester right in front of their eyes and not a pip about it since the poettu has their respect.
— Chinmayi Sripaada (@Chinmayi) May 25, 2023
How does one trust politicians who speak for women’s safety while they ignore harassment right under their noses?
Just.… https://t.co/RLrQiuPlgT
ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ಇತರರು ಮಹಿಳಾ ಅಥ್ಲೀಟ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಮೇಲೆ ಎಫ್ಐಆರ್ ದಾಖಲಾದರೂ ಬಂಧಿಸಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಂಧನ ಮಾಡುವ ವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಕಮಲ ಹಾಸನ್ ಟ್ವಿಟರ್ನಲ್ಲಿ "ಕುಸ್ತಿಪಟಗಳ ಪ್ರತಿಭಟನೆಗೆ 1 ತಿಂಗಳಾಗಿದೆ. ರಾಷ್ಟ್ರೀಯ ಕೀರ್ತಿಗಾಗಿ ಹೋರಾಡುವ ಬದಲು ವೈಯಕ್ತಿಕ ಸುರಕ್ಷತೆಗಾಗಿ ಹೋರಾಡುತ್ತಿದ್ದಾರೆ. ಭಾರತೀಯರೇ ನಾವೆಲ್ಲರೂ ಇವರ ಕಡೆ ಗಮನ ಹರಿಸಬೇಕಿದೆ. ನಮ್ಮ ರಾಷ್ಟ್ರೀಯ ಕ್ರೀಡಾ ಐಕಾನ್‌ಗಳು ಮತ್ತು ರಾಜಕಾರಣಿಗಳಲ್ಲಿ ಯಾರು ಹೆಚ್ಚಿನ ಅಪರಾಧ ಇತಿಹಾಸ ಹೊಂದಿರುವವರು?" ಎಂದು ಪ್ರಶ್ನಿಸಿ, #IStandWithMyChampions #WrestlersProtest ಎಂದು ಹ್ಯಾಷ್ ಟ್ಯಾಗ್ಬಳಸಿದ್ದಾರೆ.
ಈ ಟ್ವೀಟ್ ರೀಟ್ವಿಟ್ ಮಾಡಿರುವ ಗಾಯಕಿ ಚಿನ್ಮಯಿ ಶ್ರೀಪಾದ, ತಮಿಳುನಾಡಿನಲ್ಲಿ ಒಬ್ಬ ಗಾಯಕಿಯನ್ನು 5 ವರ್ಷಗಳ ಕಾಲ ತಮ್ಮ ಕಣ್ಣಮುಂದೆಯೇ ಕಿರುಕುಳ ಆರೋಪ ಮಾಡಿದ್ದಕ್ಕಾಗಿ ನಿಷೇಧಿಸಲಾಗಿದೆ. ಕವಿಗೆ ಗೌರವ ಇರುವುದರಿಂದ ಅದರ ಬಗ್ಗೆ ಒಂದು ಮಾತನ್ನು ಆಡದೇ ಸುಮ್ಮನಿದ್ದಿರಿ. ತಮ್ಮ ಮೂಗಿನ ನೇರಕ್ಕೆ ಕಿರುಕುಳವನ್ನು ನಿರ್ಲಕ್ಷಿಸಿ ಮಹಿಳೆಯರ ಸುರಕ್ಷತೆಗಾಗಿ ಮಾತನಾಡುವ ರಾಜಕಾರಣಿಗಳನ್ನು ಹೇಗೆ ನಂಬುವುದು? Just. Asking." ಎಂದು ಬರೆದಿದ್ದಾರೆ.
ಈ ಹಿಂದೆ ತಮಿಳು ಗೀತರಚನೆಕಾರ ವೈರಮುತ್ತು ಅವರು ವ್ಯಾಪಾರ ಭೇಟಿಗಳಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಮತ್ತು ಭಾರತದಲ್ಲಿ ಮೀ ಟೂ ಆಂದೋಲನ ನಡೆಯುತ್ತಿದ್ದ ಸಮಯದಲ್ಲಿ ಅದನ್ನು ಈ ಬಗ್ಗೆ ಹೇಳಿಕೊಂಡರೆ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಗಾಯಕಿ ಹೇಳಿದ್ದಾರೆ.
2018 ರಲ್ಲಿ ಚಿತ್ರರಂಗದ ಮೀ ಟೂ ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಲ್ಲಿ ಧ್ವನಿ ಎತ್ತಿದ ಮಹಿಳೆಯರಲ್ಲಿ ಚಿನ್ಮಯಿ ಕೂಡಾ ಒಬ್ಬರು. ಅವರು ತಮ್ಮ ಮೇಲೆ ಇರುವ ಬೇದರಿಕೆ ಮತ್ತು ಅನುಭವಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಅಂದು ಹೇಳಿಕೊಂಡಿದ್ದರು. ಗೀತರಚನಾಕಾರ ವೈರಮುತ್ತು ಅವರು ವೀಜಮಟ್ಟಂ ಸಂಗೀತ ಕಚೇರಿಗಾಗಿ ಸ್ವಿಟ್ಜರ್ಲೆಂಡ್‌ನಲ್ಲಿದ್ದಾಗ 2005 ರಲ್ಲಿ ಅವರು ಲೈಂಗಿಕ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಆದರೆ, ವೈರಮುತ್ತು ಅವರ ಮೇಲೆ ಆರೋಪ ಮಾಡಿದ ಚಿನ್ಮಯಿ ಅವರು ಸುಳ್ಳು ಹೇಳುತ್ತಿದ್ದಾರೆ ಎಂಬು ಬಿಂಬಿಸಲಾಗಿತ್ತು ಎಂದು ಹೇಳಿದ್ದಾರೆ.
ವೈರಮುತ್ತು ವಿರುದ್ಧದ ಆರೋಪದ ಪರಿಣಾಮವಾಗಿ ಚಿನ್ಮಯಿ ಅವರನ್ನು ದಕ್ಷಿಣ ಭಾರತೀಯ ಸಿನಿ, ದೂರದರ್ಶನ ಕಲಾವಿದರು ಮತ್ತು ಡಬ್ಬಿಂಗ್ ಕಲಾವಿದರ ಒಕ್ಕೂಟದಿಂದ ನಿಷೇಧಿಸಲಾಯಿತು. ಆಕೆಯ ನಿಷೇಧವನ್ನು ಇನ್ನೂ ತೆಗೆದುಹಾಕಲಾಗಿಲ್ಲ.
ಇದನ್ನೂ ಓದಿ: ಓಟಿಟಿಯಲ್ಲಿ ಕೇವಲ ಸ್ಟಾರ್ ನಟರ ಸಿನಿಮಾಗಳಿಗೆ ಮಾತ್ರ ಕಿಮ್ಮತ್ತು; ಹೊಸಬರ ಪಾಡೇನು?