ETV Bharat / entertainment

Kangana Ranaut.. 'ಬಿಳಿ ಇಲಿ ರಾಮನ ಪಾತ್ರಕ್ಕೆ ಬೇಡ': ಭಗವಾನ್​ನಂತೆ ಯಶ್​ ಕಾಣುತ್ತಾರೆಂದ ಕಂಗನಾ - ಕಂಗನಾ ಇನ್​ಸ್ಟಾಗ್ರಾಮ್​

ಮತ್ತೊಂದು ರಾಮಾಯಣ ಆಧಾರಿತ ಚಿತ್ರ ರೆಡಿಯಾಗುತ್ತಿದ್ದು, ರಾಮನ ಪಾತ್ರಕ್ಕೆ ರಣ್​ಬೀರ್​​ ಮತ್ತು ರಾವಣನ ಪಾತ್ರಕ್ಕೆ ಯಶ್​ ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ನಟಿ ಕಂಗನಾ ಮಾತನಾಡಿದ್ದಾರೆ.

Kangana Ranaut on Ranbir Kapoor
ರಣ್​ಬೀರ್​ ವಿರುದ್ಧ ಕಂಗನಾ ಹೇಳಿಕೆ
author img

By

Published : Jun 10, 2023, 4:28 PM IST

ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಕಂಗನಾ ರಣಾವತ್ ಕೆಲ ಬಾಲಿವುಡ್ ಸೆಲೆಬ್ರಿಟಿಗಳನ್ನು ಗುರಿಯಾಗಿಸಿ ಟೀಕೆ ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಪ್ರತ್ಯಕ್ಷವಾಗಿ ನಟರ ಹೆಸರನ್ನು ಉಲ್ಲೇಖಿಸಿ ಮಾತನಾಡಿದರೆ, ಹಲವು ಬಾರಿ ಯಾವುದೇ ಹೆಸರನ್ನು ತೆಗೆದುಕೊಳ್ಳದೇ ಪರೋಕ್ಷವಾಗಿ ಟೀಕಿಸುತ್ತಾರೆ.

ಇನ್‌ಸ್ಟಾಗ್ರಾಮ್ ಸ್ಟೋರಿಸ್​ನಲ್ಲಿ, ಮಹಾಕಾವ್ಯ ರಾಮಾಯಣದ ಕುರಿತು ತಯಾರಾಗುತ್ತಿರುವ ಮತ್ತೊಂದು ಚಿತ್ರದಲ್ಲಿ ಭಗವಾನ್ ರಾಮನ ಪಾತ್ರದಲ್ಲಿ ರಣ್​ಬೀರ್ ಕಪೂರ್ ನಟಿಸುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಕಂಗನಾ ಬರೆದುಕೊಂಡಿದ್ದಾರೆ. ಹೆಸರನ್ನು ಉಲ್ಲೇಖಿಸಿಲ್ಲವಾದರೂ ಇದು ಬ್ರಹ್ಮಾಸ್ತ್ರ ನಟ ರಣ್​ಬೀರ್​ ಕಪೂರ್​ ಅವರಿಗೆ ಕೊಟ್ಟಿರುವ ಟಾಂಗ್​ ಎಂದು ಸ್ಪಷ್ಟವಾಗಿದೆ.

ನಿತೇಶ್ ತಿವಾರಿಯವರ ಮುಂದಿನ ಈ ಬಹು ನಿರೀಕ್ಷಿತ ಚಿತ್ರದಲ್ಲಿ ರಣ್​​ಬೀರ್ ಕಪೂರ್​ ಮತ್ತು ಅವರ ಪತ್ನಿ, ನಟಿ ಆಲಿಯಾ ಭಟ್ ರಾಮ-ಸೀತೆ ಪಾತ್ರದಲ್ಲಿ, ರಾವಣನ ಪಾತ್ರದಲ್ಲಿ ರಾಕಿಂಗ್​ ಸ್ಟಾರ್ ಯಶ್​​ ನಟಿಸಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ವರದಿಗಳ ಪ್ರಕಾರ, ಮಧು ಮಾಂಟೇನಾ ಅವರು ಬಂಡವಾಳ ಹೂಡಲಿರುವ ಈ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಯಶ್​ ಅವರ ಜೊತೆ ಮಾತುಕತೆ ನಡೆಯುತ್ತಿದೆ. ರಣ್​​ಬೀರ್ ಈ ಚಿತ್ರಕ್ಕಾಗಿ ಲುಕ್ ಟೆಸ್ಟ್ ಅನ್ನು ಸಹ ನೀಡಿದ್ದಾರೆ ಎಂಬ ಮಾಹಿತಿ ಇದೆ. ಆದ್ರೆ ಅಧಿಕೃತವಾಗಿ ಏನನ್ನೂ ಘೋಷಿಸದಿದ್ದರೂ, ಕಂಗನಾ ಅವರು ರಣ್​​​ಬೀರ್ ಭಗವಾನ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Kangana Ranaut on Ranbir Kapoor
ಕಂಗನಾ ಇನ್‌ಸ್ಟಾಗ್ರಾಮ್ ಸ್ಟೋರಿ

ಕಂಗನಾ ಇನ್‌ಸ್ಟಾಗ್ರಾಮ್ ಸ್ಟೋರಿ: "ನಾನು ಮತ್ತೊಂದು ರಾಮಾಯಣ ಕಥೆಯಾಧಾರಿದ ಬಾಲಿವುಡ್​ ಸಿನಿಮಾ ಬಗ್ಗೆ ಕೇಳುತ್ತಿದ್ದೇನೆ. ಸಿನಿಮಾ ಇಂಡಸ್ಟ್ರಿಯವರ ವಿಚಾರದಲ್ಲಿ ಕುಖ್ಯಾತರಾಗಿರುವ, ಸ್ವಲ್ಪ ಸನ್ ಟ್ಯಾನ್ ಮತ್ತು ಆತ್ಮಸಾಕ್ಷಿಯ ಅಗತ್ಯವಿರುವ ತೆಳ್ಳಗಿನ ಬಿಳಿ ಇಲಿ ಈ ಚಿತ್ರದಲ್ಲಿ ನಟಿಸಲಿದ್ದಾರೆಂದು ಹೇಳಲಾಗುತ್ತಿದೆ. ಸ್ತ್ರೀವಿಷಯ ಮತ್ತು ಮಾದಕ ವ್ಯಸನಕ್ಕೆ ಹೆಸರುವಾಸಿಯಾದ ಅವರು ಸಿನಿಮಾವೊಂದರಲ್ಲಿ (ಯಾರೂ ನೋಡದ ಸಿನಿಮಾ) ತನ್ನನ್ನು ತಾನು ಭಗವಾನ್ ಶಿವ ಎಂದು ಸಾಬೀತುಪಡಿಸಲು ತೀವ್ರವಾಗಿ ಪ್ರಯತ್ನಿಸಿದ ನಂತರ ಈಗ ಭಗವಾನ್ ರಾಮನಾಗಲು ಹೊರಟಿದ್ದಾರೆ. ಸ್ವಯಂ ನಿರ್ಮಿತ ಪ್ರತಿಭಾವಂತ ನಟ ಎಂದು ಕರೆಯಲ್ಪಡುವ ಒಬ್ಬ ದಕ್ಷಿಣದ ಸೂಪರ್‌ಸ್ಟಾರ್, ಒಬ್ಬ ನಿಷ್ಠಾವಂತ ಕುಟುಂಬದ ವ್ಯಕ್ತಿ, ಸಂಪ್ರದಾಯವಾದಿ, ವಾಲ್ಮೀಕಿ ಜಿ ವಿವರಣೆಯ ಪ್ರಕಾರ, ಮೈಬಣ್ಣ, ನಡವಳಿಕೆ ಮತ್ತು ಮುಖದ ವೈಶಿಷ್ಟ್ಯಗಳಲ್ಲಿ ಶ್ರೀರಾಮನಂತೆ ಕಾಣುವ ಆ ನಟನಿಗೆ ರಾವಣನ ಪಾತ್ರವನ್ನು ನೀಡಲು ಮುಂದಾಗುತ್ತಿದ್ದಾರೆ. ಇದು ಯಾವ ರೀತಿಯ ಕಲಿಯುಗ?. ಯಾವುದೇ ಕಾರಣಕ್ಕೂ ತೆಳುವಾಗಿ ಕಾಣುವ ಡ್ರಗ್ಗಿ ಹುಡುಗನು ಲಾರ್ಡ್ ರಾಮನ ಪಾತ್ರವನ್ನು ವಹಿಸಬಾರದು" ಎಂದು ನಟಿ ಕಂಗನಾ ರಣಾವತ್​​ ತಮ್ಮ ಸುದೀರ್ಘ ಬರಹದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಾಮ - ಸೀತೆಯಾಗಿ ರಾಲಿಯಾ, ರಾವಣನ ಪಾತ್ರಕ್ಕೆ ಯಶ್​: ರಾಮಾಯಣ ಆಧಾರಿತ ಮತ್ತೊಂದು ಚಿತ್ರಕ್ಕೆ ತಯಾರಿ?!

ಯಶ್​ ಬಗ್ಗೆ ಗುಣಗಾನ: ಬಹು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ "ಜೈ ಶ್ರೀ ರಾಮ್" ಎಂದು ಬರೆಯುವ ಮೂಲಕ ತಮ್ಮ ಬರಹವನ್ನು ಮುಕ್ತಾಯಗೊಳಿಸಿದರು. ರಣಬೀರ್ ವಿರುದ್ಧ ಕಂಗನಾ ತಮ್ಮ ಅಸಮಾಧಾನವ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ರಣ್​ಬೀರ್​ ವಿರುದ್ಧ ಮಾತನಾಡಿದ ಕಂಗನಾ ಯಶ್​ ಪರ ನಿಂತಿದ್ದಾರೆ. ಭಗವಾನ್ ರಾಮನಂತೆ ಕಾಣುವ ರಾವಣನ ಪಾತ್ರವನ್ನು ಯಶ್‌ಗೆ ನೀಡಿದ್ದಕ್ಕಾಗಿ ಅವರು ತಯಾರಕರ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: Yash Radhika Photos: ಟ್ರೆಡಿಶನಲ್​ ಲುಕ್​ನಲ್ಲಿ ಸ್ಯಾಂಡಲ್​ವುಡ್​ ರಾಕಿಂಗ್​​ ಕಪಲ್​

ಮತ್ತೊಂದು ಇನ್​ಸ್ಟಾ ಸ್ಟೋರಿನಲ್ಲಿ, ಧನುಷ್ ಜೊತೆಗಿನ ಚಿತ್ರವೊಂದನ್ನು ತಿರಸ್ಕರಿಸಿದ್ದಾರೆ ಎಂಬ ವರದಿಯನ್ನು ಸಹ ಟೀಕಿಸಿದ್ದಾರೆ. ತಾತ್ಕಾಲಿಕವಾಗಿ ಡಿ50 ಎಂದು ಹೆಸರಿಡಲಾದ ಚಿತ್ರವನ್ನು ನಟಿ ತಿರಸ್ಕರಿಸಿದ್ದಾರೆ ಎಂದು ಸುದ್ದಿ ಹರಡಿತ್ತು. ಆದ್ರೆ ಆ ಹೇಳಿಕೆಗಳನ್ನು ತಿರಸ್ಕರಿಸಿದ ನಟಿ, ಧನುಷ್ ನನ್ನ ಮೆಚ್ಚಿನ ನಟ ಮತ್ತು ನಾನು ಅವರ ಜೊತೆ ನಟನೆಗೆ ಎಂದಿಗೂ ಬೇಡ ಎನ್ನಲಾರೆ ಎಂದು ಕಂಗನಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.